Advertisement

ಕಿಶೋರ ಯಕ್ಷಗಾನ ಸಂಭ್ರಮದಲ್ಲಿ ಕಿಶೋರಿಯರ ಮೇಲುಗೈ

08:18 PM Dec 12, 2019 | mahesh |

ಉಡುಪಿ ಶ್ರೀಕೃಷ್ಣಮಠದಲ್ಲಿ ಈಗ ಪ್ರತಿನಿತ್ಯ ಬಾಲಕ, ಬಾಲಕಿಯರ ಯಕ್ಷಗಾನ “ಕಿಶೋರ ಯಕ್ಷಗಾನ ಸಂಭ್ರಮ’ ನ. 25ರಿಂದ ಪ್ರತಿಭೆ ಪ್ರದರ್ಶನಗೊಳ್ಳುತ್ತಿದೆ. ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ವಿಶೇಷವಾಗಿ ಮುಮ್ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದು ಅಪರೂಪದಲ್ಲಿ ಹಿಮ್ಮೇಳದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

ಮಹತ್ವದ ಪ್ರಸಂಗಗಳು
ಚಕ್ರವ್ಯೂಹ, ಶಶಿಪ್ರಭಾ ಪರಿಣಯ, ಅಭಿಮನ್ಯು ಕಾಳಗ, ಸೈಂಧವ ವಧೆ, ವೀರಮಣಿ ಕಾಳಗ, ಶ್ಯಮಂತ ರತ್ನ, ಕಂಸ ವಧೆ, ಪಂಚವಟಿ, ರಾಜಾ ಯಯಾತಿ, ಶ್ರೀಕೃಷ್ಣ ಪಾರಿಜಾತವೇ ಮೊದಲಾದ ಹಿರಿಯ ಕಲಾವಿದರು ಪ್ರದರ್ಶಿಸುವ ಪ್ರಸಂಗಗಳನ್ನು ಪ್ರೌಢಶಾಲಾ ವಿದ್ಯಾರ್ಥಿಗಳು ಆಡಿ ತೋರಿಸುತ್ತಿದ್ದಾರೆ.

12 ವರ್ಷಗಳಿಂದ ಪ್ರದರ್ಶನ
13 ವರ್ಷಗಳ ಹಿಂದೆ ಆರಂಭಗೊಂಡ ಯಕ್ಷ ಶಿಕ್ಷಣ ಟ್ರಸ್ಟ್‌ ನಿರಂತರ 12 ವರ್ಷಗಳಿಂದ ಡಿಸೆಂಬರ್‌ ತಿಂಗಳಲ್ಲಿ ಯಕ್ಷಗಾನ ಮಾಸವೆಂಬಂತೆ ಆಚರಿಸುತ್ತಿದೆ.

47 ಪ್ರದರ್ಶನಗಳು
ರಾಜಾಂಗಣದಲ್ಲಿಉಡುಪಿ ಸನಿಹದ 31 ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ನ. 25ರಿಂದ ಡಿ. 19ರವರೆಗೆ 31 ಪ್ರದರ್ಶನವನ್ನು ಮತ್ತು ಬ್ರಹ್ಮಾವರ ಆಸುಪಾಸಿನ 15 ಶಾಲೆಗಳ ವಿದ್ಯಾರ್ಥಿಗಳು ಡಿ. 20ರಿಂದ 28ರವರೆಗೆ 16 ಪ್ರದರ್ಶನದ ಮೂಲಕ ತಮ್ಮ ಕಲಾಪೌಢಿಮೆ ಮೆರೆಯುತ್ತಿದ್ದಾರೆ. ರಾಜಾಂಗಣದಲ್ಲಿ ಅಪರಾಹ್ನ 3.30ರಿಂದ 5 ಗಂಟೆ ಮತ್ತು ರಾತ್ರಿ 7 ಗಂಟೆಯಿಂದ 8.30ರವರೆಗೆ ಪ್ರದರ್ಶನ ನೀಡಿದರೆ, ಬ್ರಹ್ಮಾವರದ ಬಸ್‌ ನಿಲ್ದಾಣ ಸಮೀಪದ ವೇದಿಕೆಯಲ್ಲಿ ಸಂಜೆ 5ರಿಂದ 6.30 ಮತ್ತು 6.30ರಿಂದ 8ರವರೆಗೆ ಪ್ರದರ್ಶನ ನಡೆಯಲಿದೆ.

