Advertisement

ಗಾಂಧಿ ಜೀವನವೇ ಒಂದು ಸಂದೇಶ

04:09 PM Nov 04, 2019 | Suhan S |

ಕೋಲಾರ: ಮಹಾತ್ಮ ಗಾಂಧೀಜಿ ಅವರು ಬದುಕಿದ ಜೀವನದ ಹಾದಿಯೇ ಒಂದು ಸಂದೇಶವಾಗಿದೆ. ಇದನ್ನು ಪ್ರತಿ ಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದರು.

Advertisement

ನಗರದ ಟಿ.ಚನ್ನಯ್ಯ ರಂಗಮಂದಿ ರದಲ್ಲಿರುವ ಮಾಸ್ತಿ ಡಿವಿಜಿ ಪ್ರತಿಷ್ಠಾನದ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಹಾತ್ಮ ಗಾಂಧಿ ಅವರ 150ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಛಾಯಾಚಿತ್ರ ಪ್ರದರ್ಶನದಲ್ಲಿ ಗಾಂಧೀಜಿ ಅವರ ಬಾಲ್ಯ ದಿಂದ ಹಿಡಿದು ಅವರ ಸ್ವಾತಂತ್ರ್ಯ ಹೋರಾಟದ ಹಾದಿಯವರೆಗೆ ನಡೆದು ಬಂದ ವಿವಿಧ ಘಟ್ಟಗಳ ಕುರಿತ ಮಹತ್ವ ವಾದ ಛಾಯಾಚಿತ್ರಗಳು ಹಾಗೂ ಅವುಗಳ ಮಾಹಿತಿಯನ್ನು ಪ್ರದರ್ಶಿಸ ಲಾಗಿದೆ ಎಂದು ಹೇಳಿದರು.

ಈ ಪ್ರದರ್ಶನವು 3 ದಿನಗಳ ಕಾಲ ಇರಲಿದೆ. ಸಾರ್ವಜನಿಕರುಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಛಾಯಾಚಿತ್ರ ಪ್ರದರ್ಶ ನವನ್ನು ವೀಕ್ಷಿಸಿ ಸದುಪಯೋಗಪಡಿಸಿ ಕೊಳ್ಳಬೇಕು ಎಂದು ತಿಳಿಸಿದರು. ಗಾಂಧಿ ಅವರು ಅವಿಭಾಜ್ಯ ಕೋಲಾರ ಜಿಲ್ಲೆಯ ಪ್ರದೇಶವಾದ ನಂದಿ ಗಿರಿಧಾಮದಲ್ಲಿ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆದಿದ್ದರು. ನಂತರ ಬೆಂಗಳೂರಿಗೆ ಹಿಂತಿರುಗುವಾಗ ಕೋಲಾರ, ಮಾಲೂರು, ಬಂಗಾರಪೇಟೆ ಮತ್ತು ಕೆಜಿಎಫ್‌ ಮಾರ್ಗವಾಗಿ ತೆರಳಿದ್ದರು. ಈ ಸಂದರ್ಭದಲ್ಲಿ ಗಾಂಧೀಜಿಯವರಿಂದ ಅಲ್ಲಿನ ಜನರು ಸ್ಫೂರ್ತಿಯನ್ನು ಪಡೆದಿದ್ದರು ಎಂದು ತಿಳಿಸಿದರು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪಲ್ಲವಿ ಹೊನ್ನಾಪುರ, ಸಿಬ್ಬಂದಿ, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next