Advertisement

ಬಳಕೆಯಿಂದ ದೂರಾದ ಭಾಷೆ ಸಂಸ್ಕೃತ

12:34 AM Apr 24, 2019 | Lakshmi GovindaRaju |

ಬೆಂಗಳೂರು: ಜನ ಸಾಮಾನ್ಯರ ಬಳಕೆಯಿಂದ ದೂರ ಉಳಿದ ಹಿನ್ನೆಲೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಸಂಸ್ಕೃತ ಇಂದು ಅಳಿವಿನ ಅಂಚಿನಲ್ಲಿದೆ ಎಂದು ತುಮಕೂರಿನ ಸಿದ್ಧªಗಂಗಾ ಮಠದ ಶ್ರೀ ಸಿದ್ಧœಲಿಂಗ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

Advertisement

ಮಂಗಳವಾರ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನೂತನ ವಿದ್ಯಾರ್ಥಿನಿಲಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಜನಸಾಮಾನ್ಯರಿಂದ ದೂರ ಉಳಿದ ಭಾಷೆಯ ವ್ಯಾಪ್ತಿ, ಮನ್ನಣೆ ಹಾಗೂ ಜೀವಿತಾವಧಿ ಕಡಿಮೆ.

ರಾಜ ಮಹಾರಾಜರು, ಮಠಾಧೀಶರ ಪೋಷಣೆಯಿಂದಾಗಿ ಕೆಲ ಭಾಗಗಳಲ್ಲಿ ಸಂಸ್ಕೃತ ಭಾಷೆ ಇಂದು ಕಾಣುತ್ತಿದ್ದೇವೆ. ಈಗ ಸಂಸ್ಕೃತ ವಿಶ್ವವಿದ್ಯಾಲಯವು ಭಾಷಾ ಉಳಿವಿಗಾಗಿ ನಾನಾ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇಂದರಿಂದ ಸಂಸ್ಕೃತ ಬೆಳವಣಿಗೆಯ ಭರವಸೆ ಮೂಡಿಸಿದೆ ಎಂದರು.

ಸಂಸ್ಕೃತ ವಿವಿ ಕುಲಪತಿ ಪ್ರೊ.ಪದ್ಮಾಶೇಖರ್‌ ಮಾತನಾಡಿ, ಯಾವುದೇ ವಿಶ್ವವಿದ್ಯಾಲಯವು ಒಂದು ವರ್ಗದ ಸ್ವತ್ತಲ್ಲ. ಅದರಲ್ಲಿ ಎಲ್ಲ ವರ್ಗದ ವಿದ್ಯಾರ್ಥಿಗಳೂ ಕಲಿಯಬೇಕು. ಆಗ ಮಾತ್ರ ಅದು ವಿಶ್ವವಿದ್ಯಾಲಯ ಎನ್ನಿಸಿಕೊಳ್ಳುಲು ಅರ್ಹವಾಗುತ್ತದೆ.

ಈ ನಿಟ್ಟಿನಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಮುನ್ನಡಿ ಇಡುತ್ತಿದ್ದು, ಇನ್ನೂ ಉತ್ತಮ ಮಟ್ಟಕ್ಕೆ ಬೆಳೆಯಬೇಕು. ಇಲ್ಲಿನ ವಸತಿ ಶಾಲೆ ಮೂಲಸೌಕರ್ಯಗಳ ಕೊರತೆಯಿಂದ ಕೂಡಿದ್ದು, ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆ ಆಗಿತ್ತು.

Advertisement

ಹೀಗಾಗಿ, ಸುಮಾರು 1.99 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಾಗಿದೆ. ಈ ಕಟ್ಟಡ ಮೂರು ಅಂತಸ್ತುಗಳನ್ನು ಹೊಂದಲಿದ್ದು, 160 ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಬಹುದಾಗಿದೆ. ಕಾಮಗಾರಿ ಪೂರ್ಣಗೊಂಡು ವಿದ್ಯಾರ್ಥಿಗಳಿಗೆ ಬೇಗನೆ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು.

ಹಿರಿಯ ಲೇಖಕಿ ಪ್ರೊ.ಕಮಲಾ ಹಂಪನಾ,ಸಂಸ್ಕೃತ ವಿಶ್ವವಿದ್ಯಾಲಯ ಕುಲಸಚಿವೆ ಎಂ. ಶಿಲ್ಪಾ ಉಪಸ್ಥಿತರಿದ್ದರು.

ಮಕ್ಕಳಿಗೆ ಸಂಸ್ಕೃತ ಪಾಠ: ಸಿದ್ಧಗಂಗಾ ಮಠದಲ್ಲಿ ಸಂಸ್ಕೃತ ಭಾಷೆಗೆ ಒತ್ತು ನೀಡಲಾಗುತ್ತಿದ್ದು, ಇಂದು ನಮ್ಮಲ್ಲಿನ ಸಹಸ್ರಾರು ಮಕ್ಕಳು ಸಂಸ್ಕೃತವನ್ನು ಕಲಿತಿದ್ದಾರೆ. ಹಿಂದೆಲ್ಲಾ ಸಂಸ್ಕೃತ ಭಾಷೆ ಸೇರಿದಂತೆ ವಿದ್ಯಾಭ್ಯಾಸ ಮಾಡುವವರಿಗೆ ಅವಕಾಶಗಳು ಬಹಳ ಕಡಿಮೆ ಇತ್ತು.

ಈಗ ವ್ಯವಸ್ಥೆ ಬದಲಾಗಿದ್ದು, ಕಲಿಯಲು ಬಹಳಷ್ಟು ಅವಕಾಶವಿದೆ. ಸರ್ಕಾರವು ಕೂಡಾ ಅಗತ್ಯ ಸಹಕಾರ ನೀಡಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿಸಿದೆ. ಈ ಸೌಲಭ್ಯ ಬಳಸಿಕೊಂಡು ಸಂಸ್ಕೃತದ ಉಳಿವಿಗೆ ಎಲ್ಲರೂ ಮುಂದಾಗಬೇಕು ಎಂದು ಶ್ರೀ ಸಿದ್ಧœಲಿಂಗ ಸ್ವಾಮೀಜಿ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next