Advertisement
ಹೀಗೆ ಪೊಲೀಸರು ಇದ್ದಲ್ಲಿಗೇ ಹೋಗಿ ತಗಲಾಕ್ಕೊಂಡಿರುವುದು ರವಿ ಎಂಬ ಆರೋಪಿ. ಹೆಬ್ಟಾಳ ಕೆರೆ ಕೋಡಿ ಬಳಿ ಗೋಣಿ ಚೀಲದಲ್ಲಿ ಅನಿಲ್ ಎಂಬಾತನ ಶವ ಪತ್ತೆಯಾಗಿತ್ತು. ಈ ಅನಿಲ್‌ನನ್ನು ಕೊಂದಿರುವುದು ಇದೇ ರವಿ. ಚನ್ನಪಟ್ಟಣ ಮೂಲದ ಆರ್. ರವಿ, ಮೃತ ಅನಿಲ್‌ನ ಸ್ನೇಹಿತನಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಗೆಳೆಯನನ್ನೇ ಕೊಂದವನನ್ನು ಬಂಧಿಸುವಲ್ಲಿ ಕೊಡಿಗೇಹಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
Related Articles
Advertisement
ನಂತರ ಪರಿಚಯಸ್ಥ ಆಟೋ ಚಾಲಕನನ್ನು ಕರೆದು, ಚೀಲದಲ್ಲಿ ಕೆಲ ವಸ್ತುಗಳಿವೆ ಅದನ್ನು ಬೇರೆ ಕಡೆ ಸಾಗಿಸಬೇಕಿದೆ ಎಂದು ಕಥೆ ಕಟ್ಟಿ ಹೆಬ್ಟಾಳ ಕೆರೆ ಕೋಡಿ ಬಳಿ ಹೋಗಿ ಆಟೋ ಇಳಿದಿದ್ದಾನೆ. ಆಟೋ ಚಾಲಕ ಅಲ್ಲಿಂದ ತೆರಳಿದ ನಂತರ ಶವವನ್ನು ಕೋಡಿಗೆ ತಳ್ಳಿ ವಾಪಸಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ಸಿಕ್ಕಿಬಿದ್ದದ್ದು ಹೀಗೆ…: ಜ.21ರಂದು ಹೆಬ್ಟಾಳ ಕೆರೆ ಕೋಡಿ ಬಳಿ ಗೋಣಿ ಚೀಲದಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಕೊಡಿಗೇಹಳ್ಳಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುತ್ತಮುತ್ತ ಪ್ರದೇಶದಲ್ಲಿ ಏನಾದರೂ ಸುಳಿವು ಸಿಗಬಹುದು ಎಂದು ಹುಡುಕಾಟ ನಡೆಸುತ್ತಿದ್ದರು.
ಈ ವೇಳೆ ಆರೋಪಿ ರವಿ ಪೊಲೀಸರ ಹಿಂದಯೇ ಬರುತ್ತಿದ್ದ. ಆತನ ವರ್ತನೆ ಅನುಮಾನಾಸ್ಪದವಾಗಿತ್ತು ಮತ್ತು ಮುಖದಲ್ಲಿ ಭಯ ಕಾಣುತ್ತಿತ್ತು. ಅನುಮಾನ ಬಂದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.