Advertisement
ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದ ಜಿನ್ನಿಂಗ್ ಫ್ಯಾಕ್ಟರಿಯ ಚಿಮಣಿ (ಬೋಂಗಾ) ಇದಾಗಿದ್ದು, ಇದರ ಹಿಂದೆ ದೊಡ್ಡ ಇತಿಹಾಸವೇ ಅಡಗಿದೆ. 1865ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯಿಂದ ಸದರನ್ ಮರಾಠ ಸ್ಪಿನ್ನಿಂಗ್ ಆ್ಯಂಡ್ ವೇವಿಂಗ್ ಕಂಪನಿ ಹೆಸರಲ್ಲಿ ಸ್ಥಾಪಿಸಿದ್ದ ಮಿಲ್ ಇದಾಗಿದ್ದು, ಇಲ್ಲಿಂದ ಶೇಖರಣೆಗೊಳ್ಳುವ ಕಾಟನ್‌ಅನ್ನು ಬ್ರಿಟಿಷರು ಹಡಗಿನ ಮೂಲಕ ಮುಂಬಯಿ, ಗುಜರಾತ್ ಹಾಗೂ ಹೊರದೇಶಗಳಿಗೂ ಕಳುಹಿಸಿಕೊಡುತ್ತಿದ್ದರು. ಕಾಲಘಟ್ಟದಲ್ಲಿ ಬದಲಾಗುತ್ತ ಅದೇ ಮುಂದೆ ಮಹಾದೇವ ಟೆಕ್ಸ್‌ಟೈಲ್ ಮಿಲ್, ಭಾರತ್ ಮಿಲ್ ಎಂದು ಹೆಸರಾಗಿತ್ತು. ಇದೀಗ ಸುಮಾರು 16 ಎಕರೆ ಜಾಗವನ್ನು ಖಾಸಗಿಯವರು ಖರೀದಿಸಿದ್ದು, ಸ್ವಚ್ಚತಾ ಕಾರ್ಯ ನಡೆಸುತ್ತಿದ್ದಾರೆ.
Related Articles
Advertisement
ಅನುಮತಿ ಪಡೆಯದೆ ನೆಲಸಮ: ನೋಟಿಸ್ಚಿಮಣಿ ನೆಲಸಮಗೊಳಿಸುವುದಕ್ಕೆ ಮುಂಚೆ ಅನುಮತಿ ಪಡೆಯದ ಕಾರಣಕ್ಕೆ ಜಾಗದ ಮಾಲೀಕರಾದ ಏಕನಾಥಸಾ ಅರ್ಜುನಸಾ ಇರಕಲ್ ಅವರಿಗೆ ಮಹಾನಗರ ಪಾಲಿಕೆಯ ವಲಯ 10ರ ಸಹಾಯಕ ಆಯುಕ್ತರು ನೋಟಿಸ್ ನೀಡಿದ್ದಾರೆ. ಕರ್ನಾಟಕ ಪೌರ ನಿಗಮಗಳ ಅಧಿನಿಯಮ1976ರ ಪ್ರಕಾರ, ಯಾವುದೇ ಕಟ್ಟಡಗಳನ್ನು ನೆಲಸಮಗೊಳಿಸುವುದಕ್ಕೆ ಮುಂಚೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕು. ಅತ್ಯಂತ ದೊಡ್ಡದಾದ ಚಿಮಣಿ ಕೆಡವಲು ಅನುಮತಿ ಪಡೆಯದಿರುವುದು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಗೊತ್ತಾಗಿದೆ. ಹಾಗಾಗಿ, ಏಳು ದಿನಗಳೊಳಗೆ ಚಿಮಣಿ ಇದ್ದ ಸ್ಥಳದ ದಾಖಲೆಗಳನ್ನು ಪರಿಶೀಲನೆಗಾಗಿ ಕಚೇರಿಗೆ ಸಲ್ಲಿಸಬೇಕು. ಅಲ್ಲಿಯವರೆಗೆ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಅಪಾಯಕಾರಿ ಕಟ್ಟಡ ತೆರವು ಮಾಡಬೇಕಿದ್ದಲ್ಲಿ ಪಾಲಿಕೆಯಿಂದ ಪರವಾನಗಿ ಪಡೆದುಕೊಳ್ಳಬೇಕು. ಶಿಥಿಲ ಕಟ್ಟಡ ಇದ್ದಲ್ಲಿ ಪಾಲಿಕೆಯಿಂದ ನೋಟಿಸ್ ಜಾರಿ ಮಾಡಿ ತೆರವು ಕಾರ್ಯಾಚರಣೆ ಮಾಡಲಾಗುತ್ತದೆ. ಆದರೆ ಚಿಮಣಿ ತೆರವು ಕಾರ್ಯಾಚರಣೆಯಲ್ಲಿ ಯಾವುದೇ ಪರವಾನಗಿ ಪಡೆದುಕೊಂಡಿಲ್ಲ. ಈ ಕುರಿತು ಯಾರಾದರೂ ದೂರು ನೀಡಿದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಸಂಬಂಧಿಸಿದ ವಲಯ ಕಚೇರಿಯಿಂದ ನೋಟಿಸ್ ನೀಡಲಾಗುವುದು.
ಈರೇಶ ಅಂಚಟಗೇರಿ, ಮಹಾಪೌರ ಶತಮಾನದ ಇತಿಹಾಸದ ಕುರುಹಾಗಿದ್ದ ಚಿಮಣಿ(ಬೋಂಗಾ) ನೆಲಸಮವಾಗುವ ಮೂಲಕ ಟೆಕ್ಸ್‌ಟೈಲ್ ಉದ್ಯಮದ ಯುಗಾಂತ್ಯವಾದಂತಾಗಿದೆ. ಒಂದು ಕಾಲದಲ್ಲಿ ನೂರಾರು ಕುಟುಂಬಗಳಿಗೆ ಅನ್ನ ನೀಡಿದ್ದ ಸಂಸ್ಥೆ ಹಲವು ಕೈಗಳಿಗೆ ಬದಲಾದ ನಂತರ, ಸರಕಾರವೇ ನಿರ್ವಹಣೆಗೆ ತೆಗೆದುಕೊಂಡರೂ ನಡೆಸಲು ಸಾಧ್ಯವಾಗದೇ ಕಾರ್ಮಿಕರಿಗೆ ಸಂಬಳ ನೀಡಲು ಸಾಧ್ಯವಾಗದೇ ಲಾಕೌಟ್ ಘೋಷಣೆ ಮಾಡಿ ಬಂದ್ ಮಾಡಲಾಗಿತ್ತು. ಅದರ ಅವಶೇಷವಾಗಿ ಇದ್ದ ಚಿಮಣಿ(ಬೋಂಗಾ)ಯೂ ಧರೆಗೆ ಉರುಳಿದ್ದು, ಇನ್ನು ಹುಬ್ಬಳ್ಳಿಯಲ್ಲಿ ಟೆಕ್ಸ್‌ಟೈಲ್ ಉದ್ಯಮ ಎನ್ನುವುದು ನೆನಪು ಮಾತ್ರ.
ಡಾ| ಪಾಂಡುರಂಗ ಪಾಟೀಲ, ಮಾಜಿ ಮಹಾಪೌರ