Advertisement

ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಕೆರೆ ಜೀರ್ಣೋದ್ಧಾರಕ್ಕೆ ಸಂಕಲ್ಪ

09:22 PM Mar 25, 2019 | sudhir |

ಕಾಪು : ಕಳೆದ ಮಳೆಗಾಲದಲ್ಲಿ ಕುಸಿತಕ್ಕೊಳಗಾಗಿದ್ದ ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ದೇವರ ಸರೋವರವನ್ನು ಧಾರ್ಮಿಕ ದತ್ತಿ ಇಲಾಖೆ, ಜೀರ್ಣೋದ್ದಾರ ಸಮಿತಿ ಮತ್ತು ಭಕ್ತರ ಸಹಕಾರದೊಂದಿಗೆ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಪುನರ್‌ ನವೀಕರಣಗೊಳಿಸಲು ಸಂಕಲ್ಪಿಸಲಾಗಿದೆ.

Advertisement

ದೇಗುಲದ ಅರ್ಚಕ ವೇ| ಮೂ| ಹರಿಕೃಷ್ಣ ಉಡುಪ ಅವರ ನೇತೃತ್ವದಲ್ಲಿ ಗ್ರಾಮಸ್ಥರ ಸಹಭಾಗಿತ್ವದೊಂದಿಗೆ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದ ಬಳಿಕ ದೇಗುಲದ ಪವಿತ್ರಪಾಣಿ ಮನೆತನದ ಕೆ.ಎಲ್‌. ಕುಂಡಂತಾಯ ಮತ್ತು ಸತೀಶ್‌ ಕುಂಡಂತಾಯ ಅವರು ಕೆರೆ ನವೀಕರಣ ಕಾರ್ಯಕ್ಕೆ ಚಾಲನೆ ನೀಡಿದರು.

ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಡಿಮನೆ ದೇವರಾಜ್‌ ರಾವ್‌, ಆಡಳಿತ ಮಂಡಳಿಯ ಸದಸ್ಯರಾದ ಶ್ರೀವತ್ಸ ರಾವ್‌, ಸಂಜೀವ ಶೆಟ್ಟಿ, ಸಂತೋಷ್‌ ಶೆಟ್ಟಿ, ಗಿರಿಜಾ ಪೂಜಾರ್ತಿ, ಸರೋಜಿನಿ ದೇವಾಡಿಗ, ನಿಕಟಪೂರ್ವ ಸದಸ್ಯ ಪ್ರಭಾಕರ ಶೆಟ್ಟಿ ಎಲ್ಲೂರುಗುತ್ತು, ಅರ್ಚಕ ವೇ| ಮೂ| ಚಕ್ರಪಾಣಿ ಉಡುಪ, ಎಲ್ಲೂರು ಗ್ರಾ.ಪಂ. ಅಧ್ಯಕ್ಷೆ ವಸಂತಿ ಮಧ್ವರಾಜ್‌, ಮಾಜಿ ಅಧ್ಯಕ್ಷ ವೈ. ಯಶವಂತ ಶೆಟ್ಟಿ, ಸದಸ್ಯ ಸತೀಶ್‌ ಶೆಟ್ಟಿ ಗುಡ್ಡೆಚ್ಚಿ, ಕುಂಜೂರು ಶ್ರೀ ದುರ್ಗಾ ಮಿತ್ರವೃಂದದ
ಅಧ್ಯಕ್ಷ ಸುನೀಲ್‌ ಎಸ್‌.ಎಂ., ದೇಗುಲದ ಪ್ರಬಂಧಕ ರಾಘವೇಂದ್ರ ಶೆಟ್ಟಿ, ದಿನೇಶ್‌ ಪೂಜಾರಿ, ರಮೇಶ್‌ ಶೆಟ್ಟಿ, ಮನೋಹರ್‌ ರಾವ್‌ ಪಣಿಯೂರು, ಪ್ರಕಾಶ್‌ ಶೆಟ್ಟಿ, ಸಾಧು ಶೆಟ್ಟಿ ತೆಂಕರಲಾಕ್ಯಾರು, ವೈ. ರಾಮಚಂದ್ರ ಭಟ್‌, ಶ್ರೀನಿವಾಸ ತೋಣಿತ್ತಾಯ, ರಾಮಚಂದ್ರ ತೋಣಿತ್ತಾಯ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಚಿಂತನೆ ನಡೆಸಲಾಗಿದೆ.
50 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ದೇಗುಲದ ಕೆರೆಯ ಉತ್ತರದ ಬದಿಯು ಕಳೆದ ಮಳೆಗಾಲದಲ್ಲಿ ಕುಸಿದು ಬಿದ್ದು ಹಾನಿಯಾಗಿತ್ತು. ಆ ಬಳಿಕ ನಿರ್ವಹಣೆಯ ಕೊರತೆಯಿಂದಾಗಿ ಕೆರೆಯ ದಕ್ಷಿಣ ಭಾಗದಲ್ಲೂ ಬಿರುಕು ಕಾಣಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಉಲ್ಬಣಗೊಂಡು, ದೇಗುಲದ ಮೂಲ ಸ್ವರೂಪಕ್ಕೂ ಹಾನಿಯಾಗುವ ಭೀತಿ ಎದುರಾಗಿತ್ತು. ಈ ನಿಟ್ಟಿನಲ್ಲಿ ಗ್ರಾಮಸ್ಥರು, ದಾನಿಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯ ಸಹಕಾರದೊಂದಿಗೆ ಕೆರೆಯನ್ನು 25 ಲಕ್ಷ ರೂ. ವೆಚ್ಚದಲ್ಲಿ ಪುನರ್‌ ನಿರ್ಮಿಸಲು ಚಿಂತನೆ ನಡೆಸಲಾಗಿದೆ.
-ದೇವರಾಜ ರಾವ್‌ ನಡಿಮನೆ ಅಧ್ಯಕ್ಷರು, ಆಡಳಿತ ಮಂಡಳಿ

Advertisement

Udayavani is now on Telegram. Click here to join our channel and stay updated with the latest news.

Next