Advertisement
ಚಿರತೆಗಳ ಸೆರೆಗೆ ಅರಣ್ಯಾಧಿ ಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡುವ ಜತೆಗೆ ಸ್ಥಳೀಯರ ಸಹಕಾರದೊಂದಿಗೆ ಪ್ರತಿದಿನ ಕೂಂಬಿಂಗ್ನಡೆಸುತ್ತಿದ್ದರು. ಸೋಮಲಾಪುರ, ದೇವಲಾಪುರ, ಮೆಟ್ರಿ, ದರೋಜಿ ಸೇರಿ 11 ಕಡೆ ಬೋನುಗಳನ್ನು ಹಾಗೂ ಮೂರು ಡಿಜಿಟಲ್ ಕ್ಯಾಮೆರಾ ಅಳವಡಿಸಿ
ಕ್ರಮ ಕೈಗೊಂಡಿದ್ದರು. “ಈಗಾಗಲೇ ಚಿರತೆ ದಾಳಿಗೆ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ. ಇದರಿಂದ ಗ್ರಾಮಗಳಲ್ಲಿ ಶೋಕದ ವಾತಾವರಣ
ನಿರ್ಮಾಣವಾಗಿದೆ. ಈ ಹಿಂದೆ ಹೆಣ್ಣು ಚಿರತೆ, ಈಗ ಗಂಡು ಚಿರತೆ ಬೋನಿಗೆ ಬಿದ್ದಿದೆ’ ಎಂದು ದೇವಲಾಪುರ ಗ್ರಾಪಂ ಅಧ್ಯಕ್ಷ ಗೌಡ್ರು ಸುರೇಶಗೌಡ
ಹೇಳಿದ್ದಾರೆ.