Advertisement

ಹಾಲಾಡಿ ಬಗ್ಗೆ ಹಗುರ ಮಾತು, ಮತದಾರರಿಂದ ಉತ್ತರ: ರಾಘವೇಂದ್ರ

08:42 AM Oct 31, 2018 | Harsha Rao |

ಕುಂದಾಪುರ: ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇನ್ನಿತರ ಬಿಜೆಪಿ ನಾಯಕರ ಬಗ್ಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಹಗುರ ವಾಗಿ ಮಾತನಾಡುತ್ತಿದ್ದು, ಜನರು ಈ ಚುನಾವಣೆ ಮೂಲಕ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮಾಜಿ ಸಂಸದ, ಶಿವಮೊಗ್ಗ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಅವರು ಮಂಗಳವಾರ ಶಿವಮೊಗ್ಗ ಲೋಕಸಭಾ ಉಪಚುನಾವಣೆಯ ಪ್ರಚಾರಾರ್ಥ ತ್ರಾಸಿಯಲ್ಲಿ ಹಮ್ಮಿಕೊಂಡ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದರು.

ಈ ಉಪ ಚುನಾವಣೆ ಗೆಲುವು 2019ರ ಚುನಾವಣೆಗೆ ಬಿಜೆಪಿ, ಪ್ರಧಾನಿ ಮೋದಿ ಅವರಿಗೆ ಬಲ ತಂದು ಕೊಡಲಿದೆ. ಸಿಗುವ ಅಲ್ಪಾವಧಿಯಲ್ಲಿ ಅನುದಾನ ತಂದು, ಬೈಂದೂರಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು. ಬೈಂದೂರಿನ ಪ್ರಜ್ಞಾವಂತ ಮತದಾರರು ಗೆಲ್ಲಿಸುವ ವಿಶ್ವಾಸವಿದೆ ಎಂದರು.

“ಕೊಟ್ಟರಷ್ಟೇ ಶಾಸಕರಿಂದ ಕೆಲಸ’
ಕೋಟ ಶ್ರೀನಿವಾಸ ಪೂಜಾರಿ ಮಾತ ನಾಡಿ, 5 ತಿಂಗಳಾದರೂ ಸರಕಾರ ಈವರೆಗೆ ಶಾಸಕರಿಗೆ 1 ರೂ. ಅನು ದಾನ ಬಿಡುಗಡೆ ಮಾಡಿಲ್ಲ. ಸರಕಾರ ಕೊಟ್ಟರಷ್ಟೇ ಶಾಸಕರು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ. ಸಿಎಂ ಮಾತಿಗೆ ಡಿಸಿಗಳೇ ಬೆಲೆ ಕೊಡುವುದಿಲ್ಲ. ಮೊದಲು ಮರಳು ಕೊಟ್ಟು ಆಮೇಲೆ ಮಾತನಾಡಿ ಎಂದು ಸವಾಲೆಸೆದರು.
ಬಿ.ಎಂ. ಸುಕುಮಾರ್‌ ಶೆಟ್ಟಿ, ಲಾಲಾಜಿ ಮೆಂಡನ್‌, ಜಯಪ್ರಕಾಶ್‌ ಹೆಗ್ಡೆ ಮಾತನಾಡಿದರು.

ಮಟ್ಟಾರು ರತ್ನಾಕರ ಹೆಗ್ಡೆ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉದಯ್‌ ಕುಮಾರ್‌ ಶೆಟ್ಟಿ, ಶ್ಯಾಮಲಾ ಎಸ್‌. ಕುಂದರ್‌, ಯಶ್‌ಪಾಲ್‌ ಸುವರ್ಣ, ಸಂಧ್ಯಾ ರಮೇಶ್‌, ರವಿ ಅಮೀನ್‌, ಶೇಖರ್‌ ದೇವಾಡಿಗ, ಪ್ರಿಯದರ್ಶಿನಿ ದೇವಾಡಿಗ, ಸುರೇಂದ್ರ ಖಾರ್ವಿ, ರಾಘವೇಂದ್ರ ನೆಂಪು, ಬಾಬು ಹೆಗ್ಡೆ, ಶಂಕರ ಪೂಜಾರಿ, ಶೋಭಾ ಜಿ. ಪುತ್ರನ್‌, ನಾರಾಯಣ ಕೆ. ಗುಜ್ಜಾಡಿ, ಗೋಪಾಲ್‌, ಶರತ್‌ ಕುಮಾರ್‌ ಶೆಟ್ಟಿ, ಗಣೇಶ್‌ ಪೂಜಾರಿ ಉಪಸ್ಥಿತರಿದ್ದರು. 

Advertisement

“ಕುಂಟ-ಕುರುಡ ಸರಕಾರ’
ರಾಜ್ಯದಲ್ಲಿ ಈಗ ಕುಂಟ (ಜೆಡಿಎಸ್‌) ಹಾಗೂ ಕುರುಡ (ಕಾಂಗ್ರೆಸ್‌) ಸರಕಾರ ಆಡಳಿತದಲ್ಲಿದ್ದು, ಈಗಾಗಲೇ ಕುರುಡನಿಗೆ ಸುಸ್ತಾಗಿದ್ದು, ಯಾವಾಗ ಕುಂಟನನ್ನು ಹೆಗಲ ಮೇಲಿನಿಂದ ಇಳಿಸುತ್ತಾನೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ ಮಾಜಿ ಸಚಿವ ಶೃಂಗೇರಿಯ ಎನ್‌. ಜೀವರಾಜ್‌, ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ 5 ತಿಂಗಳು 15 ದಿನಗಳಿಂದ ಸೊರಬ ಬಿಟ್ಟು ವಿದೇಶಕ್ಕೆ ಹೋದ ಮಧು ಬಂಗಾರಪ್ಪ ಅವರಿಗೆ ತನಗೆ ಮತ ನೀಡಿದ ಕಾರ್ಯಕರ್ತರ ಕಾಳಜಿಯಿಲ್ಲ ಎಂದವರು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next