Advertisement

ಪರಂಪರೆ ತಿಳಿಸುವುದು ಕಮಲ ಜಾತ್ರೆ ಉದ್ದೇಶ: ಖೂಬಾ

12:34 PM Mar 04, 2018 | |

ಭಾಲ್ಕಿ: ಭಾರತೀಯ ಭವ್ಯ ಪರಂಪರೆಯನ್ನು ಜನರಿಗೆ ತಿಳಿಸಿಕೊಡುವುದೇ ಕಮಲ ಜಾತ್ರೆಯ ಮೂಲ ಉದ್ದೇಶವಾಗಿದೆ. ಹೀಗಾಗಿ ಈ ಜಾತ್ರೆಯಲ್ಲಿ ಭಾರತೀಯ ಮೂಲ ಸಂಸ್ಕೃತಿಗೆ ಸಂಬಂಧಪಟ್ಟ ಎಲ್ಲಾ ಅಂಶಗಳಿಗೆ ಒತ್ತು ನೀಡಲಾಗಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.

Advertisement

ಪಟ್ಟಣದ ಚನ್ನಬಸವಾಶ್ರಮದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ಕಮಲ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಮಲ ಜಾತ್ರೆಯ ಮೂಲಕ ಮನರಂಜನೆಯೊಂದಿಗೆ ದೇಶೀ ಸಂಸ್ಕೃತಿ ಗಟ್ಟಿಗೊಳಿಸಲಾಗುವುದು.

ಹೀಗಾಗಿ ಭಾರತೀಯರಾದ ನಾವು ಈ ಜಾತ್ರೆಯ ಆನಂದ ಸವಿಯಬೇಕು ಎಂದು ಹೇಳಿದರು. ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ಕೆಲವು ದಿನಗಳ ಹಿಂದೆ ಜೇವರ್ಗಿಯಲ್ಲೂ ಕಮಲ ಜಾತ್ರೆ ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಸುಮಾರು 40 ಸಾವಿರ ಜನರು ಜಾತ್ರೆಯಲ್ಲಿ ಭಾಗವಹಿಸಿದ್ದರು. ಆದರೆ ಭಾಲ್ಕಿಯಲ್ಲಿ ಇಂದು ಮತ್ತು ನಾಳೆ ನಡೆಯಲಿರುವ ಕಮಲ ಜಾತ್ರೆಯಲ್ಲಿ ಸುಮಾರ ಒಂದು ಲಕ್ಷ ಜನರು ಬಾಗವಹಿಸುವರು ಎಂದು ಹೇಳಿದರು. 

ಬಿಜೆಪಿ ಜಿಲ್ಲಾಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ಗುರುನಾಥ ಜಾಂತಿಕರ, ಪ್ರಕಾಶ ಮಾಶೆಟ್ಟೆ, ಈಶ್ವರ ಸಿಂಗ್‌ ಠಾಕೂರ, ಸೂರಜಸಿಂಗ್‌ ರಜಪೂತ, ಬಿಜೆಪಿ ತಾಲೂಕು ಅಧ್ಯಕ್ಷ ಗೋವಿಂದರಾವ್‌ ಬಿರಾದಾರ, ಅಶೋಕ ಮಡ್ಡೆ, ಸುಭಾಷ ಮಾಶೆಟ್ಟೆ, ಸೂರಜ ಮಜಗೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next