Advertisement
ನಾನು ಕಟೀಲಿನಲ್ಲಿಯೇ ಹುಟ್ಟಿ ಅಲ್ಲಿಯೇ ಬಾಲ್ಯವನ್ನು ಕಳೆದವನು. ಕಟೀಲಿನ ಚರಿತ್ರೆಯ ಒಂದು ಅವಿಭಾಜ್ಯ ಭಾಗದಂತೆ ಪುರುಷೋತ್ತಮ ಭಟ್ಟರ ವ್ಯಕ್ತಿತ್ವವನ್ನು ನಾನು ಕಂಡಿದ್ದೇನೆ. ಅವರಿಗೆ ನನ್ನ ಮೇಲೆ ವಾತ್ಸಲ್ಯ. ನನಗೆ ಅವರ ಬಗ್ಗೆ ಆದರ. ಕಟೀಲಿನ ಬೀದಿ ಯಲ್ಲೆಲ್ಲಾದರೂ ಸಿಕ್ಕಿದರೆ ಕೈ ಹಿಡಿದು ಮಾತನಾಡಿಸಿ ಹೋಗುತ್ತಿದ್ದರು.
Related Articles
Advertisement
ಡಾ| ಭಾಸ್ಕರಾನಂದ ಕುಮಾರ್
1955ರಲ್ಲಿ ನಾನು ಕಟೀಲು ಮೇಳ ಸೇರಿದಾಗ ಅದರಲ್ಲಿ ಪ್ರಧಾನ ಸ್ತ್ರೀವೇಷಧಾರಿಗಳಾಗಿ ಪುರುಷೋತ್ತಮ ಭಟ್ಟರಿದ್ದರು. ನಾನಾಗ ಬಾಲಕ. ಕೆಲವು ಕಾಲ ಕೋಡಂಗಿ ವೇಷಗಳನ್ನು ಮಾಡಿ ಮತ್ತೆ ಬಾಲಗೋಪಾಲನ ಸ್ಥಾನಕ್ಕೆ ಏರಿದ್ದೆ. ಇರಾ ಗೋಪಾಲಕೃಷ್ಣ ಕುಂಡೆಚ್ಚ ಭಾಗವತರು ಮೇಳದ ಪ್ರಧಾನ ಭಾಗವತರಾಗಿದ್ದರೆ ಚೇವಾರು ರಾಮಕೃಷ್ಣ ಕಮಿ¤ ಮುಖ್ಯ ಮದೆÉಗಾರ ರಾಗಿದ್ದರು. ಬಣ್ಣದ ಕುಟ್ಟಪ್ಪು, ಚಂದ್ರಗಿರಿ ಅಂಬುರವರ ಬಣ್ಣದ ವೇಷ. ಕದ್ರಿ ವಿಷ್ಣು, ವಿಟ್ಲ ರಾಮಯ್ಯ ಶೆಟ್ಟಿ , ಕೋಳ್ಯೂರು ನಾರಾಯಣ ಭಟ್ಟ , ತೊಕ್ಕೊಟ್ಟು ಲೋಕಯ್ಯ ಇವರೆಲ್ಲ ಇದಿರು- ಪೀಠಿಕೆ ವೇಷಗಳಲ್ಲಿದ್ದರು. ಪಡ್ರೆ ಚಂದುರವರ ಪುಂಡುವೇಷ. ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್ಟರು ಹಾಸ್ಯಗಾರರು. ಆಗಲೇ ಪುರುಷೋತ್ತಮ ಭಟ್ಟರಿಗೆ ನನ್ನ ಬಗ್ಗೆ ವಿಶೇಷ ವಾತ್ಸಲ್ಯವಿತ್ತು. ನಾನು ಕೂಡ ಅವರಿಗಾಗಿ ಸಣ್ಣಪುಟ್ಟ ಸೇವೆಗಳನ್ನು ಮಾಡುತ್ತಿದ್ದೆ.
