Advertisement

ಕೊಡವ ಬುಡಕಟ್ಟು ಜನಾಂಗದ ಹಕ್ಕೊತ್ತಾಯ : ಸಿಎನ್‌ಸಿ ಧರಣಿ

12:46 AM Jul 14, 2019 | Team Udayavani |

ಮಡಿಕೇರಿ: ಕೊಡವ ಬುಡಕಟ್ಟು ಜನಾಂಗದ ಪ್ರಧಾನ ಮೂರು ಹಕ್ಕೊತ್ತಾಯಗಳನ್ನು ಪರಿಗಣಿಸಲು ಪ್ರಸಕ್ತ ಪಾರ್ಲಿಮೆಂಟ್ ಅಧಿವೇಶನದಲ್ಲೇ ಸಂವಿಧಾನದ ತಿದ್ದುಪಡಿಗೆ ಮುಂದಾಗಬೇಕು ಎಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು.

Advertisement

ಸಿಎನ್‌ಸಿ ಅಧ್ಯಕ್ಷ ಎನ್‌.ಯು.ನಾಚಪ್ಪ ಅವರ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಪ್ರಮುಖ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು. ಕೊಡವ ಲ್ಯಾಂಡ್‌ ಭೂ-ರಾಜಕೀಯ ಸ್ವಾಯತ್ತತೆ, ಕೆಬುಡಕಟ್ಟು ಕುಲದ ಸ್ಥಾನಮಾನ ಮತ್ತು ಕೊಡವ ಭಾಷೆಯನ್ನು ರಾಜ್ಯಾಂಗದ 8ನೇ ಪರಿಚ್ಛೇದಕ್ಕೆ ಸೇರಿಸಲು ಸಂವಿಧಾನ ತಿದ್ದುಪಡಿಗೆ ಮುಂದಾಗುವ ಮೂಲಕ ಕೊಡವ ಬುಡಕಟ್ಟು ಸೇರಿದಂತೆ ಭಾರತದ ವೈವಿಧ್ಯಮಯ ಜನಾಂಗೀಯ ಹೆಗ್ಗುರುತು ಮತ್ತು ಸಾಂಸ್ಕೃತಿಕ ಅನನ್ಯತೆಗಳನ್ನು ಕಾಪಾಡಿ ಪೋಷಿಸಿ ಸಂರಕ್ಷಿಸುವ ಸಲುವಾಗಿ ಸಂವಿಧಾನದ ಆಶಯಗಳನ್ನು ಸಾಕ್ಷಾತ್ಕರಿ ಸುವ ಹೆಜ್ಜೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಡಲಿದ್ದಾರೆ ಎಂದು ಪ್ರತಿಭಟನಾಕಾರರು ವಿಶ್ವಾಸ ವ್ಯಕ್ತಪಡಿಸಿದರು.

ಕಲಿಯಂಡ ಪ್ರಕಾಶ್‌, ಪುಳ್ಳಂಗಡ ನಟೇಶ್‌, ಜಮ್ಮಡ ಮೋಹನ್‌, ಅಜ್ಜಿಕುಟ್ಟಿರ ಲೋಕೇಶ್‌, ಕೊಂಗೇಟಿರ ಲೋಕೇಶ್‌, ಅರೆಯಡ ಗಿರೀಶ್‌, ಬೇಪಡಿಯಂಡ ದಿನು, ಕಾಟುಮಣಿಯಂಡ ಉಮೇಶ್‌, ನಂದಿನೆರವಂಡ ವಿಜು, ಅಪ್ಪಾರಂಡ ಪ್ರಸಾದ್‌, ಕಿರಿಯಮಾಡ ಶರಿನ್‌, ಪುದಿಯೊಕ್ಕಡ ಕಾಶಿ, ಬೊಳಜಿರ ಅಯ್ಯಪ್ಪ, ಚಂಡಿರ ರಾಜ, ಕೂಪದಿರ ಸಾಬು, ಪುಲ್ಲೆರ ಕಾಳಪ್ಪ, ಚೇರಂಡ ಸುಭಾಷ್‌ ಮತ್ತು ಕಲಿಯಂಡ ರವಿ ಪಾಲ್ಗೊಂಡಿದ್ದರು.

ಅಪರ ಜಿಲ್ಲಾಧಿಕಾರಿ ಡಾ. ಸ್ನೇಹಾ ಸಿ.ವಿ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದರು ಮೋದಿಯವರು 2ನೇ ಬಾರಿ ಕೇ,ದ್ರದಲ್ಲಿ ಅಧಿಕಾರಕ್ಕೇರಿದ್ದು, ಕೊಡವರ ಬೇಡಿಕೆಗಳನ್ನು ಈಡೇರಿಸುವರು ಎಂಬ ಅಚಲ‌ ವಿಶ್ವಾಸ ನಮಗಿದೆ ಎಂದು ನಾಚಪ್ಪ ಅವರು ಈ ಸಂದರ್ಭದದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next