Advertisement

ಇಂದು ಕೇಂದ್ರದಿಂದ ನೂತನ ಸಚಿವರ ಪಟ್ಟಿ ಬರುವ ನಿರೀಕ್ಷೆ

11:51 PM Aug 18, 2019 | Lakshmi GovindaRaj |

ಬೆಂಗಳೂರು: ಬಿಜೆಪಿ ಸರ್ಕಾರದ ನೂತನ ಸಚಿವರ ಪಟ್ಟಿ ಕೇಂದ್ರದಿಂದ ಸೋಮವಾರ ಸಂಜೆಯೊಳಗೆ ರಾಜ್ಯ ನಾಯಕರಿಗೆ ಬಂದು ತಲುಪುವ ಸಾಧ್ಯತೆ ಇದೆ. ರಾಜ್ಯ ನಾಯಕರ ನಿರೀಕ್ಷೆಯಂತೆ ಭಾನುವಾರವೇ ಪಟ್ಟಿ ಬರಬೇಕಿತ್ತು. ಆದರೆ, ಹಲವು ಕಾರಣಗಳಿಂದ ಕೇಂದ್ರದಿಂದ ಇನ್ನೂ ಪಟ್ಟಿ ಬಂದಿಲ್ಲ. ಹೀಗಾಗಿ, ಸೋಮವಾರ ಸಂಜೆಯೊಳಗೆ ಸಚಿವರ ಪಟ್ಟಿ ಬರುವ ಎಲ್ಲ ಲಕ್ಷಣಗಳಿದ್ದು, ಮಂಗಳವಾರ ಪ್ರಮಾಣವಚನ ನಡೆಯಲಿದೆ. ಪ್ರಮಾಣವಚನ ಮಂಗಳವಾರ ಬೆಳಗ್ಗೆಯೋ ಅಥವಾ ಸಂಜೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Advertisement

ಪೂರ್ವ ನಿಗದಿಯಂತೆ ಪ್ರಮಾಣವಚನ ಮಂಗಳವಾರ ಬೆಳಗ್ಗೆ ನಡೆದರೆ ಮಧ್ಯಾಹ್ನ ಶಾಸಕಾಂಗ ಪಕ್ಷದ ಸಭೆ ನಡೆಯುವ ಸಾಧ್ಯತೆ ಇದೆ. ಒಂದೊಮ್ಮೆ ಸಂಜೆ ಪ್ರಮಾಣವಚನ ಸ್ವೀಕಾರ ಮಾಡಿದರೆ, ಗುರುವಾರ ಅಥವಾ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಅಲ್ಲದೆ ಎರಡು ದಿನಗಳಲ್ಲಿ ಖಾತೆ ಹಂಚಿಕೆ ಪ್ರಕ್ರಿಯೆಯೂ ಮುಗಿಯಲಿದೆ. ಜತೆಗೆ, ಪಕ್ಷೇತರ ಶಾಸಕರಾಗಿರುವ ಎಚ್‌.ನಾಗೇಶ್‌ ಅವರಿಗೂ ಒಂದು ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಬಿಜೆಪಿಯ ಹಿರಿಯ ನಾಯಕರು ಮಾಹಿತಿ ನೀಡಿದ್ದಾರೆ.

ಸಚಿವ ಸ್ಥಾನದ್ದೇ ಚರ್ಚೆ: ಬಿಜೆಪಿ ವಲಯದಲ್ಲಿ ಈಗ ಸಚಿವರು ಯಾರಾಗುತ್ತಾರೆ ಎಂಬ ಚರ್ಚೆ ಆರಂಭವಾಗಿದೆ. ಬಿಜೆಪಿ ಕಾರ್ಯಾಲಯ ಸೇರಿದಂತೆ ಕಾರ್ಯಕರ್ತರ ವಲಯದಲ್ಲಿ ಜಾತಿ ಲೆಕ್ಕಾಚಾರ, ಸಂಘಟನೆ, ಹಿರಿತನ…ಹೀಗೆ ನಾನಾ ವಿಭಾಗದಲ್ಲಿ ಯಾರ್ಯಾರು ಸಚಿವರಾಗಲಿದ್ದಾರೆ ಎಂಬ ಲೆಕ್ಕಾಚಾರಗಳು ಆರಂಭವಾಗಿವೆ. ಕೇಂದ್ರದಿಂದ ಅಂತಿಮ ಪಟ್ಟಿ ಬಂದ ನಂತರವೇ ಇದಕ್ಕೆಲ್ಲ ತೆರೆ ಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next