Advertisement

ಒತ್ತಡದಿಂದ ಹೊರಬಂದು ಗುಜರಾತ್‌ ಶಾಸಕರ ಕಿಕೆಟ್‌

12:04 PM Aug 05, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿನ ಬೆಳವಣಿಗೆಗಳಿಂದ ತತ್ತರಿಸಿ ತವರು ರಾಜ್ಯಕ್ಕೆ ತೆರಳಲು ಒತ್ತಡ ಹೇರುತ್ತಿದ್ದ ಗುಜರಾತ ಶಾಸಕರು ಶುಕ್ರವಾರ ಸ್ವಲ್ಪ ಜಾಲಿ ಮೂಡ್‌ನ‌ಲ್ಲಿದ್ದಂತೆ ಕಂಡು ಬಂದು ಕ್ರಿಕೆಟ್‌, ಪ್ರಾರ್ಥನೆ, ಪೂಜೆಯಲ್ಲಿ ತೊಡಗಿದ್ದರು.

Advertisement

ಗುರುವಾರ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಭೇಟಿ ಮಾಡಿ ಧೈರ್ಯ ತುಂಬಿದ ನಂತರ  ಶಾಸಕರು ಉತ್ಸಾಹ ಪಡೆದುಕೊಂಡಂತೆ ಕೆಲವು  ಶಾಸಕರು ರಾಜ್ಯ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮುಖಂಡರ ಜೊತೆಗೆ ರೆಸಾರ್ಟ್‌ನಲ್ಲಿ ಕ್ರಿಕೆಟ್‌ ಆಡಿ ಕಾಲ ಕಳೆದಿದರು.

ಶುಕ್ರವಾರವಾಗಿದ್ದರಿಂದ ಮುಸ್ಲಿಂ ಸಮುದಾಯದ ಗಯಾಸುದ್ದೀನ್‌ ಶೇಖ್‌ ಮತ್ತು ಜಾವೇದ್‌ ಪೀರ್‌ ಜಾದಾ ಮಸೀದಿಗೆ ತೆರಳಿ ಪ್ರಾರ್ಥನೆ ಮುಗಿಸಿ ವಾಪಸ್ಸಾದರು. ಇನ್ನು ಕೆಲವು ಶಾಸಕರು ಪ್ರತ್ಯೇಕವಾಗಿ ರೆಸಾರ್ಟ್‌ನಿಂದ ಹೊರಗೆ ಹೋಗಿ ಸುತ್ತಾಡಿಕೊಂಡು ಬಂದರು.

ಈ ಸಂದರ್ಭದಲ್ಲಿ ಮಾತನಾಡಿದ ಗಯಾಸುದ್ದೀನ್‌ ಶೇಖ್‌, ನಾವೆಲ್ಲಾ ಇಲ್ಲಿ ಸುರಕ್ಷಿತವಾಗಿದ್ದೇವೆ. ಗುಜರಾತ್‌ಗೆ ತೆರಳಲು ಯಾರೂ ಒತ್ತಡ ಹೇರಿಲ್ಲ. ಎಲ್ಲವೂ ಗಾಳಿ ಸುದ್ದಿ, ನಾವೆಲ್ಲರೂ ಇಲ್ಲಿ ಸಂತೋಷವಾಗಿದ್ದೇವೆ. ಪರಮೇಶ್ವರ್‌ ಭೇಟಿ ವೇಳೆ ನಮ್ಮೆಲ್ಲರಿಗೂ ಧೈರ್ಯ ತುಂಬಿದ್ದಾರೆ.

ನಮ್ಮವರ ಮೇಲೆ ಐಟಿ ದಾಳಿ ನಡೆದರೂ ನಾವು ಹೆದರುವುದಿಲ್ಲ. ನೀವು ನಿಶ್ಚಿಂತರಾಗಿರಿ ಎಂದು ಹೇಳಿದ್ದಾರೆ. ನಮ್ಮ ನಾಯಕ ಅಹಮದ್‌ ಪಟೇಲ್‌ ಗೆಲುವು ಖಚಿತವಾಗಿದ್ದು, ಬಿಜೆಪಿಯ ಎಲ್ಲ ಕುತಂತ್ರಗಳಿಗೂ ನಾವು ಉತ್ತರ ಕೊಡುತ್ತೇವೆ ಎಂದು ಹೇಳಿದರು.

Advertisement

ದೇವರ ಮೊರೆ ಹೋದ ಶಾಸಕ: ಗುಜರಾತ್‌ ಶಾಸಕ ಠಾಕೂರ್‌ ನಟವರ್‌ ಸಿನ್ಹಾ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಕುಟುಂಬ ಹಾಗೂ ರೆಸಾರ್ಟ್‌ನಲ್ಲಿರುವ ಎಲ್ಲ ಶಾಸಕರ ಪರ ಅರ್ಚನೆ ಮಾಡಿಸಿದರು. 

ಈ ಮಧ್ಯೆ, ರೆಸಾರ್ಟ್‌ನಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲಿದ್ದ ಗುಜರಾತ್‌ನ ಇಬ್ಬರು ಶಾಸಕರು ಬಿಜೆಎಸ್‌ ಆಸ್ಪತ್ರೆಗೆ ದಾಖಲಾಗಿದ್ದರು, ನಿನ್ನೆ ರಾತ್ರಿಯೇ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ್ದಿದ್ದರಿಂದ ಶನಿವಾರ ರೆಸಾರ್ಟ್‌ಗೆ ವಾಪಸ್ಸಾದರು.

ಮುನಿರತ್ನ ಭೇಟಿ: ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಈಗಲ್‌ ಟನ್‌ ರೆಸಾರ್ಟ್‌ಗೆ ಭೇಟಿ ನೀಡಿದರು.ಆದರೆ, ಕುರುಕ್ಷೇತ್ರ ಚಿತ್ರದ ಮುಹೂರ್ತಕ್ಕೆ  ಸಂಸದ ಡಿ.ಕೆ. ಸುರೇಶ್‌ಗೆ ಆಹ್ವಾನ ಪತ್ರಿಕೆ ನೀಡಲು ಆಗಮಿಸಿದ್ದಾಗಿ ಸಮಜಾಯಿಷಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next