Advertisement

ಶೆಡ್‌ನ‌ಲ್ಲಿ ವಾಸಿಸುವ ನಿರಾಶ್ರಿತರ ಬದುಕು ನರಕ

12:56 PM Jul 13, 2022 | Team Udayavani |

ಚಿಂಚೋಳಿ: ತಾಲೂಕಿನಲ್ಲಿ ಸುರಿಯುತ್ತಿರುದ ಧಾರಾಕಾರ ಮಳೆಯಿಂದಾಗಿ ಕೆಳದಂಡೆ ಮುಲ್ಲಾಮಾರಿ ಯೋಜನೆ ಅಡಿಯಲ್ಲಿ ಮನೆ ಮತ್ತು ಆಸ್ತಿ ಕಳೆದುಕೊಂಡು ಕಳೆದ ಮೂರು ದಶಕಗಳಿಂದ ತಗಡಿನ ಶೆಡ್‌ಗಳಲ್ಲಿ ವಾಸಿಸುತ್ತಿದ್ದ ನಿರಾಶ್ರಿತರ ಬದುಕು ಕಷ್ಟಮಯವಾಗಿದೆ ಎಂದು ನಿರಾಶ್ರಿತ ವಾಸುದೇವ ಆಕ್ರಿ ತಿಳಿಸಿದ್ದಾರೆ.

Advertisement

ತಾಲೂಕಿನ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಯಲ್ಲಿ ಸಂಪೂರ್ಣವಾಗಿ ಮುಳುಗಡೆಯಾದ ಎಲ್ಮಾಡಗಿ ಗ್ರಾಮಸ್ಥರಿಗೆ 30ವರ್ಷಗಳ ಹಿಂದೆ ವಾಸಿಸುವುದಕ್ಕಾಗಿ ತಗಡುಗಳಿಂದ ಶೆಡ್‌ಗಳನ್ನು ನಿರ್ಮಿಸಲಾಗಿದೆ. ಆದರೆ ಈ ತಗಡುಗಳಲ್ಲಿ ತೂತುಗಳು ಬಿದ್ದಿವೆ. ಮಳೆ ನೀರು ಮನೆಯಲ್ಲಿ ಸೋರಿಕೆಯಾಗಿ ನಿರಾಶ್ರಿತರು ಹಗಲು ರಾತ್ರಿ ಎನ್ನದೇ ಎಚ್ಚರಿಕೆಯಿಂದ ಜೀವನ ಕಳೆಯಬೇಕಾಗಿದೆ. ಕೆಲವು ಕಡೆಗಳಲ್ಲಿ ಬಿರುಗಾಳಿಗೆ ತಗಡುಗಳು ಹಾರಿ ಹೋಗಿವೆ. ಕಬ್ಬಿಣ ಸಲಾಕೆಗಳು (ರಾಡ) ಮುರಿದು ಹೋಗಿವೆ. ಮಳೆಗಾಲದಲ್ಲಿ ಮನೆಯಲ್ಲಿ ಮಲಗಲು ಆಗುತ್ತಿಲ್ಲವೆಂದು ಎಂದು ಅಳಲು ತೋಡಿಕೊಂಡಿದ್ದಾರೆ.

ಎಲ್ಮಡಗಿ ಪುನರ್ವಸತಿ ಕೇಂದ್ರಗಳಲ್ಲಿ ಪ್ರತಿಯೊಬ್ಬರಿಗೂ ಶೆಡ್‌ ನಿರ್ಮಿಸಿಕೊಡಲಾಗಿದೆ. ಆದರೆ ಅವುಗಳಲ್ಲಿ ಕೆಲವು ಕಡೆ ಗಾಳಿಗೆ ಅರ್ಧಂಬರ್ಧ ಬಿದ್ದಿವೆ. ಈ ವೇಳೆ ಅನೇಕರಿಗೆ ಗಾಯಗಳಾಗಿವೆ. ಈ ಕುರಿತು ಶಾಸಕರಿಗೆ ಮತ್ತು ಸಂಸದರಿಗೆ, ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ಗಮನಕ್ಕೆ ಮನವಿ ಪತ್ರ ಸಲ್ಲಿಸಿ ಪುನರ್ವಸತಿ ಕೇಂದ್ರದ ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಡಬೇಕೆಂದು ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಗಡಿಲಿಂಗದಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಸಂಸದರು ಗ್ರಾಮ ಸಭೆ ನಡೆಸಿದಾಗ ಅಧಿಕಾರಿಗಳು ನಿರಾಶ್ರಿತರಿಗೆ ಪುನರ್ವಸತಿ ಕೇಂದ್ರಗಳಿಗೆ ಮನೆ ಹಕ್ಕು ಪತ್ರ ಕೊಡುತ್ತೇವೆಂದು ಭರವಸೆ ನೀಡಿದ್ದರು. ಆದರೆ ಇದುವರೆಗೆ ಒಬ್ಬರಿಗೂ ಹಕ್ಕು ಪತ್ರ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮನೆಗಳನ್ನು ಕಟ್ಟಿಕೊಳ್ಳುವುದಕ್ಕಾಗಿ ಗ್ರಾಪಂಗಳಿಂದ ಮನೆಗಳು ಕೊಡುತ್ತಿಲ್ಲ, ನೀರು, ವಿದ್ಯುತ್‌ ಸಂಪರ್ಕ, ಶಾಲೆ, ಚರಂಡಿ, ಸಮುದಾಯ ಭವನಗಳು, ದೇವಾಲಯಗಳು ನಿರ್ಮಿಸಲಾಗಿದೆ. ಆದರೆ ಕಳಪೆಮಟ್ಟದಿಂದ ಕೂಡಿದ್ದರಿಂದ ಹಾಳಾಗಿ ಹೋಗಿವೆ ಎಂದು ವಾಸುದೇವ ಅಕ್ರಿ ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next