Advertisement

ಭಾರತದ ಮೂವರಿಗೆ ಗೌರವ

06:00 AM Dec 21, 2018 | |

ಹೂಸ್ಟನ್‌: ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಯುವ ಜನರನ್ನು ಆಧರಿಸಿ ಪ್ರತಿಷ್ಠಿತ ಟೈಮ್‌ ನಿಯತಕಾಲಿಕೆ ಸಿದ್ಧಪಡಿಸಿರುವ “2018ರ ಅತ್ಯಂತ ಪ್ರಭಾವಿ ಯುವ ಜನರ ಪಟ್ಟಿ’ಯಲ್ಲಿ ಭಾರತೀಯ ಸಂಜಾತ ವಿದ್ಯಾರ್ಥಿಗಳಾದ ಕಾವ್ಯಾ ಕೊಪ್ಪರಪು, ರಿಷಬ್‌ ಜೈನ್‌ ಹಾಗೂ ಬ್ರಿಟನ್‌-ಭಾರತೀಯ ಅಮಿಕಾ ಜಾರ್ಜ್‌ ಸ್ಥಾನ ಪಡೆದಿದ್ದಾರೆ. 

Advertisement

ಎಂಟನೇ ತರಗತಿಯಲ್ಲಿ ಓದುತ್ತಿರುವ ರಿಷಬ್‌, ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ ಗುಣಪಡಿಸುವ ಹೊಸ ಸರಳ ಸೂತ್ರವೊಂದನ್ನು ಸಿದ್ಧಪಡಿಸಿದ್ದರೆ, ಹಾರ್ವರ್ಡ್‌ ವಿಶ್ವವಿದ್ಯಾ ಲಯದ ವಿದ್ಯಾರ್ಥಿನಿಯಾಗಿರುವ ಕಾವ್ಯಾ, ಕ್ಯಾನ್ಸರ್‌ಗೆ ತುತ್ತಾಗಿರುವ ಮೆದುಳಿನ ವಿವಿಧ ಗಾತ್ರದ ಅಂಗಾಶಗಳನ್ನು ಕರಾರುವಾಕ್‌ ಆಗಿ ಸ್ಕ್ಯಾನಿಂಗ್‌ ಮಾಡಲು ಸಾಧ್ಯವಾಗುವಂಥ ತಂತ್ರಜ್ಞಾನ ರೂಪಿಸಿದ್ದಾರೆ. 

ಇನ್ನು, ಅಮಿಕಾ ಜಾರ್ಜ್‌ ಅವರು, ಬಡ ಹೆಣ್ಣುಮಕ್ಕಳಿಗೆ ಅವರ ಋತುಚಕ್ರದ ಅವಧಿಯಲ್ಲಿ ಅತ್ಯಗತ್ಯವಾಗಿ ಬೇಕಾಗುವ ಪರಿಕರಗಳನ್ನು ಉಚಿತವಾಗಿ ಲಭ್ಯ ವಾಗುವಂಥ ವ್ಯವಸ್ಥೆಯೊಂದನ್ನು ಆರಂ ಭಿಸಿ ದ್ದಾರೆ. ವಿಶ್ವದ ಕೋಟ್ಯಂತರ ಯುವ ಜನರಿಗೆ ಪ್ರೇರಣೆಯಾಗಬಲ್ಲ ಸಾಧನೆಗಳು ಇವರದ್ದಾಗಿರುವುದರಿಂದ ಇವರನ್ನು ಪ್ರಭಾವಿ ವ್ಯಕ್ತಿಗಳ ಪಟ್ಟಿಗೆ ಸೇರಿಸಲಾಗಿದೆ ಎಂದು “ಟೈಮ್‌’ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next