Advertisement
ಜೆಡಿಎಸ್‌ನ ಕೆ.ಅನ್ನದಾನಿ ಪ್ರಶ್ನೆಗೆ ಉತ್ತರಿಸಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ಮತ್ತುಪಂಗಡದವರಿಗೆ ಹಂಚಿಕೆ ಮಾಡುವ ಭೂಮಿಯನ್ನು ಕೃಷಿಗಷ್ಟೇ ಬಳಸಬೇಕು. ಆದ್ಯತೆ ಮೇರೆಗೆ ಭೂಮಿ ಹಂಚಿಕೆ ಮಾಡಲಾಗುತ್ತಿದೆ ಎಂದು ಹೇಳಿದರು. ಇದಕ್ಕೆ ಅನ್ನದಾನಿ, ಉತ್ತರ ಕರ್ನಾಟಕ ಭಾಗದಲ್ಲಿ ತುಸು ಕಡಿಮೆ ಬೆಲೆಗೆ ಭೂಮಿ ಸಿಗುತ್ತದೆ. ಆದರೆ
ಹಳೇ ಮೈಸೂರು ಭಾಗದಲ್ಲಿ ಭೂಮಿ ಬೆಲೆ ದುಬಾರಿಯಾಗಿದೆ. ಅಲ್ಲದೇ ಹಾಗಾಗಿ ಭೂಮಿ ಖರೀದಿ ದರ ಹೆಚ್ಚಿಸಬೇಕು. ಕೇವಲ ಭೂಮಿ
ನೀಡಿದರಷ್ಟೇ ಸಾಲದು. ಕೊಳವೆ ಬಾವಿ ಕೊರೆಸಿಕೊಟ್ಟು, ಕೃಷಿ ಚಟುವಟಿಕೆ ನಡೆಸಲು ಪೂರಕ ಸೌಲಭ್ಯ ಕಲ್ಪಿಸಬೇಕು. ಆದರೆ ಆ ಕೆಲಸ ನಡೆಯುತ್ತಿಲ್ಲ. ಪರಿಶಿಷ್ಟ ಜಾತಿ, ಪಂಗಡದವರಿಗೆ ಬ್ಯಾಂಕ್‌ಗಳು ಸಾಲವನ್ನೇ ನೀಡುತ್ತಿಲ್ಲ. ಇದರಿಂದ ಅವರ ಆರ್ಥಿಕತೆ ಸುಧಾರಿಸದಂತಾಗಿದೆ ಎಂದು ಹೇಳಿದರು.
ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಕಾಲಮಿತಿ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಈಗಾಗಲೇ ಮಾರ್ಗಸೂಚಿ ದರ ಮೂರು ಪಟ್ಟು ಹೆಚ್ಚು ದರದಲ್ಲಿ ಭೂಮಿ ಖರೀದಿಗೆ ಅವಕಾಶವಿದೆ. ಅದಕ್ಕಿಂತ ಹೆಚ್ಚು ದರದಲ್ಲಿ ಖರೀದಿಸಬೇಕಾದರೆ ಸಂಬಂಧಪಟ್ಟವರಿಗೆ ಪ್ರಸ್ತಾವ ಕೂಡ ಸಲ್ಲಿಸಬಹುದು. ಹಂಚಿಕೆಯಾಗುವ ಭೂಮಿ
ಫಲವತ್ತಾಗಿರಬೇಕಾಗುತ್ತದೆ. ಮಣ್ಣು ಪರೀಕ್ಷೆ ಇತರೆ ದೃಢೀಕರಣದ ಬಳಿಕವಷ್ಟೇ ಮಂಜೂರು ಮಾಡಲಾಗುವುದು. ತ್ವರಿತವಾಗಿ ಹಂಚಿಕೆ ಮಾಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಇದೇ ಕಾರಣಕ್ಕೆ ನಾನು ಠೇವಣಿಯನ್ನು ವಾಣಿಜ್ಯ ಬ್ಯಾಂಕ್‌ಗೆ ಬದಲಾಗಿ ಸಹಕಾರಿ ಬ್ಯಾಂಕ್ ನಲ್ಲಿಡಿ ಎಂದು ಹೇಳುವುದು. ಸಬ್ಸಿಡಿ ಮೊತ್ತವನ್ನು ಸಹಕಾರ ಬ್ಯಾಂಕ್‌ಗೆ ರವಾನಿಸಿ ವ್ಯವಹರಿಸಲು ಅವಕಾಶವಿದೆ. ನಾನು ಕೋಲಾರದಲ್ಲಿ ಇದನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಎಲ್ಲ ಫಲಾನು ಭವಿಗಳಿಗೂ ಸೌಲಭ್ಯ ಕಲ್ಪಿಸಲಾಗಿದೆ. ವಾಣಿಜ್ಯ
ಬ್ಯಾಂಕ್‌ನ ಹಂಗಿಗೆ ಹೋಗಬೇಡಿ ಎಂದರು. ಕೊನೆಗೆ ಸಚಿವರು ಮಾತನಾಡಿ, ಭೂ ಒಡೆತನ ಮಂಜೂರಾದಾಗಲೇ ಗಂಗಕಲ್ಯಾಣ ಯೋಜನೆ ಯನ್ನೂ ಜೋಡಿಸಿ ಕೊಳವೆಬಾವಿ ಜತೆಗೆ ಇತರೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
Related Articles
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಕ್ರೈಸ್ ಎಲ್ಲ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳಿಗೆ ಆಹಾರ, ಸಮವಸ್ತ್ರ, ಬ್ಯಾಗ್, ಪೀಠೊಪಕರಣ ಪೂರೈಕೆ ಪಾರದರ್ಶಕವಾಗಿರಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ
ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಬಿಜೆಪಿಯ ಕುಮಾರ್ ಬಂಗಾರಪ್ಪ ಅವರ, ಹಾಸ್ಟೆಲ್‌ಗಳಿಗೆ ಆಹಾರ ಪೂರೈಕೆಗೆ ಕಡಿಮೆ ದರಕ್ಕೆ ಟೆಂಡರ್ ಪಡೆದು ಅಕ್ರಮ ಎಸಗಲಾಗುತ್ತಿದೆ ಎಂಬ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಕೆಲವೆಡೆ ಲೋಪ ಆಗಿರುವುದು
ಕಂಡುಬಂದಿದೆ. ಹಾಸ್ಟೆಲ್‌ಗಳಲ್ಲಿ ಟೆಂಡರ್ ಸೇರಿ ಅಲ್ಲಿನ ಪರಿಸ್ಥಿತಿ ಸುಧಾರಣೆಗೆ ಸಲಹೆ ನೀಡುವಂತೆ ಎಲ್ಲ ಶಾಸಕರಿಗೆ ಪತ್ರ ಬರೆದಿದ್ದೆ. 8 ಶಾಸಕರು ಮಾತ್ರ ಸಲಹೆ ಕೊಟ್ಟಿದ್ದಾರೆ. ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯರ ಜತೆಯೂ ಚರ್ಚೆ ನಡೆಸಿದ್ದೇನೆ. ಒಟ್ಟಾರೆ, ಸಮಗ್ರ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಶಿವಮೊಗ್ಗ ಪ್ರಕರಣದಲ್ಲಿ ಟೆಂಡರ್‌ಗೆ ಅಲ್ಲಿನ ಜಿಲ್ಲಾಧಿಕಾರಿಗಳು ತಡೆ ನೀಡಿದ್ದಾರೆ ಎಂದು ಹೇಳಿದರು.
Advertisement