Advertisement

ಸಿಬಿಐ,ಇ.ಡಿ. ದಾಳಿ: ಯಾರ ಅವಧಿಯಲ್ಲಿ ಎಷ್ಟು?

11:25 PM Sep 20, 2022 | Team Udayavani |

ಕೇಂದ್ರ ಸರಕಾರ ರಾಷ್ಟ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಪ್ರತಿಪಕ್ಷಗಳ ಸದಸ್ಯರನ್ನು ಹತ್ತಿಕ್ಕಲು ಸಿಬಿಐ, ಇ.ಡಿ, ಐ.ಟಿ ಇಲಾಖೆಯನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ ಎಂಬುದು ಆರೋಪ. ಹಾಗಾದರೆ, ಹಿಂದಿನ ಯುಪಿಎ ಸರಕಾರಗಳು, ಎನ್‌ಡಿಎ 1, ಎನ್‌ಡಿಎ 2 ಅವಧಿಯಲ್ಲಿನ ದಾಳಿ ವಿವರ ಇಲ್ಲಿದೆ.

Advertisement

ಒಟ್ಟಾರೆ ನಡೆದಿರುವ ದಾಳಿಗಳು :

(ಎನ್‌ಡಿಎ (2014ರಿಂದ ಇಲ್ಲಿವರೆಗೆ) :

124 :ತನಿಖಾ ಸಂಸ್ಥೆಗಳ ಪರಿಧಿಯೊಳಗಿ­ರುವ ರಾಜಕೀಯ ನೇತಾರರು

118 : ವಿಪಕ್ಷಗಳ ರಾಜಕಾರಣಿಗಳು

Advertisement

06 : ಬಿಜೆಪಿಯ ರಾಜಕಾರಣಿಗಳು

ಯುಪಿಎ 1 ಮತ್ತು 2 (2004ರಿಂದ 2014) :

72: ತನಿಖಾ ಸಂಸ್ಥೆಗಳ ಪರಿಧಿಯೊಳಗಿ­ರುವ ರಾಜಕೀಯ ನೇತಾರರು

43: ವಿಪಕ್ಷಗಳ ರಾಜಕಾರಣಿಗಳು

29: ಕಾಂಗ್ರೆಸ್‌ ಮತ್ತು ಅದರ ಮೈತ್ರಿ ಪಕ್ಷಗಳು

18 ವರ್ಷಗಳಲ್ಲಿ 200 ಮಂದಿ :

2004ರಲ್ಲಿ ಯುಪಿಎ ಸರಕಾರ ಆರಂಭವಾಗಿ, 2014ರಲ್ಲಿ ಎನ್‌ಡಿಎ ಸರ್ಕಾರ ಬಂದ ಮೇಲೆ ಇಲ್ಲಿವರೆಗೆ ದೇಶದ ಸುಮಾರು 200 ರಾಜ ಕಾರಣಿಗಳ ಮೇಲೆ ಸಿಬಿಐ, ಜಾರಿ ನಿರ್ದೇ ಶನಾಲಯ, ಆದಾಯ ತೆರಿಗೆ ಇಲಾಖೆ ಗಳು ದಾಳಿ ಮಾಡಿವೆ. ಕಾಂಗ್ರೆಸ್‌ ಅಧಿಕಾರವಿದ್ದಾಗ, ಬಿಜೆಪಿ ಟಾರ್ಗೆಟ್‌, ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ ಸೇರಿ ವಿಪಕ್ಷಗಳ ಟಾರ್ಗೆಟ್‌ ಮಾಡಿಕೊಳ್ಳುತ್ತಿ­ರುವುದು ಹೆಚ್ಚಾಗಿದೆ. ಆದರೆ, ಎನ್‌ಡಿಎ ಅವಧಿಯಲ್ಲಿ ಹೆಚ್ಚು ದಾಳಿಗಳಾಗಿವೆ ಎಂಬುದನ್ನು ಅಂಕಿ ಅಂಶ ತೋರಿಸುತ್ತಿವೆ.

ಸಿಬಿಐ ಕತ್ತರಿಯೊಳಗಿನ ವಿಪಕ್ಷ ನಾಯಕರು :

ಎನ್‌ಡಿಎ ಅವಧಿ :

ಮುಖ್ಯಮಂತ್ರಿ – 1

ಮಾಜಿ ಸಿಎಂಗಳು – 12

ಸಚಿವರು – 11

ಸಂಸದರು – 34

ಶಾಸಕರು – 27

ಮಾಜಿ ಶಾಸಕರು – 10

ಮಾಜಿ ಸಂಸದರು – 6

ಯುಪಿಎ ಅವಧಿ  :

ಮಾಜಿ ಸಿಎಂಗಳು – 4

ಸಚಿವರು – 2

ಸಂಸದರು – 13

ಶಾಸಕರು – 15

ಮಾಜಿ ಶಾಸಕರು – 1

ಮಾಜಿ ಸಂಸದರು – 3

ತೆಗೆದುಕೊಂಡ ಕ್ರಮಗಳು

ಬಂಧನ – 12

ಚಾರ್ಜ್‌ಶೀಟ್‌ – 30

ಮುಕ್ತಾಯ ವರದಿ – 6

ದೋಷ ಸಾಬೀತು – 6

ನಿರಪರಾಧಿ

ಘೋಷಣೆ/ ಪ್ರಕರಣದಿಂದ ಕೈಬಿಟ್ಟಿದ್ದು – 6

Advertisement

Udayavani is now on Telegram. Click here to join our channel and stay updated with the latest news.

Next