Advertisement

India Club: ಸೆ.17ಕ್ಕೆ U.K. ಯ ಇಂಡಿಯಾ ಕ್ಲಬ್‌ಗ ಕೊನೆಯ ತೆರೆ

08:52 PM Aug 22, 2023 | Team Udayavani |

ಲಂಡನ್‌: ಯುನೈಡ್‌ ಕಿಂಗ್‌ಡಮ್‌ನಲ್ಲಿ ಇರುವ ಐತಿಹಾಸಿಕ ಇಂಡಿಯಾ ಕ್ಲಬ್‌ ಮುಂದಿನ ತಿಂಗಳಿಂದ ಮುಚ್ಚಲಿದೆ. ದೇಶದ ಸ್ವಾತಂತ್ರ್ಯ ಚಳವಳಿಯ ರೂಪುಗೊಂಡಿರುವ ಹಾಗೂ ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ದೇಶದ ಮೊದಲ ಹೈಕಮಿಷನರ್‌ ಕೃಷ್ಣ ಕೃಷ್ಣ ಮೆನನ್‌ ಸೇರಿ ರಾಷ್ಟ್ರೀಯವಾದಿಗಳ ಪ್ರಮುಖ ಕೇಂದ್ರವೂ ಆಗಿತ್ತು. 70 ವರ್ಷ ಹಿಂದೆ ಆರಂಭವಾಗಿದ್ದ ಈ ಕ್ಲಬ್‌ ಭಾರತ ಉಪಖಂಡದಿಂದ ಆಗಮಿಸಿದ್ದ ಮೊದಲ ವಲಸಿಗರಿಗೆ ಮನೆಯಂತೆ ಇತ್ತು.

Advertisement

ಇಂಡೋ ಬ್ರಿಟಿಷ್‌ ಗ್ರೂಪ್‌ನ ಸಮುದಾಯ ಕೇಂದ್ರವೂ ಆಗಿತ್ತು. ಇಂತಹ ಕ್ಲಬ್‌ ರಕ್ಷಣೆಗೆ ಮಾಲೀಕರಾದ ಯಾದ್ಗರ್‌ ಮಾರ್ಕರ್‌ ಮತ್ತು ಇವರ ಪುತ್ರಿ ಫಿರೋಜ್‌ “ಸೇವ್‌ ಇಂಡಿಯಾ ಕ್ಲಬ್‌, ಹೆಸರಲ್ಲಿ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಲಂಡನ್‌ನ ಹೃದಯಭಾಗದಲ್ಲಿರುವ ಸ್ಟ್ರಾಂಡ್‌ ಕಾಂಟಿನೆಂಟಲ್‌ ಹೋಟೆಲ್‌ನ ಮೊದಲ ಮಹಡಿಯಲ್ಲಿ ಈ ಕ್ಲಬ್‌ ಇದ್ದು, ಇಂಡಿಯನ್‌ ರೆಸ್ಟೋರೆಂಟ್‌ ಆಗಿ ಕಾರ್ಯ ನಿರ್ವಹಿಸುತ್ತಿತ್ತು. ಭೂಮಾಲೀಕರು ಬಿಲ್ಡಿಂಗ್‌ ಒಡೆದು ಹೋಟೆಲ್‌ ಆಧುನೀಕರಿಸಲು ಮುಂದಾಗಿದ್ದು, ತೆರವು ಮಾಡಲು ನೋಟಿಸ್‌ ನೋಡಿದ್ದಾರೆ. ಸೆ.17 ಕೊನೆಯ ದಿನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next