Advertisement

ಸುಪ್ರೀಂ ಮೆಟ್ಟಿಲೇರಲಿದೆ “ದ ಕೇರಳ ಸ್ಟೋರಿ’

11:47 PM May 09, 2023 | Team Udayavani |

ಹೊಸದಿಲ್ಲಿ: ವಿವಾದಿತ “ದ ಕೇರಳ ಸ್ಟೋರಿ’ ಚಿತ್ರ ಪ್ರದರ್ಶನಕ್ಕೆ ಒಂದಿಲ್ಲೊಂದು ಅಡೆತಡೆ ಎದುರಾಗುತ್ತಲೇ ಇದೆ. ಸಿನೆಮಾವನ್ನು ನಿಷೇಧಿಸಿರುವ ಪಶ್ಚಿಮ ಬಂಗಾಲ ಸರಕಾರದ ವಿರುದ್ಧ ಸಿನೆಮಾ ತಂಡ ಸುಪ್ರೀಂಕೋರ್ಟ್‌ ಮೆಟ್ಟಿಲೇರಲು ಸಿದ್ಧತೆ ನಡೆಸಿದೆ.

Advertisement

ದಕ್ಷಿಣದ ರಾಜ್ಯಗಳ ಚಿತ್ರಣವನ್ನು ಕೀಳಾಗಿಸುವಂತೆ ಸಿನೆಮಾವನ್ನು ಚಿತ್ರಿಸಲಾಗಿದೆ ಎಂದು ಆರೋಪಿಸಿ ಪ.ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಸಿನೆಮಾ ಪ್ರದರ್ಶನ ನಿಷೇಧಿಸಿದ್ದರು. ಈ ಹಿನ್ನೆಲೆ ಸಿನೆಮಾ ನಿರ್ಮಾಪಕರಾದ ವಿಪುಲ್‌ ಶಾ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದಾಗಿ ಹೇಳಿ ದ್ದಾರೆ. ಅರ್ಜಿಯಲ್ಲಿ ತಮಿಳುನಾಡಿನಲ್ಲಿ ಸಿನೆಮಾ ಪ್ರದ ರ್ಶನಕ್ಕೆ ಎದುರಾಗುತ್ತಿರುವ ಅಡ್ಡಿಗಳನ್ನು ಪರಿಗಣಿಸಿ, ಭದ್ರತೆ ಒದಗಿಸಲು ರಾಜ್ಯಸರಕಾರಕ್ಕೆ ಸೂಚನೆ ನೀಡು ವಂತೆಯೂ ಮನವಿ ಮಾಡಲಾಗುವುದು ಎನ್ನಲಾಗಿದೆ.

ನಿರ್ಮಾಪಕ ಸಂಘದ ಆಕ್ಷೇಪ: ಸಿನೆಮಾ ನಿಷೇಧದ ಬಗ್ಗೆ ರಾಜ್ಯಗಳು ತೆಗೆದುಕೊಳ್ಳುತ್ತಿರುವ ಏಕಮುಖ ನಿರ್ಣಯದ ಬಗ್ಗೆ ಭಾರತೀಯ ಸಿನೆಮಾ ನಿರ್ಮಾಪಕರ ಸಂಘ ಆಕ್ಷೇಪಿಸಿದೆ. ಸಿನೆಮಾ ಪ್ರದರ್ಶನಗೊಳ್ಳಬೇಕೇ, ಬೇಡವೇ ಎನ್ನುವುದು ಕೇವಲ ಸೆಂಟ್ರಲ್‌ ಬೋರ್ಡ್‌ ಆಫ್ ಸಿನೆಮಾ ಸರ್ಟಿಫಿಕೇಶನ್‌ಗೆ ಇರುವ ಹಕ್ಕು. ಅದನ್ನು ಮಾಡಬೇಕಿರುವುದು ರಾಜ್ಯಗಳಲ್ಲ ಎಂದಿದೆ.

