Advertisement

ಐಸಿಸ್‌ಗೆ ಮಾರಲ್ಪಟ್ಟ ಯುವತಿಯರ ಕಥೆ “ದಿ ಕೇರಳ ಸ್ಟೋರಿ’!

08:51 PM Nov 04, 2022 | Team Udayavani |

ತಿರುವನಂತಪುರ: ವಿವೇಕ್‌ ಅಗ್ನಿಹೋತ್ರಿ ಅವರ “ದಿ ಕಾಶ್ಮೀರ್‌ ಫೈಲ್ಸ್‌’ ಬಳಿಕ ಮತ್ತೊಂದು ಮಾನವ ದುರಂತದ ಘೋರ ಕಥೆಯೊಂದು ಸಿನಿಮಾ ರೂಪದಲ್ಲಿ ತೆರೆ ಮೇಲೆ ಬರಲಿದೆ.

Advertisement

ಆಂಖೇಂ, ನಮಸ್ತೇ ಲಂಡನ್‌ನಂಥ ಚಿತ್ರಗಳ ನಿರ್ದೇಶಕರಾದ ವಿಪುಲ್‌ ಅಮೃತ್‌ಲಾಲ್‌ ಶಾ ಅವರು ನಿಜಜೀವನದ ಕೆಲವು ತುಣುಕುಗಳನ್ನು ಆಧರಿಸಿ “ದಿ ಕೇರಳ ಸ್ಟೋರಿ’ ಎಂಬ ಚಿತ್ರವನ್ನು ತಯಾರಿಸುತ್ತಿದ್ದಾರೆ.

ಅಪಹರಣಕ್ಕೀಡಾಗಿ, ಮತಾಂತರಗೊಂಡು, ಐಸಿಸ್‌ ಉಗ್ರರ ಗುಲಾಮರಾಗಿ ಮಾರಾಟ ಮಾಡಲ್ಪಟ್ಟ ಕೇರಳದ 32 ಸಾವಿರ ಮಹಿಳೆಯರ ಕಥೆಯೇ “ದಿ ಕೇರಳ ಸ್ಟೋರಿ’.

ಗುರುವಾರವಷ್ಟೇ ಈ ಸಿನಿಮಾದ 1.5 ನಿಮಿಷಗಳ ಟೀಸರ್‌ ಬಿಡುಗಡೆಯಾಗಿದ್ದು, 32 ಸಾವಿರ ಮಹಿಳೆಯರ ನಾಪತ್ತೆಯ ಸುತ್ತವೇ ಹೆಣೆದ ಕಥೆ ಇದಾಗಿದೆ.

ಉಗ್ರರಿಗೆ ಮಾರಾಟಗೊಂಡ ಶೀತಲ್‌ ಉನ್ನಿಕೃಷ್ಣನ್‌(ನಟಿ ಅದಾಹ್‌ ಶರ್ಮಾ) ಎಂಬ ಮಹಿಳೆಯ ಪ್ರಬಲ ಮಾತುಗಳನ್ನು ಟೀಸರ್‌ನಲ್ಲಿ ವೀಕ್ಷಿಸಬಹುದು.

Advertisement

ಕಳೆದ 10 ವರ್ಷಗಳಲ್ಲಿ ಕೇರಳದಿಂದ ಕಳ್ಳಸಾಗಣೆಯಾಗಿ, ಒತ್ತಾಯಪೂರ್ವಕವಾಗಿ ಇಸ್ಲಾಂಗೆ ಮತಾಂತರಗೊಂಡು, ಅಫ್ಘಾನಿಸ್ತಾನ, ಸಿರಿಯಾ, ಯೆಮೆನ್‌ನಂಥ ನರಕದಲ್ಲಿ ದಿನ ದೂಡುತ್ತಿರುವ ಹೆಣ್ಣುಮಕ್ಕಳ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.

2023ರಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next