Advertisement

ಬ್ರಿಟನ್‌ನಲ್ಲಿ ಕಳವಳಕ್ಕೆ ಕಾರಣವಾದ ಪಿಪಿಇ ಕೊರತೆ

06:07 PM Apr 13, 2020 | Sriram |

ಗಂಭೀರ ಲೋಪ ಆರೋಗ್ಯ ಸಚಿವ ಮ್ಯಾಟ್‌ ಹ್ಯಾನ್‌ಕಾಕ್‌ ಎನ್‌ಎಚ್‌ಎಸ್‌ ಸಿಬಂದಿ ಅಗತ್ಯಕ್ಕಿಂತ ಹೆಚ್ಚು ಪಿಪಿಇ ಉಪಯೋಗಿಸಬಾರದು ಎಂದು ಹೇಳಿದ ಬಳಿಕ ದೇಶದಲ್ಲಿ ಪಿಪಿಇ ಕೊರತೆ ಇರುವ ವಿಚಾರ ಬೆಳಕಿಗೆ ಬಂದಿದೆ. ಈ ಬಳಿಕ ಕಾಲೇಜು ಸಮೀಕ್ಷೆಯೊಂದನ್ನು ನಡೆಸಿದಾಗ ದೇಶದ ಕೆಲವು ಭಾಗಗಳಲ್ಲಿ ಶೇ.70 ವೈದ್ಯರಿಗೆ ಸಮರ್ಪಕವಾದ ಪಿಪಿಇ ಇಲ್ಲದಿರುವುದು ಬೆಲಕಿಗೆ ಬಂದಿದೆ. ಇದೊಂದು ಗಂಭೀರವಾದ ಲೋಪ. ಶಸ್ತ್ರಾಸ್ತ್ರಗಳನ್ನೇ ನೀಡದೆ ಸೈನಿಕರನ್ನು ಯುದ್ಧ ಭೂಮಿಗೆ ಕಳುಹಿಸಿದಂತೆ ಎಂದಿದ್ದಾರೆ ಸ್ಯೂ ಹಿಲ್‌.

Advertisement

ಲಂಡನ್‌ : ಬ್ರಿಟನ್‌ನಲ್ಲಿ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಪರ್ಸನಲ್‌ ಪ್ರೊಟೆಕ್ಟಿವ್‌ ಈಕ್ವಿಪ್‌ಮೆಂಟ್‌ (ಪಿಪಿಇ-ಸುರಕ್ಷಾ ಉಡುಗೆ) ಕೊರತೆ ಎದುರಾಗಿರುವುದು ಭಾರೀ ಕಳವಳಕ್ಕೆ ಕಾರಣವಾಗಿದೆ.

ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬಂದಿ ಈ ಸೋಂಕಿಗೆ ತುತ್ತಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಿಪಿಇಗೆ ಈಗ ಅಪಾರ ಬೇಡಿಕೆಯಿದೆ. ಆದರೆ ಪೂರೈಕೆ ಸಾಕಷ್ಟು ಇಲ್ಲದಿರುವುದರಿಂದ ಅನೇಕ ದೇಶಗಳು ಕಂಗಾಲಾಗಿವೆ. ಬ್ರಿಟನ್‌ ಕೂಡ ಇದಕ್ಕೆ ಹೊರತಾಗಿಲ್ಲ.

ಬ್ರಿಟನ್‌ನ ಶೇ. 33ರಷ್ಟು ಸರ್ಜನ್‌ಗಳು ತಮಗೆ ಸಮರ್ಪಕವಾದ ಪಿಪಿಇ ಲಭ್ಯವಾಗುತ್ತಿಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಈ ವಿಚಾರ ವ್ಯಾಪಕ ಟೀಕೆಗೂ ಗುರಿಯಾಗಿದೆ. ಕೋವಿಡ್‌-19 ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುವವರಿಗೆ ಸಮರ್ಪಕ ರಕ್ಷಣಾ ತೊಡುಗೆಗಳು ಇಲ್ಲದಿರುವುದು ನಾಚಿಕೆಗೇಡು ಎಂದು ಇಂಗ್ಲಂಡ್‌ನ‌ ರಾಯಲ್‌ ಕಾಲೇಜ್‌ ಆಫ್ ಸರ್ಜನ್ಸ್‌ ಟೀಕಿಸಿದೆ.

ವೈದ್ಯರು ಮತ್ತು ನರ್ಸ್‌ಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ಪೈಕಿ ಅನೇಕರಿಗೆ ಮನೆ, ಸಂಸಾರ ಮಕ್ಕಳು ಮರಿಗಳು ಇವೆ. ಇವರ ಪ್ರಾಣವನ್ನು ಅಪಾಯಕ್ಕೆ ದೂಡುವುದು ಸರಿಯಲ್ಲ. ಸರಕಾರ ಕ್ಷಿಪ್ರವಾಗಿ ಪಿಪಿಇ ಪೂರೈಕೆಗೆ ಮುಂದಾಗಬೇಕೆಂದು ಕಾಲೇಜಿನ ಉಪಾಧ್ಯಕ್ಷ ಸ್ಯೂ ಹಿಲ್‌ ಹೇಳಿದ್ದಾರೆ.

Advertisement

ಪ್ರತಿಭಟನೆ ಅಗತ್ಯ
ಇದೇ ಸಂದರ್ಭದಲ್ಲಿ ವೈದ್ಯರು ಸರಕಾರವಾಗಿ ಈ ಕೊರತೆಯನ್ನು ಗಂಭೀರವಾಗಿ ಪರಿಗಣಿಸದಿರುವುದನ್ನು ಪ್ರತಿಭಟಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ತಮ್ಮ ಕೊರತೆ ಹಾಗೂ ಅಪಾಯವನ್ನು ಸರಕಾರದ ಗಮನಕ್ಕೆ ತರಲು ಇರುವ ಮಾರ್ಗ ಅದೊಂದೇ ಎಂಬ ಅಭಿಪ್ರಾಯ ಆರೋಗ್ಯ ಕಾರ್ಯಕರ್ತರ ವಲಯದಲ್ಲಿ ನಿರ್ಮಾಣವಾಗುತ್ತಿರುವುದು ಬ್ರಿಟನ್‌ ಸರಕಾರಕ್ಕೆ ಹೊಸ ತಲೆನೋವಾಗಿ ಪರಿಣಮಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next