ಕಟೀಲಿನ ಮೂರು ವರ್ಷ ತಿರುಗಾಟದ ಬಳಿಕ ಎರಡು ವರ್ಷ ಕೂಡ್ಲು ಮೇಳದಲ್ಲಿ ತಿರುಗಾಟ ಮಾಡಿದೆ. ಮುಂದೆ ಅಂದರೆ 1960ರ ಸುಮಾರಿಗೆ ನನ್ನ ಗುರುಗಳಾದ ಪಡ್ರೆಚಂದುರವರೊಂದಿಗೆ ಕಲ್ಲಾಡಿ ಕೊರಗ ಶೆಟ್ಟರ ಕುಂಡಾವು (ಇರಾ) ಸೋಮನಾಥೇಶ್ವರ ಮೇಳ ಸೇರಿದೆ. ಆಗ ಕರ್ನಾಟಕ ಯಕ್ಷಗಾನ ನಾಟಕ ಸಭಾವು ಕಲ್ಲಾಡಿ ಕೊರಗ ಶೆಟ್ಟರ ಪುತ್ರ ವಿಠಲ ಶೆಟ್ಟರ ಯಜಮಾನಿಕೆಯಲ್ಲಿತ್ತು. ಆ ವರ್ಷ ಕುಂಡಾವು ಮೇಳದಲ್ಲಿ ಕಚದೇವಯಾನಿ ಪ್ರಸಂಗ ಜನಪ್ರಿಯವಾಯಿತು. ಪುರುಷೋತ್ತಮ ಭಟ್ಟರ “ಶುಕ್ರಾಚಾರ್ಯ’ನಿಗೆ ರಾಮದಾಸ ಸಾಮಗರ “ಕಚ’. ಗೋವಿಂದ ಭಟ್ಟರ “ದೇವಯಾನಿ’. ನನ್ನದು ದೇವೇಂದ್ರ ಬಲ ಅಥವಾ ರಕ್ಕಸ ಬಲ. ಮುಂದೊಂದು ದಿನ ಪುರುಷೋತ್ತಮ ಭಟ್ಟರ “ಶುಕ್ರಾಚಾರ್ಯ’ನಿಗೆ ನಾನೇ “ಕಚ’ನ ಪಾತ್ರ ಮಾಡುವ ಸಂದರ್ಭ ಬಂತು. ಆಗ ಅವರೇ ಹೇಳಿಕೊಟ್ಟು ಮುನ್ನಡೆಸಿದರು.
ಒಂದು ದಿನ ಕುಂಡಾವು ಮೇಳದಲ್ಲಿ ಹೆಚ್ಚಿನ ಕಲಾವಿದರೇ ಇಲ್ಲವಾಗಿ ನಾನು ಒಂದೇ ರಾತ್ರಿ ಸಣ್ಣಪುಟ್ಟ ಪಾತ್ರಗಳೂ ಸೇರಿದಂತೆ 13 ವೇಷಗಳನ್ನು ಮಾಡಿದ್ದೆ. ಗೋವಿಂದ ಭಟ್ಟರು ಕೂಡ ಇದೇ ರೀತಿ ಪರಿಶ್ರಮ ವಹಿಸಿ ಬೆಳೆದುಬಂದವರು. ನಾನೂ ಗೋವಿಂದ ಭಟ್ಟರೂ ಆಗ ಹುಡುಗರು. ಮೇಳದಲ್ಲಿ ವೇಷಗಳನ್ನು ಮಾಡುವುದಲ್ಲದೆ ಸಹಾಯಕ ಕೆಲಸಗಳನ್ನು ಮಾಡುತ್ತಿದ್ದೆವು. ಹಾಗಾಗಿ, ಎಲ್ಲರಿಗೂ ನಮ್ಮ ಬಗ್ಗೆ ಅಭಿಮಾನ. ನಮ್ಮ ದುಡಿಮೆಯ ನಿಷ್ಠೆಯಿಂದಾಗಿ ಪುರುಷೋತ್ತಮ ಭಟ್ಟರಿಗೂ ಹತ್ತಿರವಾಗಿದ್ದೆವು. ನಮ್ಮನ್ನು ಗಮನಿಸುತ್ತಿದ್ದ ಕೊರಗಶೆಟ್ಟರು, “ಮೊಕ್ಲು ಮಿತ್ತ್ಗೆ ಮಲ್ಲ ಕಲಾವಿದರಾಪೆರ್’ (ಮುಂದೆ ಇವರು ದೊಡ್ಡ ಕಲಾವಿದರಾಗುತ್ತಾರೆ) ಎಂದು ಪುರುಷೋತ್ತಮ ಭಟ್ಟರಲ್ಲಿ ಹೇಳಿಕೊಂಡಿದ್ದರಂತೆ.
