Advertisement

ಆರಂಭವಾಗದ ಪ್ರೀತಿಗೆ ಕೊನೆಯ ಸಲಾಂ

10:17 PM Mar 02, 2020 | mahesh |

ನನ್ನ ಪ್ರೀತಿಯ ಆರಂಭ ಶಿವಮೊಗ್ಗದಲ್ಲಿ ಕಾಲೇಜಿಗೆ ಹೋಗುವಾಗ ಬಸ್ಸಿನಲ್ಲಿ ಶುರುವಾಯಿತು. ಆ ಬಸ್ಸಿನಲ್ಲಿ ಸದಾ ಮುಖಮುಚ್ಚಿ ಕೊಂಡೇ ಇರುತ್ತಿದ್ದ ನನ್ನ ಚೆಲುವೆ ಬರುತ್ತಿದ್ದಳು. ಮೊದಲ ಸಲ ನೋಡಿದಾಗಲೇ ಇಬ್ಬರ ನಡುವೆ ಪ್ರೀತಿಯು ಆರಂಭವಾಯಿತು. ನಿರಂತರ ಎರಡು ವರ್ಷಗಳ ಕಾಲ ಬಸ್ಸಿನಲ್ಲಿ ಅರಳಿ ಕಂಪುಬೀರಿದ ಪ್ರೀತಿ, ಅದೇ ಬಸ್ಸಿನಲ್ಲೇ ಮುಗಿದುಹೋದದ್ದು ನನ್ನ ದುರಾದೃಷ್ಟವೇ ಸರಿ. ಪ್ರತಿ ದಿನವೂ ಬಸ್ಸಿನಲ್ಲೂ ನನ್ನ ಬಳಿ ನಿಲುತ್ತಿದ್ದ ಆ ಮುಖ ನೋಡದ ಚೆಲುವೆಯ ಪ್ರೀತಿ ನನಗೆ ಬೇರೆಲ್ಲಾದರೂ ದೊರಕಲು ಸಾಧ್ಯವೇ?

Advertisement

ನನಗೋ, ನನ್ನ ಪ್ರೀತಿಯನ್ನು ಆವಳ ಬಳಿ ಹೇಳುವ ಆಸೆಯಿದ್ದರೂ ಭಯ, ತಂದೆಯೊಡನೆ ಇದ್ದ ಸಲುಗೆ, ಮದುವೆಗೆ ಬಂದ ಅಕ್ಕ, ಹಣದ ಅಭದ್ರತೆ, ಸಾಂಪ್ರದಾಯಿಕ ಮನೆಯ ಹಿನ್ನಲೆ ನನ್ನ ಪ್ರೀತಿಯನ್ನು ಅವಳ ಬಳಿ ಹೇಳಲೂ ಬಿಡದೆ ಕಂಗಾಲು ಮಾಡಿದ್ದವು. ಕೊನೆಗೂ ಅವಳು ವಿದ್ಯಾಬ್ಯಾಸ ಮುಗಿಯಿತು. ಆ ನಂತರದಲ್ಲಿ, ನಮ್ಮ ನಡುವಿನ ಸಂಪರ್ಕವೂ ಇಲ್ಲವಾಯಿತು.

ಒಂದಷ್ಟು ವರ್ಷಗಳ ನಂತರ ವ್ಯವಹಾರದ ನಿಮಿತ್ತ ಒಬ್ಬರ ಮನೆಗೆ ಹೋದಾಗ ತಿಳಿಯಿತು, ಅದು ಅದೇ ಚೆಲುವೆಯ ಮನೆಯಂದು. ಆವತ್ತು ಅವಳು ನನ್ನ ಗುರುತು ಹಿಡಿದಳು. ತಾಯಿಯ ಬಳಿ ನನ್ನನ್ನು ಬಸ್ಸಿನಲ್ಲಿ ನೋಡಿದ್ದಾಗಿ ಪಿಸುಗುಟ್ಟಿದ್ದು ನನ್ನ ಕಿವಿ ತಲುಪಿತು. ಅ ನನ್ನ ಚೆಲುವೆಯ ಮುಖ ಆಲಿಯಾ ಭಟ್ಟಳನ್ನೂ ಹೋಲುತ್ತಿದ್ದುದ್ದರಿಂದ ಅವಳನ್ನು ಆಲಿಯಾ ಎಂದೂ ಕರೆಯುವ ಮನಸ್ಸಾಯಿತು. ಆದರೆ, ನಾನು ಮನದ ಮಾತು ಹೇಳಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಒಂದು ವೇಳೆ ನಾನು ಹೇಳಿದ್ದರೂ, ಅದನ್ನು ಕೇಳುವ ಸ್ಥಿತಿಯಲ್ಲಿ ಅವಳೂ ಇರಲಿಲ್ಲ. ಈಗ, ಅದನ್ನೆಲ್ಲಾ ನೆನಪಿಸಿಕೊಂಡು ಏನುಪಯೋಗ?

ರಾಸುಮ .ಸಿ. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next