Advertisement

ಕಾಶ್ಮೀರ್ ಫೈಲ್ಸ್ ತೆರೆಯ ಹಿಂದಿನ ಕಥೆ;ನನ್ನ ಪಾತ್ರದಿಂದ ಹೊರಬರಲು 2ವಾರ ಬೇಕಾಯಿತು;ನಟ ದರ್ಶನ್

01:52 PM Mar 16, 2022 | Team Udayavani |

ಇತ್ತೀಚೆಗೆ ತೆರೆ ಕಂಡ ಬಾಲಿವುಡ್ ನ “ದ ಕಾಶ್ಮೀರ್ ಫೈಲ್ಸ್” ಸಿನಿಮಾ ಬಾಕ್ಸಾಫೀಸ್ ನಲ್ಲಿ ಭರ್ಜರಿ ಹಣಗಳಿಕೆಯತ್ತ ಮುನ್ನುಗ್ಗಿದ್ದು, ಚಿತ್ರ ವೀಕ್ಷಿಸುವವರ ಸಂಖ್ಯೆ ಅಧಿಕಗೊಂಡಿದೆ. ಪ್ರೇಕ್ಷಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿರುವ ನಡುವೆಯೇ ಟೀಕೆಗಳೂ ಕೇಳಿಬರುತ್ತಿದೆ. ಏತನ್ಮಧ್ಯೆ 1990ರ ದಶಕದ ಕಾಶ್ಮೀರಿ ಪಂಡಿತ್ ಸಮುದಾಯದ ಹತ್ಯಾಕಾಂಡದ ಕಥಾನಕದ ದ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಕೃಷ್ಣ ಪಂಡಿತ್ ಪಾತ್ರಧಾರಿ ದರ್ಶನ್ ಕುಮಾರ್ ಅವರು ಬಲಪಂಥ, ಎಡಪಂಥದ ವಾದ, ಪ್ರತಿವಾದದ ನಡುವೆ ತಮ್ಮ ಪಾತ್ರ, ಚಿತ್ರೀಕರಣದ ಸಂದರ್ಭದಲ್ಲಿನ ಅನುಭವಗಳನ್ನು ಆಜ್ ತಕ್ ಡಾಟ್ ಇನ್ ಜತೆ ಹಂಚಿಕೊಂಡಿದ್ದು, ಅದರ ಸಾರಾಂಶ ಇಲ್ಲಿದೆ…

Advertisement

ನನ್ನ ಪಾತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ:

ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿನ ಪಾತ್ರಕ್ಕೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದರಿಂದ ತುಂಬಾ ಸಂತೋಷವಾಗಿರುವುದಾಗಿ ನಟ ದರ್ಶನ್ ಕುಮಾರ್ ತಿಳಿಸಿದ್ದಾರೆ. ನನ್ನ ಅಭಿನಯವನ್ನು ಪ್ರೇಕ್ಷಕರು ಮಾತ್ರವಲ್ಲ, ಸಿನಿಮಾರಂಗದವರು ಕೂಡಾ ಕರೆ ಮಾಡಿ ಪ್ರಶಂಶಿಸಿದ್ದಾರೆ. ಇದೊಂದು ನನ್ನ ಜೀವನದ ದೊಡ್ಡ ಸಾಧನೆಯಾಗಿದೆ ಎಂದು ಹೇಳಿದ್ದಾರೆ.

ಜನರ ಮುಂದೆ ಸತ್ಯ ಹೊರಬರಬೇಕಾಗಿದೆ:

