Advertisement

ಟಿಕೆಟ್‌ ವಿಚಾರಕ್ಕೆ ಪ್ರಯಾಣಿಕನಿಗೆ ಒದ್ದು,ಲಾಠಿಯಿಂದ ಹೊಡೆದ ಕೆಎಸ್ಸಾರ್ಟಿಸಿ ಸಿಬ್ಬಂದಿ

10:41 AM Dec 26, 2023 | Team Udayavani |

ಬೆಂಗಳೂರು: ಟಿಕೆಟ್‌ ವಿಚಾರಕ್ಕೆ ಪ್ರಯಾಣಿಕ ನೊಬ್ಬನಿಗೆ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಚಿತ್ರದುರ್ಗದ ಹಿರಿಯೂರು  ತಾಲೂ ಕಿನ ರಾಘವೇಂದ್ರ ಎಂಬವರು ನೀಡಿದ ದೂರಿನ ಮೇರೆಗೆ ಉಪ್ಪಾರಪೇಟೆ ಠಾಣೆ ಪೊಲೀಸರು ಕೆಎಸ್‌ಆರ್‌ಟಿಸಿ ಟರ್ಮಿನಲ್‌-2ನ ಡಿಪೋ ವ್ಯವಸ್ಥಾಪಕ ಮತ್ತು ಭದ್ರತಾ ಸಿಬ್ಬಂದಿ ಸತೀಶ್‌ ವಿರುದ್ಧ ಪ್ರಕರಣ ದಾಖಲಿಸಿ ಕೊಂಡು ತನಿಖೆ ಮುಂದುವರಿಸಿದ್ದಾರೆ.

Advertisement

ಡಿ.23ರ ತಡರಾತ್ರಿ 12.15ಕ್ಕೆ ರಾಘವೇಂದ್ರ, ಹಿರಿಯೂರಿಗೆ ಹೋಗಲು ಬಸ್‌ ಹತ್ತಿ ಟಿಕೆಟ್‌ ನೀಡುವಂತೆ ನಿರ್ವಾಹಕನನ್ನು ಕೇಳಿದ್ದಾರೆ. ಆಗ ಕಂಡಕ್ಟರ್‌, ಬಸ್‌ ಹಿರಿಯೂರಿನ ಒಳಗೆ ಹೋಗುವುದಿಲ್ಲ ಬೈಪಾಸ್‌ನಲ್ಲಿ ನಿಲ್ಲಿಸುತ್ತೇವೆ ಎಂದಿದ್ದಾರೆ. ಅದಕ್ಕೆ ಒಪ್ಪಿದ ರಾಘವೇಂದ್ರ, ಹಿರಿಯೂರಿಗೆ ಟಿಕೆಟ್‌ ನೀಡಿ ತಾನು ಬೈಪಾಸ್‌ ಬಳಿಯೇ ಇಳಿದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಆಗ ಕಂಡಕ್ಟರ್‌, ಅದಕ್ಕೆ ಚಿತ್ರದುರ್ಗದ ಟಿಕೆಟ್‌ ಪಡೆದರೆ ಮಾತ್ರ ಹಿರಿಯೂರಿನಲ್ಲಿ ಇಳಿಸುತ್ತೇವೆ ಎಂದಿದ್ದಾರೆ. ಹಿರಿಯೂರಿನಲ್ಲಿ ಇಳಿಯಲು ಚಿತ್ರದುರ್ಗಕ್ಕೆ ಏಕೆ ಟಿಕೆಟ್‌ ಪಡೆಯಬೇಕು ಎಂದು ವಾದಿಸಿ, ಬಳಿಕ ಡಿಪೋ ವ್ಯವಸ್ಥಾಪಕರ ಬಳಿ ಹೋಗಿ ಪ್ರಶ್ನಿಸಿದ್ದಾರೆ. ಡಿಪೋ ವ್ಯವಸ್ಥಾ ಪಕರು ಕೂಡ ಚಿತ್ರದುರ್ಗಕ್ಕೆ ಟಿಕೆಟ್‌ ಪಡೆಯ ಬೇಕು ಎಂದಿದ್ದಾರೆ. ಅದರಿಂದ ಬೇಸರಗೊಂಡ ರಾಘವೇಂದ್ರ, ವ್ಯವಸ್ಥಾ ಪಕರ ಹೇಳಿಕೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಕೊಂಡಿದ್ದಾರೆ. ಆಗ ಸ್ಥಳಕ್ಕೆ ಬಂದ ಭದ್ರತಾ ಸಿಬ್ಬಂದಿ ಸತೀಶ್‌, ರಾಘವೇಂದ್ರ ಮೇಲೆ ಹಲ್ಲೆ ನಡೆಸಿ, ಮೊಬೈಲ್‌ ಕಸಿದುಕೊಂಡಿದಲ್ಲದೆ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ರಾಘವೇಂದ್ರ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿ ಸಲಾಗಿದೆ ಎಂದುಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next