1,500 ವಿದ್ಯಾರ್ಥಿಗಳ ಕಲಾ ಪ್ರತಿಭೆ
ಒಂದೊಂದು ತಂಡದಲ್ಲಿ ಸುಮಾರು 40 ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ. ಕೆಲವು ತಂಡಗಳಲ್ಲಿ ಹೆಚ್ಚು, ಕೆಲವು ತಂಡಗಳಲ್ಲಿ ಕಡಿಮೆ ಇರುವುದಿದೆ. ಉಡುಪಿ ಮತ್ತು ಬ್ರಹ್ಮಾವರದಲ್ಲಿ ಸುಮಾರು 1,500 ವಿದ್ಯಾರ್ಥಿಗಳು ಕಲಾಪ್ರತಿಭೆ ಮೆರೆಯುತ್ತಿದ್ದಾರೆ. ಇಷ್ಟು ಸಂಖ್ಯೆಯ ವಿದ್ಯಾರ್ಥಿಗಳು 12 ವರ್ಷಗಳಿಂದ ಕಲಾರಾಧನೆಯಲ್ಲಿ ಪಾಲ್ಗೊಳ್ಳುತ್ತಿರುವುದು, ಬಹುಮಂದಿ ವಿದ್ಯಾರ್ಥಿನಿಯರು ಇರುವುದು ವಿಶೇಷವಾಗಿದೆ.

Advertisement

ಸ್ಥಾಯೀ ವ್ಯವಸ್ಥೆ
ಟ್ರಸ್ಟ್‌ ಗೌರವಾಧ್ಯಕ್ಷರಾಗಿ ಶ್ರೀಕೃಷ್ಣಮಠದ ಪರ್ಯಾಯ ಪೀಠಸ್ಥ ಸ್ವಾಮೀಜಿ, ಕಾರ್ಯಾಧ್ಯಕ್ಷರಾಗಿ ಹಾಲಿ ಶಾಸಕರು, ಕಾರ್ಯದರ್ಶಿಗಳಾಗಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿಗಳು ಕಾರ್ಯನಿರ್ವಹಿಸುವ ಸ್ಥಾಯೀ ವ್ಯವಸ್ಥೆ ರೂಪಿಸಲಾಗಿದೆ. ಯಕ್ಷ ಶಿಕ್ಷಣ ಕಲ್ಪನೆಯನ್ನು ತಮ್ಮ ಶಾಸಕತ್ವದ ಅವಧಿಯಲ್ಲಿ ಆರಂಭಿಸಿದ ರಘುಪತಿ ಭಟ್‌ ಅವರೇ ಈಗ ಶಾಸಕರಾಗಿ ಟ್ರಸ್ಟ್‌ ಕಾರ್ಯಾಧ್ಯಕ್ಷರಾಗಿದ್ದಾರೆ.
ಪ್ರದರ್ಶನದಲ್ಲಿ ಪಾಲ್ಗೊಂಡ ತಂಡಗಳು ಶಾಲಾ ವಾರ್ಷಿಕೋತ್ಸವದಲ್ಲಿ ಪ್ರದರ್ಶನ ನೀಡುವುದು, ಪ್ರತಿಭಾ
ಕಾರಂಜಿಯಲ್ಲಿಪ್ರದರ್ಶನ, ಲವೆಡೆಗಣೇಶೋತ್ಸವಗಳಲ್ಲಿಯೂ ಇದೇ ವಿದ್ಯಾರ್ಥಿಗಳ ಪ್ರದರ್ಶನ ನಡೆಯುತ್ತಿರುವುದು ಯಕ್ಷ ಶಿಕ್ಷಣ ಟ್ರಸ್ಟ್‌ನ ಸಾಧನೆಗಳು.

ದಂಪತಿ, 75-25ರ ಯಕ್ಷ ಶಿಕ್ಷಕರು
􀁊 ಒಟ್ಟು 22 ಯಕ್ಷಗಾನದ ಗುರುಗಳು ಜೂನ್‌ನಿಂದ ಡಿಸೆಂಬರ್‌ ತನಕ ವಾರದಲ್ಲಿ ಸಮಯ  ಮಾಡಿಕೊಂಡು ಎರಡು ಮೂರು ತರಗತಿಗಳನ್ನು ನಡೆಸಿ ಈ ಮಟ್ಟಕ್ಕೆ ವಿದ್ಯಾರ್ಥಿಗಳನ್ನು ತಂದಿರಿಸುತ್ತಾರೆ.

􀁊 ಚೇರ್ಕಾಡಿಯ ಮಂಜುನಾಥ ಪ್ರಭು ಮತ್ತು ಶಶಿಕಲಾ ಪ್ರಭು ದಂಪತಿ ಇಬ್ಬರೂ ಗುರುಗಳಾಗಿ
ಕಾರ್ಯನಿರ್ವಹಿಸುತ್ತಿದ್ದಾರೆ.

