Advertisement

ಮೊದಲ ದಿನವೇ ಪ್ರವಾಹ ಸಂಕಷ್ಟ ಅನುಭವಿಸಿದ ಕೆಪಿಸಿಸಿ ತಂಡ

04:03 PM Aug 10, 2019 | Suhan S |

ಬಾಗಲಕೋಟೆ: ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕಾಗಿ ಮಾಜಿ ಸಚಿವ, ಶಾಸಕ ಎಚ್.ಕೆ. ಪಾಟೀಲ, ರಾಜ್ಯಸಭೆ ಮಾಜಿ ಸದಸ್ಯ ಪ್ರೊ| ಐ.ಜಿ ಸನದಿ ಗೂಡ್ಸ್‌ ರೈಲಿನಲ್ಲಿ ಬಾಗಲಕೋಟೆಗೆ ಆಗಮಿಸಿದ್ದು, ಹೊಳೆಆಲೂರು ಬಳಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಬಂದಾಗ ಅವರನ್ನು ಸಂಪರ್ಕಿಸಿ ದೂರವಾಣಿ ಯೋಗ ಕ್ಷೇಮವನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿಚಾರಿಸಿದರು.

Advertisement

ಪ್ರವಾಹ ಅಧ್ಯಯನ ಸಮಿತಿ ಅಧ್ಯಕ್ಷರಾಗಿ ಬಾಗಲಕೋಟೆ, ಬೆಳಗಾವಿ ಜಿಲ್ಲೆ ಪ್ರವಾಸ ಕೈಗೊಳ್ಳಬೇಕಾಗಿದ್ದ ಎಚ್.ಕೆ. ಪಾಟೀಲ, ಪ್ರೊ| .ಐ.ಜಿ. ಸನದಿ ಅವರು ಶುಕ್ರವಾರ ಬೆಳಗ್ಗೆ ಸ್ವಂತ ಜಿಲ್ಲೆ ಗದಗನ ಕೊಣ್ಣೂರು ಪ್ರವಾಹದಲ್ಲಿದೆ ಎಂಬುವುದು ತಿಳಿದ ತಕ್ಷಣ ಅಲ್ಲಿಗೆ ತೆರಳಿ ಪ್ರವಾಹದಲ್ಲಿ ಸಿಲುಕಿಕೊಂಡವರ ರಕ್ಷಣೆ ಬಗ್ಗೆ ಪರಿಶೀಲನೆ ನಡೆಸಿ, ಹೊರಡುವ ಹೊತ್ತಿಗೆ ಬಾಗಲಕೋಟೆ ಜಿಲ್ಲೆ ಸಂಪರ್ಕದ ಮಾರ್ಗಗಳು ಎಲ್ಲವೂ ಸ್ಥಗಿತಗೊಂಡಿದ್ದವು. ಹೊಳೆಆಲೂರು ವರೆಗೆ ಬಂದು ದೋಣಿ ಮೂಲಕ ದಡ ತಲುಪುವ ಯೋಚನೆ ಸುರಕ್ಷಿತ ಅಲ್ಲ ಎಂದು ಗ್ರಾಮಸ್ಥರು ಹೇಳುತ್ತಿರುವಾಗಲೇ ಅಲ್ಲಿಂದ ಪ್ರವಾಹದ ದಾರಿಯಲ್ಲಿ ಹೊರಟ ಎಚ್.ಕೆ. ಪಾಟೀಲ ಪ್ರವಾಹದಲ್ಲಿ ಅವರು ಸಿಲುಕಿಕೊಳ್ಳಬಹುದು ಎಂಬ ಆತಂಕದಲ್ಲಿ ಕೆಲವರು ಈ ಬಗ್ಗೆ ಸಂಸದ ಪಿ.ಸಿ. ಗದ್ದಿಗೌಡರ ಅವರಿಗೆ ಮಾಹಿತಿ ನೀಡಿದರು.

ಮುಖ್ಯಮಂತ್ರಿಗಳ ಜತೆ ಪ್ರವಾಸದಲ್ಲಿದ್ದ ಗದ್ದಿಗೌಡರ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಈ ವಿಷಯ ತಿಳಿಸಿದರು. ಕೂಡಲೇ ಕರೆ ಮಾಡಿ ಅವರ ಯೋಗಕ್ಷೇಮ, ಸುರಕ್ಷತೆ ಬಗ್ಗೆ ವಿಚಾರಿಸಿದರು. ಹೊಳೆಆಲೂರಿಗೆ ಬಂದಿದ್ದ ಎಚ್.ಕೆ. ಪಾಟೀಲರು ಅಲ್ಲಿಂದ ರೈಲು ನಿಲ್ದಾಣಕ್ಕೆ ಬಂದು ಬಾಗಲಕೋಟೆ ಕಡೆಗೆ ಹೊರಟಿದ್ದ ಗೂಡ್ಸ್‌ ರೈಲನ್ನು ಪ್ರೊ| ಸನದಿ ಅವರೊಂದಿಗೆ ಹತ್ತಿ ಬಾಗಲಕೋಟೆ ತಲುಪಿ, ಪ್ರವಾಹ ಪೀಡಿತ ಸ್ಥಳದ ವೀಕ್ಷಣೆಗೆ ತೆರಳಿದರು. ರೈಲು ಮಾರ್ಗದಲ್ಲಿ ಪ್ರವಾಹವನ್ನು ವೀಕ್ಷಿಸುತ್ತಿದ್ದಾಗ ನೀರಿನಲ್ಲಿ ನಡೆದು ಬಂದ ಅನುಭವವಾಯಿತು. ವಿಸ್ತಾರಗೊಂಡಿದ್ದ ನೀರಿನ ಹರಿವು ಕಂಡು ಆತಂಕ ಮೂಡಿತು ಎಂದು ಸುದ್ದಿಗಾರರೊಂದಿಗೆ ಅನುಭವ ಹಂಚಿಕೊಂಡರು. ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಸುರಕ್ಷತೆ ಬಗ್ಗೆ ಸ್ವತಃ ಕರೆ ಮಾಡಿ ವಿಚಾರಿಸಿದಕ್ಕೆ ಕೃತಜ್ಞತೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next