ಇತ್ತೀಚೆಗೆ ಕೇರಳದಲ್ಲಿ ಮಾತೃಭೂಮಿ ಅಂತರರಾಷ್ಟ್ರೀಯ ಲೆಟರ್ಸ್ ಫೆಸ್ಟ್‌ನಲ್ಲಿ ಭಾಗಿಯಾಗಿದ್ದ ಖ್ಯಾತ ಚಿತ್ರನಟ ಪ್ರಕಾಶ್ ರಾಜ್ ಸಿನೆಮಾಗಳ ಬಹಿಷ್ಕಾರದ ಬಗ್ಗೆ ಮತ್ತು ʻದಿ ಕಾಶ್ಮೀರ್ ಫೈಲ್ಸ್ʼ ಸಿನೆಮಾವನ್ನು ಟೀಕಿಸುವ ಮಾತುಗಳನ್ನಾಡಿದ್ದರು. ʻದಿ ಕಾಶ್ಮೀರ್ ಫೈಲ್ಸ್ʼ ಚಿತ್ರವನ್ನು ಟೀಕಿಸಿದ್ದಕ್ಕೆ ಚಿತ್ರ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಕಿಡಿ ಕಾರಿದ್ದಾರೆ.
ಕೇರಳದಲ್ಲಿ ಮಾತನಾಡಿದ್ದ ಪ್ರಕಾಶ್ ರಾಜ್, ʻದಿ ಕಾಶ್ಮೀರ್ ಫೈಲ್ಸ್ʼ ಒಂದು ಅಸಂಬದ್ಧ ಸಿನೆಮಾ. ಅದನ್ನು ಯಾರು ನಿರ್ಮಾಣ ಮಾಡಿದ್ಧಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಇದು ನಾಚಿಕೆಗೇಡು. ಅದರ ನಿರ್ದೇಶಕ ನಮಗೆ ಯಾಕೆ ಆಸ್ಕರ್ ಬರುತ್ತಿಲ್ಲ? ಎಂದು ಕೇಳುತ್ತಾರೆ. ಆದ್ರೆ ಅವರಿಗೆ ಆಸ್ಕರ್ ಅಲ್ಲ ಭಾಸ್ಕರ್ ಕೂಡಾ ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದ್ದರು.
ಇದೀಗ ಪ್ರಕಾಶ್ ರಾಜ್ ಮಾತಿಗೆ ತಿರುಗೇಟು ನೀಡಿರುವ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ʻ ಸಣ್ಣ ಜನರು ಮಾಡಿರುವ ಸಿನೆಮಾ ʻದಿ ಕಾಶ್ಮೀರ್ ಫೈಲ್ಸ್ʼ ಸುಮಾರು ನಗರ ನಕ್ಸಲರ ನಿದ್ದೆಗೆಡಿಸಿದೆ. ಈಗ ಅದರ ಒಬ್ಬ ಕಾರ್ಯಕರ್ತ ಒಂದು ವರ್ಷದ ಬಳಿಕವೂ ವ್ಯಂಗ್ಯದ ಮಾತನಾಡುತ್ತಿದ್ದಾರೆ ಎಂದು ಟಕ್ಕರ್ ಕೊಟ್ಟಿದ್ಧಾರೆ. ಅಲ್ಲದೆ ಪ್ರಕಾಶ್ ರಾಜ್ ಅವರನ್ನು ಮಿ. ಅಂಧಕಾರ್ ರಾಜ್ ಅಂತಲೂ ಕರೆದಿದ್ದಾರೆ.
ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ಸಿನೆಮಾ ʻದಿ ಕಾಶ್ಮೀರ್ ಫೈಲ್ಸ್ʼ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಮೊದಲಾದವರ ತಾರಾಗಣ ಹೊಂದಿದೆ. 2022ರ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನೆಮಾಗಳ ಪಟ್ಟಿಗೆ ಸೇರಿದ್ದುನ ಬಾಕ್ಸಾಫೀಸ್‌ನಲ್ಲಿ 246 ಕೋಟಿ ರೂ. ಸಂಗ್ರಹಿಸಿತ್ತು.