ಪುರುಷೋತ್ತಮ ಭಟ್ಟರು ತಮ್ಮ ಪ್ರವಾಸಿ ಯಕ್ಷಗಾನ ತಂಡದಲ್ಲಿ ನಮ್ಮನ್ನು ಬಿಡದೇ ಸೇರಿಸಿಕೊಳ್ಳುತ್ತಿದ್ದರು. ಮಳೆಗಾಲದಲ್ಲಿ ಮೇಳಗಳಿಗೆ ಬಿಡುವು. ಪ್ರತಿ ಮಹಾಲಯ ಅಮಾವಾಸ್ಯೆಯ ದಿನ ಮದರಾಸಿಗೆ ಯಕ್ಷಗಾನ ತಂಡ ಹೊರಡುತ್ತಿತ್ತು. ನನಗಂತೂ ತುಂಬ ಉತ್ಸಾಹ. ರೈಲಿನಲ್ಲಿ ವೇಷಭೂಷಣಗಳ ಸಾಗಾಟದಿಂದ ತೊಡಗಿ, ಚೌಕಿಯ ಕೆಲಸಗಳನ್ನೂ ಮಾಡಿ, ಯಾವುದೇ ವೇಷ ಗಳನ್ನು ಮಾಡಲು ಸಿದ್ಧನಾಗುತ್ತಿದ್ದೆ. ಹಾಗಾಗಿ, ಪುರುಷೋತ್ತಮ ಭಟ್ಟರು ನನ್ನ ಬಗ್ಗೆ ಯಾವುದೇ ಭೇದವೆಣಿಸದೆ “ನಮ್ಮ ಹುಡುಗ’ ಎಂಬ ಭಾವದಿಂದಲೇ ನನ್ನನ್ನು ನೋಡಿಕೊಳ್ಳುತ್ತಿದ್ದರು.
ಅವರ ಮಾತುಗಾರಿಕೆ “ಟ ಠ ಡ ಢ ಣ’ ಎನ್ನುತ್ತಾರಲ್ಲ, ಹಾಗೆ! ಮಹಾ ಪ್ರಾಣವನ್ನು ಮಹಾಪ್ರಾಣವಾಗಿಯೇ ಉಚ್ಚರಿಸುತ್ತಿದ್ದರು. ಪ್ರಾಯವಾದ ಮೇಲೂ ಮಾತುಗಾರಿಕೆಯ ಗಾಂಭೀರ್ಯ ಬಿಟ್ಟು ಕೊಡುತ್ತಿರಲಿಲ್ಲ. ಮಾತು ಅಸ್ಖಲಿತವಾಗಬೇಕೆಂದು ಮಹಾಪ್ರಾಣಗಳಿಗೆ ಒತ್ತುಕೊಟ್ಟು ಪ್ರಜ್ಞಾಪೂರ್ವಕ ವಾಗಿ ಉಚ್ಚರಿಸುತ್ತಿದ್ದರು. ಹೀಗಾಗಿ, ಮಾತು ಕೊಂಚ ನಿಧಾನ- ದೀರ್ಘ ಅನ್ನಿಸುತ್ತಿತ್ತು. ತನ್ನಿಂದ ಪಾತ್ರಚಿತ್ರಣಕ್ಕೆ ಕುಂದಾಗಬಾರದೆಂದು ಸ್ತ್ರೀವೇಷ ತೊರೆದು ಪುರುಷ ವೇಷ ಮಾಡಲಾರಂಭಿಸಿದ್ದರು.
