Advertisement

ಮುಖಂಡರ ಭರವಸೆ: ಸತ್ಯಾಗ್ರಹ ಅಂತ್ಯ

01:33 PM May 17, 2019 | Team Udayavani |

ಗುಳೇದಗುಡ್ಡ: ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ನೇಕಾರ ಮುಖಂಡ ಶ್ರೀಕಾಂತ ಹುನಗುಂದ ಪಟ್ಟಣದ ಸಾರ್ವಜನಿಕ ಕಟ್ಟೆಯ ಮೇಲೆ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಅಂತ್ಯಗೊಂಡಿದೆ.

Advertisement

ಜೆಡಿಎಸ್‌ ನೇಕಾರ ಘಟಕದ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಶೇಖಾ ಅವರು ಶ್ರೀಕಾಂತ ಹುನಗುಂದ ಅವರ ಮನವೊಲಿಸಿದರು. ಚಂದ್ರಕಾಂತ ಶೇಖಾ ಮಾತನಾಡಿ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಕೃಷ್ಣಪ್ಪ ಬೆಂಗಳೂರಿನಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಅವಮಾನಿಸಿದ್ದು ಉದ್ದೇಶಪೂರ್ವಕವೇನಲ್ಲ. ಕೆಲಸದ ಒತ್ತಡದಲ್ಲಿ ಅಚಾತುರ್ಯ ನಡೆದಿದೆ.ಇಂತಹ ಘಟನೆ ಮರುಕಳಿಸದಂತೆ ನಾವೂ ಮುಖ್ಯಮಂತ್ರಿಗಳಿಗೆ ತಿಳಿಸುತ್ತೇವೆ. 18ರಂದು ನಾನು ಹಾಗೂ ಜಿಲ್ಲಾಧ್ಯಕ್ಷ ನವಲಿ ಹಿರೇಮಠ ಅವರು ಸೇರಿ ಶ್ರೀಕಾಂತ ಹುನಗುಂದ ಅವರನ್ನು ಬೆಂಗಳೂರಿಗೆ ಕರೆದೊಯ್ದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ ಈ ಭಾಗದ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳಿದರು.

ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಶ್ರೀಕಾಂತ ಹುನಗುಂದ ಮಾತನಾಡಿ, ಪಕ್ಷದ ಹಿರಿಯ ಮುಖಂಡರು ಭರವಸೆ ನೀಡಿದ್ದಕ್ಕೆ ನಾನು ಒಪ್ಪಿಕೊಂಡು ಉಪವಾಸ ಸತ್ಯಾಗ್ರಹ ಹಿಂದಕ್ಕೆ ಪಡೆದಿದ್ದೇನೆ. ಭರವಸೆ ಈಡೇರದಿದ್ದರೆ ಅಂದೇ ವಿಧಾನಸೌಧದ ಎದುರಿಗೆ ಉಪವಾಸ ಸತ್ಯಾಗ್ರಹ ಮುಂದುವರಿಸುವುದಾಗಿ ಹೇಳಿದರು. ಹುಲಮನಿ ಶಂಕ್ರಪ್ಪ, ಸೋಮಶೇಖರರೆಡ್ಡಿ ಸೋಮನಾಳ, ಅನ್ವರಖಾನ ಪಠಾಣ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next