Advertisement
ಇಂದಿನ ಶಿಕ್ಷಣದಿಂದ ಒಬ್ಬ ವಿದ್ಯಾರ್ಥಿಗೆ ಅವನ ನಿಜವಾದ ಜ್ಞಾನ ಮತ್ತು ಶಕ್ತಿಯನ್ನು ತೋರಿಸಲಿಕ್ಕೆ ಸಾಧ್ಯವಾಗುತ್ತಿಲ್ಲ. ಕೇವಲ ಒಂದು ಚೌಕಟ್ಟಿನಲ್ಲಿ ಅವನನ್ನು ಅನಿವಾರ್ಯವಾಗಿ ಕಲಿಯುವಂತೆ ಮಾಡುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ತನ್ನದೇ ಆದಂತಹ ಪ್ರತಿಭೆ ಇರುತ್ತದೆ. ಆದರೆ ಈಗಿನ ಸಮಯದಲ್ಲಿ ಆ ವಿದ್ಯಾರ್ಥಿಗೆ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಸಿಗುತ್ತಿಲ್ಲ ಹಾಗೂ ಪ್ರೋತ್ಸಾಹವೂ ಸಿಗುತ್ತಿಲ್ಲ. ಇಲ್ಲಿ ಕೇವಲ ಶಿಕ್ಷಣ ವ್ಯವಸ್ಥೆಯ ತಪ್ಪಲ್ಲ, ಕೆಲವು ತಂದೆತಾಯಿಯರ ತಪ್ಪು ಕೂಡ ಇದೆ. ತಮ್ಮ ಮಕ್ಕಳ ಪ್ರತಿಭೆಗಳನ್ನು ಅವರು ಗುರುತಿಸಿ ಪ್ರೋತ್ಸಾಹಿಸುವುದಿಲ್ಲ. ಈ ತರಹದ ವ್ಯವಸ್ಥೆಯಿಂದ ಎಂತಹ ಪರಿಸ್ಥಿತಿ ಬಂದಿದೆ ಎಂದರೆ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರ ಜಗತ್ತಿಗೆ ಪರಿಚಯಿಸಲೂ ಮನೆಬಿಟ್ಟು ಹೋಗುವ ಕಾಲ ಬಂದಿದೆ.
Related Articles
Advertisement
ರಘು ದೀಕ್ಷಿತ್ಕೆಲವರು ಸಾಂಪ್ರದಾಯಿಕ ಪಠ್ಯವನ್ನು ಬಿಟ್ಟು ಪಠ್ಯೇತರದಿಂದ ತಮ್ಮ ಕೆರಿಯರ್ ರೂಪಿಸಿಕೊಂಡವರ ಉದಾಹರಣೆ ಕೊಡ ಬಹುದಾದರೆ ನಮ್ಮ ಕನ್ನಡದ ಪ್ರಸಿದ್ಧ ಸಂಗೀತ ನಿರ್ದೇಶಕರು ಹಾಗೂ ಹಾಡುಗಾರರಾದಂತಹ ರಘುದೀಕ್ಷೀತ್‌ರವರು. ಇವತ್ತು ಇವರು ಇಡೀ ದೇಶಕ್ಕೆ ಸಂಗೀತ ಕ್ಷೇತ್ರದಲ್ಲಿ ಪರಿಚಿತರು. ಆದರೆ, ಇವರು ಈ ಕ್ಷೇತ್ರಕ್ಕೆ ಬರುವ ಮೊದಲು ಒಬ್ಬ ಮೈಕ್ರೋಬಯೋಲಾಜಿಸ್ಟ್ ಹಾಗೂ ವಿಜ್ಞಾನಿ. ಅನಂತರ ಅದನ್ನು ಬಿಟ್ಟು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿದು ಇಂದು ಒಳ್ಳೆಯ ಜೀವನವನ್ನು ನಡೆಸುತ್ತಿ¨ªಾರೆ. ಇನ್ನು ಇವರ ಪತ್ನಿ ಮಯೂರಿ ಉಪಾಧ್ಯ ನೃತ್ಯದಲ್ಲಿ ಆಸಕ್ತಿಯುಳ್ಳವರು, ಇಂದು ಅದೇ ಕ್ಷೇತ್ರದಲ್ಲಿ ಸಾಧನೆ ಮಾಡಿ ವಿದೇಶಗಳಲ್ಲಿ ಪ್ರದರ್ಶನ ತೋರಿಸಿ ಸೈ ಎನಿಸಿಕೊಂಡವರು. ವಿಲಾಸ್ ನಾಯಕ್
