Advertisement

ಹಗಲಿನಲ್ಲೂ ಉರಿಯುವವಿದ್ಯುತ್‌ ಕಂಬದ ದೀಪ!

12:16 PM Dec 04, 2018 | |

ಇಂಚಗೇರಿ: ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಕಣ್ಣುಮುಚ್ಚಾಲೆ ನಿರಂತರ ನಡೆಯುತ್ತದೆ. ವಿದ್ಯುತ್‌ ಇಲ್ಲದೇ ರೈತರು ಪರದಾಡುವುದು ಸಾಮಾನ್ಯ. ಆದರೆ ಹೊರ್ತಿ ಗ್ರಾಮದಲ್ಲಿ ಪ್ರಮುಖ ರಸ್ತೆಯಲ್ಲಿರುವ ಸುಮಾರು 30 ವಿದ್ಯುತ್‌ ಕಂಬಗಳ ದೀಪಗಳು ಹಗಲು ರಾತ್ರಿ ಎನ್ನದೇ ಸತತವಾಗಿ ಉರಿಯುತ್ತಿವೆ.

Advertisement

ಇನ್ನೊಂದು ವಿಶೇಷವೇನೆಂದರೆ ಈ ದೀಪಗಳು ಸುಮಾರು ಒಂದು ವರ್ಷದಿಂದ ಉರಿಯುತ್ತಿವೆ!. ಇದಕ್ಕೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಾವೇ ಕಾರಣ ಎನ್ನಲಾಗಿದೆ.

ವಿದ್ಯುತ್‌ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ನಾಗರಿಕರಿಗೆ ಹೊರೆಯಾಗುತ್ತಿದೆ. ಸುಮಾರು ವರ್ಷಗಳಿಂದ ಮೇಲಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಪಂ ಮಾಜಿ ಸದಸ್ಯ ಶರಣಬಸು ಡೋಣಗಿ ಆರೋಪಿಸಿದ್ದಾರೆ. ಈಗಲಾದರೂ ಹೆಸ್ಕಾಂ ಅಧಿಕಾರಿಗಳು ಇತ್ತ ಗಮನ ಹರಿಸಿ ರಾತ್ರಿ ವೇಳೆಯಲ್ಲಿ ಮಾತ್ರ ದೀಪ ಉರಿಯುವಂತೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next