Advertisement

ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು ಹೇಗೆ ಮತ್ತು ಪಾತ್ರದ ತಯಾರಿ ಕುರಿತು ಮಾತನಾಡಿರುವ ದರ್ಶನ್ ಕುಮಾರ್, ಸಿನಿಮಾದ ಪಾತ್ರಕ್ಕಾಗಿ ನಟರನ್ನು ಆಯ್ಕೆ ಮಾಡುವ ಕಾಸ್ಟಿಂಗ್ ಡೈರೆಕ್ಟರ್ ತರುಣ್ ಬಜಾಜ್ ಅವರು ನನಗೆ ಕರೆ ಮಾಡಿ, ದ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಿಸಲು ಬಯಸಿರುವುದಾಗಿ ತಿಳಿಸಿದ್ದರು. ನಂತರ ನಾನು ವಿವೇಕ್ ಅಗ್ನಿಹೋತ್ರಿ, ಪಲ್ಲವಿ ಜೋಶಿ ಅವರನ್ನು ಭೇಟಿಯಾಗಲು ತೆರಳಿದ್ದೆ. ಆಗ ವಿವೇಕ್ ಅವರು ನನಗೆ ಸಿನಿಮಾದ ಕುರಿತು ವಿವರಣೆ ನೀಡುವುದಾಗಿ ಹೇಳಿ ಅವರ ಕಚೇರಿಯಲ್ಲಿರುವ ಥಿಯೇಟರ್ ಕೋಣೆಗೆ ಕರೆದೊಯ್ದಿದ್ದರು. ಅಲ್ಲಿ 20 ನಿಮಿಷಗಳ ವಿಡಿಯೋ ಕ್ಲಿಪ್ ಪ್ರದರ್ಶಿಸಿದ್ದರು. ವಿಡಿಯೋದಲ್ಲಿ 700 ಕಾಶ್ಮೀರಿ ಪಂಡಿತರ ನೋವಿನ ಚಿತ್ರಣವಿತ್ತು. ಆ ವಿಡಿಯೋ ವೀಕ್ಷಿಸಿದ ನಂತರ ನಾನು ತುಂಬಾ ವಿಚಲಿತನಾಗಿಬಿಟ್ಟಿದ್ದೆ. ಈ ಸತ್ಯ ಜನರ ಮುಂದೆ ಬರಬೇಕೆಂದು ಬಯಸಿದ್ದು, ಆ ಸಂದರ್ಭದಲ್ಲಿ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ, ಸಿನಿಮಾದ ಸ್ಕ್ರಿಫ್ಟ್ ನೊಂದಿಗೆ ಮನೆಗೆ ವಾಪಸ್ಸಾಗಿದ್ದೆ ಎಂದು ನಟ ದರ್ಶನ್ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಚಿತ್ರೀಕರಣ ಪೂರ್ಣಗೊಂಡ ನಂತರ ನನ್ನ ಪಾತ್ರದಿಂದ ಹೊರ ಬರಲು 2 ವಾರ ತೆಗೆದುಕೊಂಡಿದ್ದೆ!

ದ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿನ ಚಿತ್ರೀಕರಣ ನನಗೆ ತುಂಬಾ ಸವಾಲಿನದ್ದಾಗಿತ್ತು. ಸಿನಿಮಾದ ಚಿತ್ರೀಕರಣ ಮುಕ್ತಾಯವಾದ ನಂತರ ನನ್ನ ಪಾತ್ರ (ಕೃಷ್ಣ ಪಂಡಿತ್)ದಿಂದ ಹೊರ ಬರಲು ಎರಡು ವಾರ ಬೇಕಾಯಿತು. ಇದೊಂದು ತುಂಬಾ ಒತ್ತಡದ ಪ್ರಕ್ರಿಯೆಯಾಗಿತ್ತು. ನನ್ನ ಪಾತ್ರದಲ್ಲಿ ಸಂಪೂರ್ಣ ತಲ್ಲೀನನಾಗಿದ್ದೆ, ವಿಶ್ರಾಂತಿ ಇಲ್ಲದೇ ನಿದ್ದೆಯೂ ಮಾಡಲಿಲ್ಲ. ಈ ಪಾತ್ರ ನನ್ನನ್ನು ಭಾವನಾತ್ಮ ಕಾಡಿತ್ತು. ಚಿತ್ರೀಕರಣದ ಮುಕ್ತಾಯದ ನಂತರ ಉತ್ಸಾಹ, ಉದ್ವೇಗದಿಂದ ಭಾಷಣ ಮಾಡಿದ್ದೆ. ಈ ಚಿತ್ರ ಜನರ ಹೃದಯವನ್ನು ಮುಟ್ಟಬೇಕೆಂದು ನಾನು ಬಯಸಿದ್ದೆ. ಕಾಶ್ಮೀರ ಜನರ ಇತಿಹಾಸವನ್ನು ನಾನು ಓದಿದ್ದೆ ಮತ್ತು ಪ್ರತಿಯೊಂದು ಅಂಶವನ್ನು ಮನಗಂಡಿದ್ದೇನೆ ಎಂಬುದಾಗಿ ನಟ ದರ್ಶನ್ ಕುಮಾರ್ ಮುಕ್ತವಾಗಿ ತಮ್ಮ ಮಾತನ್ನು ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next