􀁊 75ರ ಹರೆಯದ ತೋನ್ಸೆ ಜಯಂತಕುಮಾರರಿಂದ ಹಿಡಿದು 25ರ ಆಸುಪಾಸಿನಲ್ಲಿರುವ ಶೈಲೇಶ್‌, ನಿಶ್ವಲ್‌, ರೋಹಿತ್‌ ಕುಮಾರ್‌ ಶಿಕ್ಷಕರಾಗಿ ಪಾಲ್ಗೊಳ್ಳುತ್ತಿದ್ದಾರೆ.

􀁊 ಬ್ರಹ್ಮಾವರ ಸರಕಾರಿ ಪ.ಪೂ. ಕಾಲೇಜಿನಲ್ಲಿ ಸುಮಾರು ನೂರು ವಿದ್ಯಾರ್ಥಿಗಳಿರುವ ಕಾರಣ ಅಲ್ಲಿ ಬಾಲಕ ಮತ್ತು ಬಾಲಕಿಯರ ಎರಡು ಪ್ರತ್ಯೇಕ ಪ್ರದರ್ಶನ ನಡೆಯಲಿದೆ. ಉಡುಪಿಯ ಬಾಲಕಿಯರ ಸರಕಾರಿ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗ, ಸೈಂಟ್‌ ಸಿಸಿಲೀಸ್‌ ಶಾಲಾ ತಂಡದಲ್ಲಿ ವಿಶೇಷವಾಗಿ ಬಾಲಕಿಯರೇ ಇದ್ದಾರೆ.

􀁊 ಉಡುಪಿ ಪ್ರದರ್ಶನದ ವಿದ್ಯಾರ್ಥಿಗಳಲ್ಲಿ ಶೇ. 50 ಮಕ್ಕಳು ಯಕ್ಷಗಾನ ಸಂಪರ್ಕವಿಲ್ಲದ ಹೊರ ಜಿಲ್ಲೆಯಿಂದ ಬಂದವರು, ಬ್ರಹ್ಮಾವರದಲ್ಲಿ ಸ್ಥಳೀಯರು ಹೆಚ್ಚು. ಒಟ್ಟು ವಿದ್ಯಾರ್ಥಿಗಳಲ್ಲಿ ಶೇ. 60ರಷ್ಟು ಬಾಲಕಿಯರು.

􀁊 ಕನ್ನಡ ಮತ್ತು ಆಂಗ್ಲ ಮಾಧ್ಯಮ ಎರಡೂ ಶಾಲೆಗಳ ಹಿಂದು, ಮುಸ್ಲಿಂ, ಕ್ರೈಸ್ತ ಹೀಗೆ ವಿವಿಧ ಸಮುದಾಯಗಳ ವಿದ್ಯಾರ್ಥಿಗಳು ಯಕ್ಷಗಾನ ಪ್ರದರ್ಶಿಸುತ್ತಿದ್ದಾರೆ.

􀁊 ಕಳೆದ 13 ವರ್ಷಗಳ ಪ್ರಯತ್ನದಿಂದಾಗಿ ಮೇಳಗಳಿಗೆ ಸೇರಿ ಕಲಾವಿದರ ಮಟ್ಟಕ್ಕೆ ಏರಿದವರಿದ್ದಾರೆ.

􀁊 ಶೈಲೇಶ್‌, ನಿಶ್ವಲ್‌, ರೋಹಿತ್‌ಕುಮಾರ್‌ ಅವರು ಯಕ್ಷ ಶಿಕ್ಷಣ ವಿದ್ಯಾರ್ಥಿಗಳಾಗಿ ಬೆಳೆದು ಉಡುಪಿ ಎಂಜಿಎಂ ಯಕ್ಷಗಾನ ಕೇಂದ್ರದಲ್ಲಿಯೂ ಕಲಿತು ಪ್ರಸ್ತುತ ಯಕ್ಷ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಯಕ್ಷಗಾನ ಶಿಕ್ಷಣದಿಂದಾಗಿ ಫ‌ಲಿತಾಂಶದ ಮೇಲೆ ಉತ್ತಮ ಪರಿಣಾಮ ಬೀರಿದೆ ಎನ್ನುವುದನ್ನು ಶಿಕ್ಷಕರೇ ಒಪ್ಪಿಕೊಳ್ಳುತ್ತಿದ್ದಾರೆ. ಯಕ್ಷ ವಿದ್ಯಾರ್ಥಿಗಳು ತರಗತಿಯ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದದ್ದೇ ಇಲ್ಲ ಎನ್ನಬಹುದು.
– ಎಸ್‌.ವಿ.ಭಟ್‌, ಯಕ್ಷ ಶಿಕ್ಷಣ ಟ್ರಸ್ಟ್‌ ಟ್ರಸ್ಟಿ ಮತ್ತು ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರು, ಉಡುಪಿ.

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next