Advertisement
ನನಗೆ ಬಸ್ಸಿನ ಪ್ರಯಾಣದ ಮಜಾ ಆರಂಭವಾದುದು ಮೂರು ವರ್ಷದ ಪದವಿಗಾಗಿ ಮಂಗಳೂರಿಗೆ ಸೇರಿದ ನಂತರ. ಅದಕ್ಕಿಂತ ಮೊದಲು ಶಾಲೆಯು ಕಾಲು ಗಂಟೆಯ ದಾರಿಯಾದುದರಿಂದ ನಡೆದುಕೊಂಡು ಹೋಗುವುದು ಅಭ್ಯಾಸ. ಈಗಲೂ ನಡಿಗೆಯೆಂದರೆ ಬಹಳ ಪ್ರೀತಿ.
Related Articles
Advertisement
ನಂತರದಲ್ಲಿ ನನಗಿಷ್ಟವಾದ ಡ್ರೈವರ್‌ನ ವಿರುದ್ಧದಲ್ಲಿರುವ ಉದ್ದ ಸೀಟು. ಅದು ಸಿನಿಮಾ ಟಾಕೀಸ್‌ನಲ್ಲಿ ಸಿನಿಮಾ ನೀಡಿದ ಅನುಭವ ನೀಡುತ್ತದೆ. ಅದರಲ್ಲಿ ಎಲ್ಲವೂ ಸ್ಪಷ್ಟ. ಕಿಟಕಿಯ ಬದಿಯ ಸೀಟಿನಂತೆ ಒಂದೇ ಬದಿಯ ಚಿತ್ರಣ ಮಾತ್ರ ಕಾಣುವುದಿಲ್ಲ. ರಸ್ತೆಯಲ್ಲಿನ ಎಲ್ಲ ಆಗುಹೋಗುಗಳು ಕಾಣಿಸುತ್ತವೆ.
ಸೀಟು ಸಿಗದೆ ಬಾವಲಿಗಳಂತೆ ನೇತಾಡುವವರ ಗೋಳು ಕೇಳುವವರಿಲ್ಲ. ರಶ್ ಇಲ್ಲದಿದ್ದರೆ, ಸ್ವಲ್ಪ ಸಮಯದ ಪ್ರಯಾಣವಾದರೆ ಪರವಾಗಿಲ್ಲ. ಅದರ ವಿರುದ್ಧ ಸ್ಥಿತಿಯಾದರೆ ಕೈನೋವು, ಸೊಂಟನೋವು ಗ್ಯಾರಂಟಿ.
ನಮ್ಮ “ಅಂಬಿಗ’ ಅಂದರೆ ಡ್ರೈವರ್. ಕೆಲವರಂತೂ ಬಸ್ಸನ್ನು ರಾಕೆಟ್‌ನಂತೆ ರಭಸದಲ್ಲಿ ಚಲಾಯಿಸುವವರೂ ಇದ್ದಾರೆ. ಡ್ರೈವರ್‌ನ ಸಾಧನೆ, ಶಿಸ್ತು ಮೆಚ್ಚಬೇಕಾದುದು. ಏಕೆಂದರೆ, ವಾಹನ ಚಲಾಯಿಸುವ ಕೌಶಲಕ್ಕೊಂದು ಸಲಾಮು. ನೋಡಲು ಸಪೂರ ಇದ್ದರೂ ಕೂಡ ಕೆಲವು ಡ್ರೈವರ್‌ಗಳ ವಾಹನ ಸವಾರಿ. ಹಾಗೆಯೇ ಕೆಲವು ಕಡೆ ಬ್ರೇಕ್ ಹಾಕಿದಾಗ ದೇಹದ ಎಲುಬುಗಳಿಗೆ ಒಳ್ಳೆಯ ವ್ಯಾಯಾಮ.
ನಂತರದಲ್ಲಿ ಬರುವವರು ನಿರ್ವಾಹಕ. ನಿರ್ವಾಹಕ ರಾಜಸಭೆಯ ವಿದೂಷಕನಂತೆ. ಎಲ್ಲರನ್ನೂ ಕೆಲವೊಮ್ಮೆ ಸಿಟ್ಟಿಗೇರಿಸುತ್ತ ಎಲ್ಲರೊಂದಿಗೆ ನಗುತ್ತ, ತಮಾಷೆ ಮಾಡುತ್ತ ಕಾಲ ಕಳೆಯುತ್ತಾನೆ. ಕುರಿಯ ಮಂದೆಯಲ್ಲಿ ಕುರಿಗಳನ್ನು ತುಂಬಿಸಿದಂತೆ ಲೆಕ್ಕವಿಲ್ಲದಷ್ಟು ಜನರನ್ನು ಬಸ್ಸಿನೊಳಗೆ ತುರುಕುವವರು ಕಂಡಕ್ಟರ್. “ಪಿರ ಪೋಲೆ ಎದುರು ಬಲೆ’ ಎಂದು ಕಿರಿಕಿರಿ ಮಾಡುವವರು ಕೂಡ ಇವರೇ.
ದಿನಾಲೂ ಒಂದೇ ಬಸ್ಸಿನಲ್ಲಿ ಪ್ರಯಾಣ ಮಾಡಿದರೆ ಪರಿಚಯದ ಗುಂಪು ಆರಂಭವಾಗುತ್ತದೆ. ಗುಂಪಿನ ಮಾತುಕತೆ, ನಗು ಎಲ್ಲವೂ ಮಜಾವೋ ಮಜಾ. ಅದೆಷ್ಟು ಊರಿನ ವಿಷಯ, ನೆರೆಮನೆಯ ವಿಷಯ ಎಲ್ಲಾ ಸುದ್ದಿಗಳೂ ಸಿಗುವುದೇ ಬಸ್ಸಿನಲ್ಲಿ. ಒಟ್ಟಾರೆ “ಪಟ್ಟಾಂಗದ ಕಟ್ಟೆ’ ಎಂದರೆ ತಪ್ಪಾಗಲಾರದು.
ಯಶಸ್ವಿ ದ್ವಿತೀಯ ಬಿಎಡ್, ಸರಕಾರಿ ಶಿಕ್ಷಣ ಶಿಕ್ಷಣ ಮಹಾವಿದ್ಯಾಲಯ, ಮಂಗಳೂರು