Advertisement

ಗಾಳಿಪಟ ಹಾರಿಸಿ, ಸಂಭ್ರಮಿಸಿದ ಚಿಣ್ಣರು

12:04 AM Apr 13, 2019 | Team Udayavani |

ಗಂಗೊಳ್ಳಿ: ಪರೀಕ್ಷೆ ಮುಗಿಸಿದ ಖುಷಿಯಲ್ಲಿದ್ದ ಕೊಂಚಾಡಿ ರಾಧಾಶೆಣೈ ಸರಕಾರಿ ಹಿ. ಪ್ರಾ. ಶಾಲೆ ಖಾರ್ವಿಕೇರಿಯ ಮಕ್ಕಳು ಖಾರ್ವಿಕೇರಿಯ ಕಡಲ ಕಿನಾರೆಯಲ್ಲಿ ತಾವೇ ಸ್ವತಃ ತಯಾರಿಸಿದ ಬಣ್ಣ – ಬಣ್ಣದ ತರಹೇವಾರಿ ಗಾಳಿಪಟಗಳನ್ನು ಮುಗಿಲೆತ್ತರಕ್ಕೆ ಹಾರಿಸಿ ಸಂಭ್ರಮಿಸಿದರು.

Advertisement

ಶಿಕ್ಷಣವೆಂದರೆ ಪಠ್ಯ ಮಾತ್ರವಲ್ಲ, ಅದರ ಹೊರತಾಗಿಯೂ ಭಿನ್ನ ಚಟುವಟಿಕೆಗಳ ಮೂಲಕ ಕಲಿಯುವುದು ಸಾಕಷ್ಟಿದೆ ಎನ್ನುವುದರ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಖಾರ್ವಿಕೇರಿಯ ಕೊಂಚಾಡಿ ರಾಧಾಶೆಣೈ ಶಾಲೆಯಲ್ಲಿ ಚಿಣ್ಣರಿಗೆ ಎ. 8 ರಂದು ಗಾಳಿಪಟ ಉತ್ಸವವನ್ನು ಏರ್ಪಡಿಸಲಾಗಿತ್ತು.ಖಾರ್ವಿಕೇರಿಯ ಕಡಲ ಕಿನಾರೆಯಲ್ಲಿ ನಡೆದ ಈ ಗಾಳಿಪಟ ಉತ್ಸವದಲ್ಲಿ 200 ಕ್ಕೂ ಅಧಿಕ ಮಂದಿ ಮಕ್ಕಳು ಶಿಕ್ಷಕರ ಮಾರ್ಗದರ್ಶನದಲ್ಲಿ ತಾವೇ ತಯಾರಿಸಿದ ಗಾಳಿಪಟಗಳನ್ನು ಹಾರಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತ ಹಾಗೂ ಶಿಕ್ಷಕ ವೃಂದ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಪೋಷಕರು, ಊರವರು ಪಾಲ್ಗೊಂಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next