Advertisement

ಜರ್ಮನಿಯಲ್ಲಿ ಬೃಹತ್‌ ಸ್ವಸ್ತಿಕ

06:30 AM Nov 22, 2017 | Harsha Rao |

ಹೊಸದಿಲ್ಲಿ: ನಾಜಿ ಇತಿಹಾಸ ನೆನಪಿಸುವಂಥ ಕುರುಹೊಂದು ಜರ್ಮನಿಯಲ್ಲಿ ಪತ್ತೆಯಾಗಿದೆ. ನೆಲದಲ್ಲಿ ಹೂತುಹೋಗಿದ್ದ ಬೃಹದಾಕಾರದ ಸ್ವಸ್ತಿಕ ಆಕೃತಿಯೊಂದು ಇಲ್ಲಿಯ ಹಮ್‌ಬರ್ಗ್‌ನಲ್ಲಿ ಪತ್ತೆಯಾಗಿದೆ. ನಾಜಿ ಚಿಹ್ನೆಯಾದ ಇದನ್ನು, 70 ವರ್ಷ ಹಳೆಯ ನಾಜಿ ಸ್ಮಾರಕ, ಯುದ್ಧ ಸಂದರ್ಭದಲ್ಲಿ ನಿರ್ಮಿಸಲಾಗಿ ರಬಹುದು ಎಂದು ಅಂದಾಜಿಸಲಾಗಿದೆ. ಉಕ್ಕು ಮತ್ತು ಸಿಮೆಂಟ್‌ ಬಳಸಿ ಇದನ್ನು ನಿರ್ಮಿಸಲಾಗಿದೆ. 

Advertisement

ಇಲ್ಲಿಯ ಹೇನ್‌ ಕ್ಲಿನ್‌ ಕ್ರೀಡಾಂಗಣ ನವೀಕರಿಸುವ ವೇಳೆ ನೆಲದಲ್ಲಿ ಹೂತು ಹೋಗಿದ್ದ ಈ ಸ್ವಸ್ತಿಕ ಬುಲ್ಡೋಜರ್‌ನಿಂದಾಗಿ ಪತ್ತೆ ಯಾಯಿತು. ಈಗಿನ ಕಾಲಘಟ್ಟದಲ್ಲಿ ನಾಜಿ ಗುರು ತುಗಳನ್ನು ಉಳಿಸಿಕೊಳ್ಳುವುದು ಅಪ ರಾಧ ಎಂಬ ಮನಃಸ್ಥಿತಿ ಜರ್ಮನರಲ್ಲಿ ಮನೆ ಮಾಡಿದೆ. ಈ ಸ್ಮಾರಕದ ಕುರಿತು ಸ್ಥಳೀಯ ಆಡಳಿತಕ್ಕೆ ತಿಳಿಸಿದಾಗ, ಅದೂ ಕೂಡ ಇಂಥದ್ದೇ ಮನಃಸ್ಥಿತಿಯಿಂದ ಈ ಸ್ಮಾರಕವನ್ನು ನೋಡಿದೆ. ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ರಾಜಕಾರಣಿ, “ಇದು ಕ್ರೂರ ಇತಿಹಾಸದ ಅತ್ಯಂತ ಭೀಭತ್ಸವಾದ ಗುರುತು. ಆದಷ್ಟು ಬೇಗ ಇದನ್ನು ಇಲ್ಲಿಂದ ಹೊರ ಹಾಕಬೇಕು’ ಎಂದಿದ್ದಾರೆ. ದರೆ ಈ ಸ್ವಸ್ತಿಕವನ್ನು ಸ್ಥಳಾಂತ ರಿಸುವುದೋ ಅಥವಾ ಭಗ್ನಗೊಳಿಸುವುದೋ ಎಂದು ಇನ್ನೂ ತೀರ್ಮಾನವಾಗಿಲ್ಲ. ಇದು ತುಂಬಾ ಭಾರವಿರುವ ಕಾರಣ 
ಅದನ್ನು ಸ್ಥಳದಲ್ಲೇ ಭಗ್ನಗೊಳಿಸುವುದು ಉತ್ತಮ ಎಂಬ ಅಭಿಪ್ರಾಯ ಹಲವರಿಂದ ವ್ಯಕ್ತ ವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next