Advertisement

ಕೋವಿಡ್‌ ವೈರಾಣು ಸಾಯಲು 92 ಡಿಗ್ರಿ ಉಷ್ಣತೆ ಬೇಕು

06:38 PM Apr 18, 2020 | sudhir |

ಪ್ಯಾರಿಸ್‌: ಭಾರತದ ಬಿಸಿಲಿನ ಝಳಕ್ಕೆ ಕೋವಿಡ್‌ ವೈರಸ್‌ ಸತ್ತು ಹೋಗುತ್ತದೆ. ಹೀಗಾಗಿ ಯಾರೂ ಕೋವಿಡ್‌ಗೆ ವಿಪರೀತ ಹೆದರುವ ಅಗತ್ಯವಿಲ್ಲ ಎಂಬ ಸಂದೇಶಗಳು ನಿಮ್ಮ ಮೊಬೈಲ್‌ಗೆ ಬಂದಿರಬಹುದು. ಆರಂಭದಿಂದಲೇ ಹೀಗೊಂದು ನಂಬಿಕೆ ಜನರಲ್ಲಿದೆ. ಆದರೆ ಹೊಸ ಸಂಶೋಧನೆ ಈ ನಂಬಿಕೆ ಹುಸಿ ಎಂದು ಸಾಬೀತುಪಡಿಸಿದೆ.

Advertisement

92 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಮಾತ್ರ ಕೋವಿಡ್‌ 19 ವೈರಸ್‌ ಸಾಯುತ್ತದೆ ಎಂಬುದನ್ನು ಈಗ ಕಂಡುಕೊಳ್ಳಲಾಗಿದೆ. ಅರ್ಥಾತ್‌ ನೀರಿನ ಕುದಿಯುವ ಬಿಂದುವಿಗಿಂತ 8 ಡಿಗ್ರಿ ಸೆಲ್ಸಿಯಸ್ ಕಡಿಮೆ ಉಷ್ಣತೆಯ ತನಕವೂ ಕೋವಿಡ್‌ 19 ವೈರಾಣು ಜೀವಂತವಿರುತ್ತದೆ. ನೀರಿನ ಕುದಿಯುವ ಬಿಂದು 100 ಡಿಗ್ರಿ ಸೆಲ್ಸಿಯಸ್.

ಫ್ರಾನ್ಸ್‌ನ ಏಕ್ಸ್‌ ಮಾರ್ಸೆಲಿ ವಿವಿಯ ವಿಜ್ಞಾನಿಗಳು ಈ ಅಧ್ಯಯನವನ್ನು ನಡೆಸಿದ್ದಾರೆ. ಕೋವಿಡ್‌ 19 ವೈರಾಣುವಿನ ಮಾದರಿಯನ್ನು ಸಂಗ್ರಹಿಸಿ ಬಿಸಿ ಮಾಡಿದಾಗ 92 ಡಿಗ್ರಿ ಸೆಲ್ಸಿಯಸ್ ತನಕವೂ ಅದು ಜೀವಂತವಾಗಿದ್ದದ್ದು ಈ ಪರೀಕ್ಷೆಯಲ್ಲಿ ಸಾಬೀತಾಗಿದೆ. ಈ ಸಂಶೋಧನೆ ಆರೋಗ್ಯ ಕಾರ್ಯಕರ್ತರ ಸುರಕ್ಷತೆಯ ದೃಷ್ಟಿಯಿಂದ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ.
ವೈರಾಣುವನ್ನು ವಿವಿಧ ಹಂತಗಳ ಉಷ್ಣತೆಯಲ್ಲಿ ಪರಿಶೀಲನೆಗೆ ಒಳಪಡಿಸಲಾಗಿತ್ತು. 60 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲೂ ವೈರಸ್‌ ಸಾಯದೇ ಇದ್ದಾಗ ವಿಜ್ಞಾನಿಗಳಿಗೆ ಆಶ್ಚರ್ಯವಾಗಿತ್ತು. 92 ಡಿಗ್ರಿ ಸೆಲ್ಸಿಯಸ್ನಲ್ಲಿ 15 ನಿಮಿಷ ಬಿಸಿ ಮಾಡಿದಾ ಮಾತ್ರ ವೈರಸ್‌ ಸತ್ತಿದೆ. ಭಾರತದ 38-40 ಡಿಗ್ರಿÅ ಸೆಲ್ಸಿಯಸ್ ಉಷ್ಣತೆಯಲ್ಲಿ ಕೋವಿಡ್‌ ವೈರಸ್‌ಗಳು ಸಾಯುತ್ತವೆ. ಹೀಗಾಗಿ ಬೇಸಗೆ ತೀವ್ರವಾಗುತ್ತಿರುವಂತೆ ಕೋವಿಡ್‌ ಹಾವಳಿ ಕಡಿಮೆಯಾಗಬಹುದು ಎಂದು ಈ ಹಿಂದೆ ನಂಬಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next