Advertisement

“ಕಾರ್ಮಿಕ ಸವಲತ್ತಿಗೆ ನೋಂದಣಿ ಕಡ್ಡಾಯ’

04:04 PM Mar 21, 2017 | Team Udayavani |

ಪುತ್ತೂರು: ಅಸಂಘಟಿತ ವಲಯದ ಕಾರ್ಮಿಕರಿಗೆ ಸರಕಾರದಿಂದ ದೊರೆಯುವ ಸವಲತ್ತು ಪಡೆದುಕೊಳ್ಳಲು ನೋಂದಣಿ ಕಡ್ಡಾಯ ಎಂದು ಪುತ್ತೂರು ಹಿರಿಯ ಕಾರ್ಮಿಕ ನಿರೀಕ್ಷಕ ರಾಮಚಂದ್ರ ಹೇಳಿದರು.

Advertisement

ಕೋ-ಆಪರೇಟಿವ್‌ ಟೌನ್‌ ಬ್ಯಾಂಕ್‌ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಏಳನೇ ವರ್ಷದ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಈಗ ಎಲ್ಲ ನೋಂದಣಿ ಕಾರ್ಯ ಡಿಜಿಟಲೀಕ ರಣಗೊಂಡಿರುವ ಕಾರಣ ಆನ್‌ಲೈನ್‌ ನೋಂದಣಿ ಅನಿವಾರ್ಯ. ಈ ಹಿಂದೆ ಎಲ್ಲ ಅರ್ಜಿಗಳನ್ನು ಕೈಬರೆಹದ ಮೂಲಕ ಪಡೆದುಕೊಂಡು ಗುರುತಿನ ಚೀಟಿ ನೀಡಲಾಗುತ್ತಿತ್ತು. ಈಗ ಎಲ್ಲ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ದಾಖಲು ಮಾಡಿಕೊಂಡು ಡಿಜಿಟಲ್‌ ಗುರುತಿನ ಚೀಟಿ ನೀಡಲಾಗುತ್ತಿದೆ ಎಂದರು. ಹಿಂದೆ ನೋಂದಣಿ ಶುಲ್ಕ 25 ರೂ.ಗಳಿಗೆ ಹೆಚ್ಚಿಸಲಾಗಿದೆ. ಮೂರು ವರ್ಷಗಳಿಗೊಮ್ಮೆ 150 ರೂ. ಶುಲ್ಕ ಪಾವತಿಸಬೇಕು. ಕಾಲ ಕಾಲಕ್ಕೆ ಗುರುತಿನ ಚೀಟಿಯನ್ನು ನವೀಕರಣ ಮಾಡಿಕೊಳ್ಳುತ್ತಿರ ಬೇಕು ಎಂದವರು ಹೇಳಿದರು.

ಆಧಾರ್‌ ಕಡ್ಡಾಯ 
ಪುತ್ತೂರು ಮತ್ತು ಸುಳ್ಯದ ಶೈಕ್ಷಣಿಕ ಸವಲತ್ತಿಗೆ ಸಂಬಂಧಿಸಿದ ಯಾವ ಅರ್ಜಿಗಳೂ ಬಾಕಿ ಉಳಿ ದಿಲ್ಲ. ಎಲ್ಲವನ್ನೂ ಅಂತಿಮಗೊಳಿಸಿ ಮೇಲಾ ಧಿಕಾರಿಗಳಿಗೆ ಕಳುಹಿಸಿ ಕೊಡಲಾಗಿದೆ. 

ಕಾರ್ಮಿಕರಿಗೆ ಉತ್ತಮ ಬೇಡಿಕೆ
ನಿವೃತ್ತ ಪ್ರೊಫೆಸರ್‌ ಬಿ.ಜೆ. ಸುವರ್ಣ ಮಾತನಾಡಿ, ಕುಶಲಕರ್ಮಿಗಳು ಅಸಂಘಟಿತ ವಲಯದಲ್ಲಿ ಇದ್ದಿರಬಹುದು. ಸಮಾಜದಲ್ಲಿ ನೆಮ್ಮದಿಯ ಜೀವನ ನಡೆಸುವಲ್ಲಿ ಈ ಕಾರ್ಮಿಕರಿಗೆ ಇರುವಷ್ಟು ಮಾನಸಿಕ ಭದ್ರತೆ ದೊಡ್ಡ ದೊಡ್ಡ ಸಂಬಳ ಪಡೆಯುವ, ದೊಡ್ಡ ಕಂಪೆನಿಗಳಲ್ಲಿ ಕೆಲಸ ಮಾಡುವ ನೌಕರರಲ್ಲಿ ಇಲ್ಲ. ನೌಕರರು ನಿತ್ಯ ಉದ್ಯೋಗ ಭದ್ರತೆಯ ಚಿಂತೆ ಮತ್ತು ಕೆಲಸದ ಒತ್ತಡದಲ್ಲಿ ಬಳಲುತ್ತಿರುತ್ತಾರೆ. ಆದರೆ ಕಟ್ಟಡ ಕಾರ್ಮಿಕರಂಥ ಅಸಂಘಟಿತ ವಲಯದ ಕಾರ್ಮಿಕರು ಒಂದಲ್ಲ ಒಂದು ಕಡೆ ಕೆಲಸ ಪಡೆಯುತ್ತಾರೆ. ಈ ಕೆಲಸಗಳಿಗೆ ಈಗ ಕಾರ್ಮಿಕರ ಸಮಸ್ಯೆ ಇರುವ ಕಾರಣ ಇರುವ ಕಾರ್ಮಿಕರಿಗೆ ಉತ್ತಮ ಬೇಡಿಕೆಯೂ ಉತ್ತಮ ಸಂಭಾವನೆಯೂ ಇದೆ. ನಿಮ್ಮನ್ನು ಸಮಾಜ ವೇದಿಕೆಗಳಲ್ಲಿ ಗುರುತಿಸದೇ ಇರಬಹುದು. ಆದರೆ ಬದುಕಿನ ನಿತ್ಯದ ಆಗುಹೋಗುಗಳಲ್ಲಿ ನಿಮ್ಮ ಮಹತ್ವ ಅತ್ಯಂತ ದೊಡ್ಡದು. ಕಾರ್ಮಿಕರೆಲ್ಲ ಒಟ್ಟಾಗಿ ಸಂಘಟನೆಯಿಂದ ಕೆಲಸ ಮಾಡಿದರೆ ಏನನ್ನೂ ಸಾಧಿಸಬಹುದು. ಹಾಗೆಂದು ಸಂಘಟನೆಯೆಂದರೆ ಜವಾಬ್ದಾರಿ ಕೇವಲ ಸೌಲಭ್ಯ ಪಡೆಯಲಿಕ್ಕೆ ಮಾತ್ರವಲ್ಲ, ಭವಿಷ್ಯದ ಉತ್ತಮ ಹಾದಿಗೆ ಸಂಘಟನೆ ಅಗತ್ಯ ಎಂದು ಅವರು ನುಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next