Advertisement
ಇದೇ ವೇಳೆ, ಜಮ್ಮು-ಕಾಶ್ಮೀರ ಸರಕಾರವು ಅಯ್ಯೂಬ್ ಹತ್ಯೆಯ ತನಿಖೆಗೆಂದು ಶನಿವಾರ ವಿಶೇಷ ತನಿಖಾ ತಂಡ ರಚಿಸಿದೆ. ಜತೆಗೆ, ಉತ್ತರ ಶ್ರೀನಗರದ ಎಸ್ಪಿ ಸಾಜದ್ ಖಾಲಿದ್ ಭಟ್ ಅವರನ್ನು ಎತ್ತಂಗಡಿ ಮಾಡಿ ಡಿಜಿಪಿ ಎಸ್.ಪಿ.ವೇದ್ ಆದೇಶ ಹೊರಡಿಸಿದ್ದಾರೆ. “ಪೊಲೀಸ್ ಅಧಿಕಾರಿಯ ಸಾವಿಗೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ. ಇದು ಜಮ್ಮು-ಕಾಶ್ಮೀರ ಪೊಲೀಸರ ಶಪಥ’ ಎಂದು ವೇದ್ ಹೇಳಿದ್ದಾರೆ. ಘಟನೆಯಲ್ಲಿ ಜೆಕೆಎಲ್‌ಎಫ್ ಮುಖ್ಯಸ್ಥ ಯಾಸೀನ್ ಮಲಿಕ್ ಕೈವಾಡವಿದೆಯೇ ಎಂಬುದು ತನಿಖೆಯ ಬಳಿಕವಷ್ಟೇ ತಿಳಿದುಬರಲಿದೆ ಎಂದಿದ್ದಾರೆ.ಈ ನಡುವೆ, ಮಲಿಕ್‌ರನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದಿದ್ದು,ಈದ್ ಹಬ್ಬದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ವಾಗಿ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.