ಅರುವ ಕೊರಗಪ್ಪ ಶೆಟ್ಟಿ
ದ್ರೌಪದೀ ವಸ್ತ್ರಾಪಹಾರ ಎಂಬ ಪ್ರಸಂಗ ಪ್ರಸಿದ್ಧಿಗೆ ಬಂದದ್ದು ಇರಾ ಸೋಮನಾಥೇಶ್ವರ ಮೇಳದಲ್ಲಿ; ಸುಮಾರು 60ರ ದಶಕದ ಸುಮಾರಿಗೆ. ಭಾಗವತಿಕೆಗೆ ಮರವಂತೆ ನರಸಿಂಹ ದಾಸರು. ನನ್ನದು ದುರ್ಯೋಧನನ ಪಾತ್ರ. ದುಶಾÏಸನನಾಗಿ ಅರುವ ಕೊರಗಪ್ಪ ಶೆಟ್ಟರಿದ್ದರು. ದ್ರೌಪದಿಯ ಪಾತ್ರವನ್ನು ಕೋಳ್ಯೂರು ರಾಮಚಂದ್ರ ರಾಯರು ವಹಿಸುತ್ತಿದ್ದರು. ಮೊದಲ ವರ್ಷ ಮಲ್ಪೆ ರಾಮದಾಸ ಸಾಮಗರು ಶಕುನಿಯ ಪಾತ್ರದಲ್ಲಿ ಕಾಣಿಸಿಕೊಂಡರೆ ಮುಂದಿನ ವರ್ಷ ಅವರ ಅನುಪಸ್ಥಿತಿಯಲ್ಲಿ ಗುಂಪೆ ರಾಮಯ್ಯ ರೈಗಳು ಆ ಪಾತ್ರವನ್ನು ತುಂಬಿದ್ದರು. ನಾನು ಹೇಳಲೇ ಬೇಕಾಗಿರುವುದು ಧರ್ಮರಾಯ ಪಾತ್ರಧಾರಿಯ ಬಗ್ಗೆ. ಅದು ಕಡಂದೇಲು ಪುರುಷೋತ್ತಮ ಭಟ್ಟರು.
ಬದುಕಿನಲ್ಲಿಯೂ ಅವರು ಧರ್ಮರಾಯನೇ. ನಾಟ್ಯಾಭಿನಯಗಳ ವಿಶೇಷ ಅರಿವಿಲ್ಲ ಎಂಬುದಕ್ಕಿಂತಲೂ ತಮ್ಮ ವ್ಯಕ್ತಿ ಸ್ವಭಾವಕ್ಕೆ ಒಗ್ಗುವ ಕಾರಣದಿಂದಲೋ ಏನೋ; ಅವರು ಧರ್ಮರಾಯನಂಥ ಸಾತ್ತಿಕ ಪಾತ್ರಗಳನ್ನು ಇಷ್ಟ ಪಟ್ಟು ಮಾಡುತ್ತಿದ್ದರು. ಬಹುಶಃ ದ್ರೌಪದೀ ವಸ್ತ್ರಾಪಹಾರ ದಲ್ಲಿ ಬೇರೆ ಕೆಲವು ಪಾತ್ರಗಳು ಜನಪ್ರಿಯತೆ ಪಡೆದಿದ್ದರೆ ಧರ್ಮರಾಯನಂಥ ಪಾತ್ರಕ್ಕೂ ವಿಶೇಷ ಸ್ಥಾನವನ್ನು ಕಲ್ಪಿಸಿದ ವರು ಅವರೆನ್ನಬೇಕು. ಒಂದರ್ಥದಲ್ಲಿ ಇಂಥ ಪಾತ್ರಗಳನ್ನು ಕಾಣಿಸುವುದು ಸವಾಲು. ಅವರ ವಚೋವಿಲಾಸ ಮತ್ತು ಕಂಠ ಮಾಧುರ್ಯಗಳು ಆ ಪಾತ್ರಗಳಿಗೆ ಪೂರಕವಾಗಿದ್ದವು.
