ಭಾರತದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ವ್ಯಕ್ತಿಗಳಿಗೆ ಗೌರವಾರ್ಥವಾಗಿ ನೀಡುವ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಅರ್ಜುನ ಪ್ರಶಸ್ತಿಯೂ ಒಂದಾಗಿದೆ.
1961ರ ಬಳಿಕ ಕೇಂದ್ರ ಸರಕಾರದ ಯುವ ಮತ್ತು ಕ್ರೀಡಾ ಸಚಿವಾಲಯದಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಕ್ರೀಡಾಳುಗಳಿಗೆ ಅರ್ಜುನ ಪ್ರಶಸ್ತಿ ನೀಡಲಾಗುತ್ತಿದೆ.
5,00,000 ರೂ. ನಗದು ಪುರಸ್ಕಾರದೊಂದಿಗೆ ಅರ್ಜುನನ ಕಂಚಿನ ಪ್ರತಿಮೆಯನ್ನು ಸಾಧಕರಿಗೆ ನೀಡಲಾಗುತ್ತದೆ. ಈವರೆಗೆ ಸುಮಾರು 700 ಪ್ರಶಸ್ತಿಗಳನ್ನು ಹಲವು ಕ್ರೀಡಾ ತಾರೆಗಳಿಗೆ ನೀಡಿ ಪುರಸ್ಕರಿಸಲಾಗಿದೆ.
ಶಿಸ್ತುಬದ್ಧ ನಡವಳಿಕೆ , ನಾಯಕತ್ವ ಗುಣವನ್ನು ಹೊಂದಿರುವವರು ಹಾಗೂ ನಾಲ್ಕು ವರ್ಷದಲ್ಲಿ ಅತ್ಯುತ್ತಮ ಕ್ರೀಡಾ ಸಾಧನೆ ತೋರಿದವರಿಗೆ ಈ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗುತ್ತದೆ. ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಭಾರತಕ್ಕೆ ವಿಶೇಷ ಸ್ಥಾನಮಾನ ಇದೆ.
ಭಾರತದ ಕ್ರಿಕೆಟ್ ಆಟಗಾರರು ಈ ಸಾಧನೆಗೆ ಬಹಳಷ್ಟು ಬಾರಿ ಪಾತ್ರರಾಗಿದ್ದಾರೆ. ದೇಶದ ಕ್ರಿಕೆಟಿಗರು ನಾಯಕತ್ವ ಹಾಗೂ ಶಿಸ್ತಿನ ನಡವಳಿಕೆಯೊಂದಿಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳ ಪಾಲೂದಾರರೂ ಆಗಿದ್ದು, ಅವುಗಳಲ್ಲಿ ಅರ್ಜುನ ಪ್ರಶಸ್ತಿಯೂ ಸೇರಿದೆ.
ಈ ಕೆಳಗೆ ಇಲ್ಲಿನ ತನಕ ಅರ್ಜುನ ಪ್ರಶಸ್ತಿ ಪಡೆದ ಭಾರತೀಯ ಆಟಗಾರರ ಪಟ್ಟಿ ನೀಡಲಾಗಿದೆ.