ಚಿತ್ರಕಲೆ ಕ್ಷೇತ್ರವನ್ನು ತೆಗೆದುಕೊಂಡರೆ ಇಂದು ದೇಶ-ವಿದೇಶದಲ್ಲಿ ಪ್ರಸಿದ್ಧಿ ಪಡೆಯುತ್ತಿರುವ ನಮ್ಮ ಕರ್ನಾಟಕದ ಪ್ರತಿಭೆ ವಿಲಾಸ್ ನಾಯಕ್. ಇಂದು ಇವರು ಇಡೀ ಪ್ರಪಂಚಕ್ಕೆ ಒಬ್ಬ ಅತೀ ವೇಗದ ಚಿತ್ರಕಾರನಾಗಿ ಪರಿಚಿತರು. ತಮ್ಮ ಆಸಕ್ತಿಯುಳ್ಳ ಈ ಕ್ಷೇತ್ರದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಇವರು ಬಹುರಾಷ್ಟ್ರೀಯ ಕಂಪೆನಿಯ ಉದ್ಯೋಗವನ್ನು ಬಿಟ್ಟು ಬಂದವರು. ಗಂಗಾವತಿ ಪ್ರಾಣೇಶ್
ಯಾರಾದರೂ ತುಂಬಾ ಮಾತಾಡ್ತಾ ಇದ್ದರೆ ನಾವು ಹೇಳ್ತೀವಿ, ಏನಪ್ಪ ಎಷ್ಟೊಂದು ಮಾತಾಡ್ತಾರೆ ಇವರು ಅಂತ. ಆದರೆ ನಮಗೆ ಗೊತ್ತಿರಲ್ಲಾ ಮಾತು ಸಹ ಒಂದು ಕಲೆಯಂತೆ ಮಾತನ್ನೇ ತಮ್ಮ ಬಂಡವಾಳವಾಗಿಟ್ಟುಕೊಂಡು ಜನರ ಮನವನ್ನ ಗೆದ್ದವರನ್ನು ನಾವು ನೋಡಬಹುದು. ಉದಾಹರಣೆಗೆ ಖ್ಯಾತ ಹಾಸ್ಯಗಾರ ಗಂಗಾವತಿ ಪ್ರಾಣೇಶ್‌ರವರು, ಖ್ಯಾತ ನಿರೂಪಕಿಯಾದ ಅನುಶ್ರೀ ಹಾಗೂ ಉತ್ತಮ ಮಾತುಗಾರ ಚಕ್ರವರ್ತಿ ಸೂಲಿಬೆಲೆಯವರು. ಮಾತು ಹೇಗೆ ಒಂದು ಕಲೆಯೋ ಬರವಣಿಗೆಯೂ ಕೂಡ ಒಂದು ಕಲೆ. ಇವತ್ತು ಪ್ರತಿಯೊಂದು ಪತ್ರಿಕೆಗಳಲ್ಲಿ ನಾವು ಎಷ್ಟೋ ಬರಹಗಾರರ ಲೇಖನಗಳನ್ನು ಕಾಣಬಹುದು. ಪ್ರತಿದಿನ ತುಂಬಾ ಲೇಖಕರ, ಸಾಹಿತಿಗಳ ಪುಸ್ತಕಗಳು ಬಿಡುಗಡೆಯಾಗುತ್ತವೆ. ಉತ್ತಮ ಬರಹಗಳು ಇಂದು ಬರಲಿಕ್ಕೆ ಕಾರಣ ಬರವಣಿಗೆಯನ್ನೇ ತಮ್ಮ ಶಕ್ತಿಯನ್ನಾಗಿಟ್ಟುಕೊಂಡ ಬರಹಗಾರರು, ಸಾಹಿತಿಗಳಿಂದ ಸಾಧ್ಯವಾದುದು. ನಟನೆಯನ್ನೇ ತಮ್ಮ ಪ್ರತಿಭೆಯಾಗಿಟ್ಟುಕೊಂಡು ಇಂದು ರಂಗಭೂಮಿ ಹಾಗೂ ಸಿನೆಮಾ ಕ್ಷೇತ್ರದಲ್ಲಿ ಮಿಂಚುತ್ತಿರುವವರು ತುಂಬಾ ಜನ ಇದ್ದಾರೆ.
