Advertisement

ಬಸ್‌ಪಾಸ್‌ಗಾಗಿ ಅಂಗವಿಕಲರ ವಿನೂತನ ಪ್ರತಿಭಟನೆ

12:57 PM Jan 24, 2017 | Team Udayavani |

ಹೊಸಪೇಟೆ: ವಿಕಲಚೇತನರಿಗೆ ನೂತನ ಬಸ್‌ ಪಾಸ್‌ ವಿತರಣೆ ಹಾಗೂ ನವೀಕರಣಕ್ಕಾಗಿ ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ, ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಿರುವ ಕ್ರಮ ಖಂಡಿಸಿ ತಾಲೂಕು ವಿಕಲಚೇತನರ ಸಂಘದ ಪದಾಧಿಕಾರಿಗಳು, ನೂರಾರು ವಿಕಲಚೇತನರು ತಲೆಯ ಮೇಲೆ ಕಲ್ಲು ಇಟ್ಟುಕೊಂಡು ವಿನೂತನ ಪ್ರತಿಭಟನೆ ನಡೆಸಿದರು. 

Advertisement

ಇಲ್ಲಿನ ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವಿಕಲಚೇತನರು, ನೂತನ ಬಸ್‌ ಪಾಸ್‌ ಹಾಗೂ ನವೀಕರಣಕ್ಕಾಗಿ ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಿರುವ ಕ್ರಮವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. 2008ರಲ್ಲಿ ಅಂದಿನ ಸರ್ಕಾರ ತಾಲೂಕು ವೈದ್ಯಕೀಯ ಮಂಡಳಿ ರಚನೆ ಮಾಡುವ ಮೂಲಕ ತಜ್ಞ ವೈದ್ಯರಿಂದ ಗುರುತಿನ ಚೀಟಿಯನ್ನು ಪಡೆಯುವಂತೆ ಆದೇಶಸಿತ್ತು.

ಬಸ್‌ ಪಾಸ್‌ ಸೇರಿದಂತೆ ಇತರೆ ಕೆಲಸ ಕಾರ್ಯಗಳಿಗಾಗಿ ವಿಕಲಚೇತನರು, ಈತನಕ ವೈದ್ಯಕೀಯ ಮಂಡಳಿಯಿಂದ ಕೊಡ ಮಾಡುವ ಪ್ರಮಾಣ ಪತ್ರವನ್ನು ನೀಡುತ್ತಾ ಬಂದಿದ್ದಾರೆ. ಆದರೆ, ಸಾರಿಗೆ ಸಂಸ್ಥೆ, ಹೊಸ ಪಾಸ್‌ ವಿತರಣೆ ಹಾಗೂ ನವೀಕರಣಕ್ಕಾಗಿ ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಿದೆ. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವಿಕಲಚೇತನರ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದ್ದಾರೆ. ಕೂಡಲೇ ಗುರುತಿನ ಚೀಟಿ ಕಡ್ಡಾಯ ಮಾಡಿರುವ ಕ್ರಮ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು. 

ಮುಖಂಡರಾದ ಎನ್‌.ವೆಂಕಟೇಶ, ಕೆ.ಜಿ.ವೆಂಕಟೇಶ, ಜಿ.ಮುಕ್ಕಣ್ಣ, ಜಿ.ಅಂಜನಿ, ಕೆ.ರಾಜಸಾಬ್‌, ಮೇರಿ, ಶಿವಗಂಗಮ್ಮ, ನಾಗೇಂದ್ರ, ಹುಲಗಪ್ಪ, ಗೋವಿಂದ ಪೂಜಾರ್‌, ಚೆನ್ನಬಸವ, ತಂಗರಾಜು, ಪರಶುರಾಮ, ಪಾಂಡುನಾಯಕ್‌, ಮೆಹಬೂಬ್‌ ಬಾಷಾ, ಶೇಕ್‌ ಮೆಹಬೂಬು ಬಾಷಾ, ವಿ.ವೆಂಕಟೇಶ, ನಾಗರಾಜ, ರಾಜಶೇಖರ, ದಾದು, ಅರುಣಕುಮಾರ್‌, ಮೌನೇಶ, ಮಹಮ್ಮದ್‌, ಅಂಜು ತಾಯಮ್ಮ, ರಾಮಾಂಜನಿ, ಚಾಂದ್‌ಬೀ, ಮಂಜುಳಾ ಹಾಗೂ ಖಾಜಬನಿ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next