Advertisement

ಸೇನೆಗೆ ಮಾಹಿತಿ ನೀಡಿದ್ದಕ್ಕೆ ಇಬ್ಬರು ಯುವಕರ ಹತ್ಯೆ

06:00 AM Nov 18, 2018 | Team Udayavani |

ಶ್ರೀನಗರ: ಸೇನೆಯ ಮಾಹಿತಿದಾರ ಎಂಬ ಆರೋಪದ ಮೇರೆಗೆ ಯುವಕನೊಬ್ಬನನ್ನು ಉಗ್ರರು ಚಿತ್ರ ಹಿಂಸೆ ನೀಡಿ ಕೊಂದು ಹಾಕಿದ ವಿಡಿಯೋವೊಂದನ್ನು ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆ ಶನಿವಾರ ಬಿಡುಗಡೆ ಮಾಡಿದೆ. ನದೀಮ್‌ ಮನೂರ್‌ ಎಂಬ ಯುವಕನ ದೇಹಕ್ಕೆ ಗುಂಡಿನ ಸುರಿಮಳೆಗೈಯ್ಯುತ್ತಿರುವ ದೃಶ್ಯ ಗಳಿರುವ ವಿಡಿಯೋ ರಾಜ್ಯಾದ್ಯಂತ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ.

Advertisement

ಗುರುವಾರ ರಾತ್ರಿ ಶೋಪಿಯಾನ್‌ ಜಿಲ್ಲೆಯಿಂದ ನದೀಮ್‌ ನನ್ನು ಉಗ್ರರು ಅಪಹರಿಸಿದ್ದರು. ಶುಕ್ರವಾರ ಬೆಳಗ್ಗೆ ಆತನ ಮೃತದೇಹ ಪತ್ತೆಯಾಗಿತ್ತು. ಸಾಯುವ ಮುನ್ನ ನದೀಮ್‌, “ನಮ್ಮ ಮನೆ ಬಳಿ ಉಗ್ರರು ಅವಿತಿದ್ದ ವಿಚಾರವನ್ನು ಸೇನಾ ಅಧಿಕಾರಿಗೆ ಮಾಹಿತಿ ನೀಡಿದ್ದೆ’ ಎಂದು ಹೇಳಿಕೊಂಡಿರುವುದೂ ವಿಡಿಯೋದಲ್ಲಿದೆ. ಇದೇ ವೇಳೆ, ಶನಿವಾರ ಶೋಪಿಯಾನ್‌ನಲ್ಲೇ 19 ವರ್ಷದ ಮತ್ತೂಬ್ಬ ಯುವಕನನ್ನು ಉಗ್ರರು ಅಪಹರಿಸಿ, ಕೊಂದು ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next