Advertisement
ಈಗಿನ ಸಾರ್ವಜನಿಕ ಗ್ರಂಥಾಲಯ ಕಟ್ಟಡವು ಸುಸಜ್ಜಿತವಾಗಿ ಅಚ್ಚುಕಟ್ಟಾಗಿದ್ದರೂ ಇಕ್ಕಟ್ಟಿನ ಕಟ್ಟಡ ಓದುಗರಿಗೆ ಬೇಸರ ಮಾಡುತ್ತಿದೆ. 50 ಸಾವಿರಕ್ಕೂ ಅಧಿ ಕ ಜನಸಂಖ್ಯೆ ಹೊಂದಿರುವ ತಾಳಿಕೋಟೆ ಪಟ್ಟಣದಲ್ಲಿಯ ಸಾರ್ವಜನಿಕ ಗ್ರಂಥಾಲಯದಲ್ಲಿ 30 ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. ಆದರೆ ಓದುಗರಿಗೆ ಅವಶ್ಯಕ ಪುಸ್ತಕ ಬೇಕೆಂದರೆ ದಿನ ಪೂರ್ತಿ ಹುಡುಕಾಡುವಂತಹ ಪರಿಸ್ಥಿತಿ ಗ್ರಂಥಪಾಲಕರಿಗೆ ಬಂದೊದಗಿದೆ.
Related Articles
Advertisement
4 ವರ್ಷದಿಂದ ಕೊಳೆಯುತ್ತಿದೆ ರದ್ದಿ ಪೇಪರ್ : ದಿನನಿತ್ಯ ಗ್ರಂಥಾಲಯಕ್ಕೆ ಪೂರೈಕೆಯಾದ ದಿನಪತ್ರಿಕೆಗಳನ್ನು ಮರುದಿನ ಗಂಟು ಕಟ್ಟಿ ಜೋಡಿಸಿಡಲಾದ ಪತ್ರಿಕೆಗಳ ಗಂಟು 4 ವರ್ಷದಿಂದವಿಲೇವಾರಿಯಾಗಿಲ್ಲ. ಇದರಿಂದ ರಾಶಿರಾಶಿ ರದ್ದಿಗಂಟುಗಳು ಜಾಗದ ಕೊರತೆಗೆ ಮತ್ತಷ್ಟು ಪುಷ್ಠಿ ನೀಡಿದೆ. ಪ್ರತಿ ವರ್ಷ ಕೇಂದ್ರ ಗ್ರಂಥಾಲಯದಿಂದ ಅಧಿಕಾರಿಗಳು ಜಿಲ್ಲೆಯಲ್ಲಿರುವ ಎಲ್ಲ ಗ್ರಂಥಾಲಯಗಳನ್ನು ಸುತ್ತಾಡಿ ಅಲ್ಲಲ್ಲಿ ಅವಶ್ಯಕ ಬೇಡಿಕೆಗಳ ಜೊತೆಗೆ ರದ್ದಿ ಗಂಟುಗಳ ವಿಲೇವಾರಿಗೆ ಕ್ರಮ ಕೈಗೊಳ್ಳುತ್ತಿದ್ದರು. ಆದರೆ ಸುಮಾರು 4 ವರ್ಷದಿಂದ ಯಾವೊಬ್ಬ ಅಧಿಕಾರಿ ಗ್ರಂಥಾಲಯಕ್ಕೆ ಭೇಟಿ ನೀಡಿಲ್ಲ. ಓದುಗರ ಸಮಸ್ಯೆಗೆ ಸ್ಪಂದಿಸಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
ಗ್ರಂಥಾಲಯದ ಕಟ್ಟಡ ಮತದಾನದ ಕೇಂದ್ರ: ಸಾರ್ವಜನಿಕ ಗ್ರಂಥಾಲಯ ಓದುಗರಿಗೆ ಮೀಸಲೆಂದು ಹೇಳುವ ಅಧಿಕಾರಿಗಳು ಯಾವುದೇ ಚುನಾವಣೆ ಬಂದರೂ ಗ್ರಂಥಾಲಯದ ಕಟ್ಟಡದಲ್ಲಿ ಮತದಾನದ ಕೇಂದ್ರವನ್ನಾಗಿ ಮಾರ್ಪಡಿಸಲಾಗುತ್ತಿದೆ. ಆ ಸಮಯದಲ್ಲಿ ಸುಮಾರು 4, 5 ದಿನಗಳವರೆಗೆ ಗ್ರಂಥಾಲಯಕ್ಕೆ ಅಧಿಕಾರಿಗಳು ಬೀಗ ಹಾಕಿ ಚುನಾವಣೆ ನಿಮಿತ್ತ ಕೆಲಸದ ಮೇಲೆ ತೆರಳುತ್ತಾರೆ. 4, 5 ದಿನಗಳವರೆಗೆ ದಿನನಿತ್ಯ ದಿನಪತ್ರಿಕೆಗಳನ್ನು ಓದಲು ಗ್ರಂಥಾಲಯಕ್ಕೆ ಆಗಮಿಸುವ ಓದುಗರರ ಗೋಳು ಕೇಳುವವರ್ಯಾರು ಎಂಬ ಪ್ರಶ್ನೆ ಉದ್ಬವಿಸಿದೆ.
ಗ್ರಂಥಾಲಯದ ಇಕ್ಕಟ್ಟಿನ ಜಾಗೆಯಲ್ಲಿಯೇ ಓದುಗರರು ಅಪೇಕ್ಷೆಯಂತೆ ದಿನಪತ್ರಿಕೆ, ಸಾಮಾನ್ಯ ಜ್ಞಾನದ ಪುಸ್ತಕಗಳನ್ನು ಒದಗಿಸುತ್ತ ಸಾಗಿದ್ದೇವೆ. ಪುಸ್ತಕಗಳ ಸಂಖ್ಯೆ, ಓದುಗರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ರಂಥಾಲಯಕ್ಕೆ ಹೆಚ್ಚುವರಿ ಕೋಣೆಗಳ ಅವಶ್ಯಕತೆ ಇದೆ. ಇಕ್ಕಟ್ಟಿನ ಕಟ್ಟಡದ ಕುರಿತು ಹೆಚ್ಚುವರಿ ಕೊಣೆಗಳ ಬಗ್ಗೆ ಮೇಲಧಿಕಾರಿಗಳ ತಿಳಿಸಿದ್ದೇವೆ. -ಕೃಷ್ಣಾ ಕುಲಕರ್ಣಿ ಗ್ರಂಥಾಲಯ ಗ್ರಂಥಪಾಲಕ
-ಜಿ.ಟಿ. ಘೋರ್ಪಡೆ