ನನಗಿಂತ ಇಪ್ಪತ್ತು ವರ್ಷಗಳಷ್ಟು ಹಿರಿಯರಾದ ಅವರು “ಯಾರು ಗೋವಿಂದನಾ?’ ಎಂದು ಕಟೀಲಿನಲ್ಲೊ, ಕಿನ್ನಿಗೋಳಿಯಲ್ಲೊ ನನ್ನನ್ನು ಕುರಿತು ವಿಚಾರಿಸುವಾಗಲೂ ಅದೇ ವಚೋವಿಲಾಸ, ಕಂಠ ಮಾಧುರ್ಯ! ಆಗ ದಶರಥ ನಿರ್ಯಾಣದಿಂದ ತೊಡಗಿ ಭರತಾಗಮನ ದಾಟಿ ಪಂಚವಟಿಯವರೆಗಿನ ಪ್ರಸಂಗವನ್ನು ಪೂರ್ಣ ರಾತ್ರಿ ಆಡುತ್ತಿದ್ದೆವು. ಕಿರಿಯ ಬಲಿಪ ನಾರಾಯಣ ಭಾಗವತರು ಭಾಗವತಿಕೆಗಿದ್ದರು. ಭರತಾಗಮನದಲ್ಲಿ ಮಲ್ಪೆ ರಾಮದಾಸ ಸಾಮಗರ ಶ್ರೀರಾಮ, ಕುಂಬಳೆ ಸುಂದರ ರಾಯರ ಭರತ. ನಾನು “ಕೈಕೇಯಿ’ ಮಾಡಿ ಬೆಳಗಿನ ಜಾವ “ಮಾಯಾ ಶೂರ್ಪನಖೀ’ಯಾಗುತ್ತಿದ್ದೆ. “ಘೋರ ಶೂರ್ಪನಖೀ’ಯಾಗಿ ಬಣ್ಣದ ಕುಟ್ಟಪ್ಪುನವರು ಇದ್ದಿರಬಹುದು, ನೆನಪಿಲ್ಲ.
ಆವರೆಗೂ ಕೈಕೇಯಿಯ ಪಾತ್ರ ಮಾಡಿ ಪ್ರಸಿದ್ಧರಾದ ವರು ಪುರುಷೋತ್ತಮ ಭಟ್ಟರು. ಹೊಸಹಿತ್ಲು ಗಣಪತಿ ಭಟ್ಟರ, ಮಲ್ಪೆ ಶಂಕರನಾರಾಯಣ ಸಾಮಗರ ದಶರಥನ ಪಾತ್ರಕ್ಕೆ ಅವರು ಕೈಕೇಯಿಯಾಗಿದ್ದವರು. ಈಗ ಅವರ ದಶರಥನಿಗೆ ನನ್ನ ಕೈಕೇಯಿ! ಹಗಲು ಹೊತ್ತು ಚೌಕಿಯಲ್ಲಿ ಪುರುಷೋತ್ತಮ ಭಟ್ಟರಲ್ಲಿ ಮೆಲ್ಲನೆ ಮಾಹಿತಿ ಕೇಳುತ್ತಿದ್ದೆ. ನನಗೆ ಹೇಳಿಕೊಟ್ಟರು ಕೂಡ. ಸಾಮಾನ್ಯ ಯಾರ ಪಾತ್ರ ನಿರ್ವಹಣೆಯೂ ಅವರಿಗೆ ಸರಿಬರುತ್ತಿರಲಿಲ್ಲ. “ಎಂಥದೋ ಮಾಡ್ತಾನೆ’ ಎಂಬ ಪ್ರತಿಕ್ರಿಯೆಯಲ್ಲದೆ ಹೊಗಳಿದ್ದು ಗೊತ್ತಿಲ್ಲ. ನನ್ನ ಕೈಕೇಯಿ ಪಾತ್ರವನ್ನು ಹೊಗಳಿದ್ದಾರೋ ಇಲ್ಲವೊ ಗೊತ್ತಿಲ್ಲ. ಆದರೆ, ತಾತ್ಸಾರದಿಂದ ನೋಡಲಿಲ್ಲ ಎಂದು ನಂಬಿದ್ದೇನೆ.
ನಾನು ಕೈಕೇಯಿ, ಅಂಬೆಯಂಥ ಪಾತ್ರಗಳನ್ನು ಮಾಡು ವಾಗ ಅವರ ನಡೆಯನ್ನು ಅನುಸರಿಸಿದ್ದೇನೆ. ಬಹುಶಃ ತೆಂಕು ತಿಟ್ಟಿನಲ್ಲಿ ಅವರ ಅಂಬೆಯ ಪಾತ್ರಕ್ಕೆ ಮೊದಲನೆಯ ಸ್ಥಾನ.
ಕೆ. ಗೋವಿಂದ ಭಟ್