ಸಾನಿಯಾ ಮಿರ್ಜಾ
ಇನ್ನು ಕ್ರೀಡೆಯ ಕ್ಷೇತ್ರವನ್ನು ತೆಗೆದುಕೊಂಡರೆ ಈ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಹೊಂದಿ, ಒಲಂಪಿಕ್‌ನಂತಹ ಸ್ಪರ್ಧೆಗಳಲ್ಲಿ ಪದಕಗಳನ್ನು ಜಯಿಸಿದವರು ಉದಾಹರಣೆಗಳನ್ನು ಕಾಣಸಿಗುತ್ತವೆ. ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ. ಸಿಂಧೂ, ಜಿಮ್ನಾಸ್ಟಿಕ್‌ನಲ್ಲಿ ದೀಪಾ ಕರ್ಮಾಕರ್, ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ, ಕುಸ್ತಿಯಲ್ಲಿ ಮೇರಿ ಕೋಮ್, ಟೆನಿಸ್ ತಾರೆ ಸಾನಿಯಾ ಮಿರ್ಜಾ ಹೀಗೆ ತುಂಬಾ ಜನ. ಪಠ್ಯೇತರ ಚಟುವಟಿಕೆಗಳಲ್ಲಿ ಕೇವಲ ಇಷ್ಟು ಕ್ಷೇತ್ರಗಳಲ್ಲ, ತುಂಬಾ ಪ್ರಕಾರಗಳಿವೆ. ಆ ಕ್ಷೇತ್ರಗಳಲ್ಲಿ ಪ್ರಸಿದ್ಧಿ ಹೊಂದಿ ಜೀವನ ನಡೆಸುತ್ತಿರುವವರ ಬಗ್ಗೆ ಹೇಳುತ್ತ ಹೋದರೆ ಒಂದು ದೊಡ್ಡ ಪಟ್ಟಿಯೇ ಆಗುತ್ತದೆ. ಬಹುಶಃ ಒಂದು ಪುಸ್ತಕವೇ ಆಗಬಹುದು. ಇವರೆಲ್ಲರೂ ಚಿಕ್ಕ ವಯಸ್ಸಿನಲ್ಲಿ ಬಡತನದಲ್ಲಿ ಬೆಳೆದು ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡು ಪ್ರೋತ್ಸಾಹವನ್ನು ಪಡೆದು ಇಂದು ತಮ್ಮ ಕಾಲಿನ ಮೇಲೆ ತಾವೇ ನಿಂತವರು. ಪಠ್ಯದ ಶಿಕ್ಷಣ ವಿದ್ಯಾರ್ಥಿಗೆ ಜ್ಞಾನವನ್ನು ನೀಡುತ್ತದೆ ಹಾಗೂ, ತರಗತಿಗಳಲ್ಲಿ ಪಠ್ಯದ ಸೈದ್ಧಾಂತಿಕ ಶಿಕ್ಷಣದ ಜೊತೆಗೆ ಪಠ್ಯೇತರ ಶಿಕ್ಷಣವನ್ನು ನೀಡಿದರೆ ಶಿಕ್ಷಣದ ಶಕ್ತಿ ಹೆಚ್ಚುತ್ತದೆ. ಆದರೆ ಶಿಕ್ಷಣದ ಅರ್ಥ ವಿದ್ಯಾರ್ಥಿಗೆ ಪಠ್ಯ ಹಾಗೂ ಪಠ್ಯೇತರ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಯನ್ನು ಬೌದ್ಧಿಕ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಮುಂದಿನ ಭವಿಷ್ಯದ ಜೀವನವನ್ನು ಎದುರಿಸಲು ತಯಾರಿಸುವುದು. ಪಠ್ಯೇತರ ಚಟುವಟಿಕೆಗಳು ಒಬ್ಬ ವಿದ್ಯಾರ್ಥಿಯ ಸಂಪೂರ್ಣವಾದ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಚಟುವಟಿಕೆಗಳು ವಿದ್ಯಾರ್ಥಿ ಯ ವ್ಯಕ್ತಿತ್ವದ ಬೆಳವಣಿಗೆ, ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆ ಸಾಮಾಜಿಕವಾಗಿ ಬೆಳವಣಿಗೆ ಹೊಂದಲು ಅನುಕೂಲ ಮಾಡಿಕೊಡುವುದಲ್ಲದೇ ವಿದ್ಯಾರ್ಥಿಯಲ್ಲಿ ಮೌಲ್ಯಗಳನ್ನು ಬೆಳೆಸುತ್ತದೆ ಹಾಗೂ ಸೌಂದರ್ಯದ ಬೆಳವಣಿಗೆಯು ಆಗುತ್ತದೆ. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಯಲ್ಲಿ ಸೃಜನಶೀಲತೆ, ಉತ್ಸಾಹ, ಶಕ್ತಿ ಹಾಗೂ ಧನಾತ್ಮಕ ಯೋಚನೆಗಳನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತದೆ. – ವಿಧಾತ್ರಿ ಭಟ್ ಉಪ್ಪುಂದ
ಪತ್ರಿಕೋದ್ಯಮ ವಿಭಾಗ ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