ಶಿವಸೇನೆ ಕಿಡಿ: ಮತ್ತೊಂದೆಡೆ ಬಿಜೆಪಿಯೇತರ ರಾಜ್ಯಗಳಲ್ಲಿನ ಮಹಿಳೆಯರ ನಾಪತ್ತೆ ಸಂಖ್ಯೆಯನ್ನು ಮುಂದಿಟ್ಟು ಸಿನೆಮಾವನ್ನು ಸಮರ್ಥಿಸುತ್ತಿರುವ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಶಿವಸೇನೆ ತಿರುಗೇಟು ನೀಡಿದೆ. ಮೋದಿ-ಅಮಿತ್‌ ಶಾ ಅವರ ಅಂಕೆಯಲ್ಲೇ ಇರುವ ಗುಜರಾತ್‌ನಲ್ಲಿ ಕಳೆದ 5 ವರ್ಷದಲ್ಲಿ 40 ಸಾವಿರ ಮಹಿಳೆಯರು ನಾಪತ್ತೆಯಾಗಿದ್ದಾರೆ. ಇದಕ್ಕೆ ಹೊಣೆಯಾರು ಎಂದು ಪ್ರಶ್ನಿಸಿದೆ.

ನಿರ್ಮಾಪಕರನ್ನು ಗಲ್ಲಿಗೇರಿಸಿ!: ಕೇರಳ ಸ್ಟೋರಿ ಬರೀ ಕೇರಳ ರಾಜ್ಯಕ್ಕಷ್ಟೇ ಅವಮಾನಿಸಿದ್ದಲ್ಲ, ರಾಜ್ಯದ ಹೆಣ್ಣು ಮಕ್ಕಳಿಗೂ ಅವಮಾನ ಮಾಡಿದೆ. ಈ ಹಿನ್ನೆಲೆ ಸಿನೆಮಾದ ನಿರ್ಮಾಪಕರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಮಹಾರಾಷ್ಟ್ರ ಮಾಜಿ ಸಚಿವರಾದ ಜಿತೇಂದ್ರ ಅವØದ್‌ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

Advertisement

ಉ.ಪ್ರದಲ್ಲಿ ತೆರಿಗೆ ಮುಕ್ತ
ಮಧ್ಯಪ್ರದೇಶದಲ್ಲಿ ಕೇರಳ ಸ್ಟೋರಿ ಸಿನೆಮಾಗೆ ತೆರಿಗೆ ವಿನಾಯತಿ ನೀಡಿದ ಬೆನ್ನಲ್ಲೇ, ಇದೀಗ ಉತ್ತರಾಖಂಡ ಹಾಗೂ ಉತ್ತರ ಪ್ರದೇಶದಲ್ಲಿಯೂ ಸಿನೆಮಾಗೆ ತೆರಿಗೆ ವಿನಾಯತಿ ನೀಡಲಾಗಿದೆ. ಶುಕ್ರವಾರ ರಾಜ್ಯದಲ್ಲಿ ವಿಶೇಷ ಸಿನೆಮಾ ಪ್ರದರ್ಶನ ನಡೆಯಲಿದ್ದು, ಖದ್ದು ಸಿಎಂ ಯೋಗಿ ಆದಿತ್ಯನಾಥ ತಮ್ಮ ಸಚಿವ ಸಂಪುಟದ ಜತೆಗೆ ಸಿನೆಮಾ ವೀಕ್ಷಿಸಲಿದ್ದಾರೆ ಎಂದು ಸಿನೆಮಾ ತಂಡ ತಿಳಿಸಿದೆ.

ದೀದಿಗೆ ಕಾನೂನು ನೋಟಿಸ್‌
“ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ದ-ಕಾಶ್ಮೀರ್‌ ಫೈಲ್ಸ್‌, ಪ್ರಚಾರಕ್ಕಾಗಿ ಮಾಡಿದ ಸಿನೆಮಾ. ಅದಕ್ಕಾಗಿ ಅಗ್ನಿಹೋತ್ರಿಗೆ ಬಿಜೆಪಿ ದುಡ್ಡು ನೀಡುತ್ತಿದೆ’ ಎಂದು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಮಮತಾ ವಿರುದ್ಧ ಕಾನೂನು ನೋಟಿಸ್‌ ಜಾರಿಗೊಳಿಸಿರುವುದಾಗಿ ಅಗ್ನಿಹೋತ್ರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next