Advertisement

ತಾಲೂಕು ಕೇಂದ್ರಗಳಲ್ಲೂ ನಿಲ್ಲದ ಕಾರವಾರ ಎಕ್ಸ್‌ಪ್ರೆಸ್‌

04:50 PM Sep 15, 2021 | Team Udayavani |

ಕುದೂರು: ರೈಲ್ವೆ ನಿಲ್ದಾಣವಿದ್ದರೂ ಎಕ್ಸ್‌ಪ್ರೆಸ್‌ ರೈಲುಗಳು ಕನಿಷ್ಠ ತಾಲೂಕು ಕೇಂದ್ರಗಳಲ್ಲಿಯೂ ನಿಲ್ಲದೆ ಓಡಾಡುತ್ತಿರುವುದರಿಂದ ಈ ಭಾಗದ ಮೂರು ತಾಲೂಕಿನ ಜನರಿಗೆ ತೀವ್ರ ಸಮಸ್ಯೆಯಾಗಿದೆ.

Advertisement

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ನಿತ್ಯ ರಾತ್ರಿ ಹೊರಡುವ ಬೆಂಗಳೂರು ಕಾರಾವಾರ ಎಕ್ಸ್‌ಪ್ರೆಸ್‌ ಹೋಬಳಿ ಕೇಂದ್ರಗಳಲ್ಲಿ ನಿಲ್ಲಿಸುವುದಿರಲಿ ತಾಲೂಕು ಕೇಂದ್ರಗಳಲ್ಲಿಯೂ ನಿಲ್ಲುತ್ತಿಲ್ಲ.

ಯಾರಿಗೆಲ್ಲ ಸಮಸ್ಯೆ: ಕುಕ್ಕೆಸುಬ್ರಹ್ಮಣ್ಯ, ಧರ್ಮಸ್ಥಳ ಹಾಗೂ ಮಂಗಳೂರಿಗೆ ತೆರಳುವ ಪ್ರಯಾಣಿಕರು ಹೆಚ್ಚಾಗಿ ಕಾರವಾರ ರೈಲನ್ನೇ ನಂಬಿಕೊಂಡಿದ್ದಾರೆ. ಪ್ರತಿನಿತ್ಯ ಬೆಂಗಳೂರಿನಿಂದ ರಾತ್ರಿ ಹೊರಡುವ ಕಾರವಾರ ಎಕ್ಸ್‌ಪ್ರೆಸ್‌ ಬೆಂ. ಗ್ರಾಂ.ಜಿಲ್ಲೆ ನೆಲಮಂಗಲ, ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು, ತಿಪ್ಪಸಂದ್ರ, ತುಮಕೂರು ಗ್ರಾಂ. ಕುಣಿಗಲ್‌, ಮಂಡ್ಯ ಜಿಲ್ಲೆಯ ನಾಗಮಂಗಲ
ತಾಲೂಕಿನ ಮೇಲೆ ಸಂಚರಿಸುತ್ತದೆ.

ಈ 4 ತಾಲೂಕುಗಳ ಪೈಕಿ ನೆಲಮಂಗಲ, ಸೋಲೂರು, ತಿಪ್ಪಸಂದ್ರ, ಕುಣಿಗಲ್‌, ಯಡಿಯೂರು, ಹಿರಿಸಾವೆ, ಹಾಗೂ ಬಿ.ಜಿ.ನಗರ ಭಾಗಗಳಲ್ಲಿ ರೈಲ್ವೆ ನಿಲ್ದಾಣವಿದ್ದರೂ ಸ್ಟಾಪ್‌ ನೀಡುತ್ತಿಲ್ಲ.

ಇದನ್ನೂ ಓದಿ:ಬಾಲಿವುಡ್‍ಗೆ ಬಸ್ರೂರ್ : ‍‘ಗರುಡ’ ಚಿತ್ರಕ್ಕೆ ರವಿ ಸಂಗೀತ

Advertisement

ಕುಣಿಗಲ್‌ನಲ್ಲೂ ರೈಲು ನಿಲ್ಲಲ್ಲ; ಕನಿಷ್ಠ ಪಕ್ಷ ತಾಲೂಕು ಕೇಂದ್ರ ಕುಣಿಗಲ್‌ ರೈಲ್ವೆ ನಿಲ್ದಾಣದಲ್ಲಿಯೂ ಕಾರವಾರ ಎಕ್ಸ್‌ಪ್ರೆಸ್‌ ನಿಲ್ಲುತ್ತಿಲ್ಲ. ಹೀಗಾಗಿ ಪ್ರಯಾಣಿಕರು ತಮ್ಮ ಸ್ಥಳೀಯ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್‌ ಮಾಡಿಸಿಕೊಂಡು ಶ್ರವಣಬೆಳಗೋಳ ಸಮಿಪದ ಚನ್ನರಾಯಪಟ್ಟಣ ರೈಲ್ವೆ ನಿಲ್ದಾಣ ಕ್ಕೆ ಹೋಗಿ ಟ್ರೈನ್‌ ಹತ್ತಬೇಕಾದ ಪರಿಸ್ಥಿತಿ ಬಂದಿದೆ. ಮತ್ತೆ ಕಾರವಾದಿಂದ ಬೆಂಗಳೂರಿಗೆ ಬರಬೇಕಾದರೂ ಅಲ್ಲಿಂದ ವಾಪಾಸ್ಸಾಗುವ ಪ್ರಯಾಣಿ ಕರು ಚನ್ನರಾಯಪಟ್ಟಣದಲ್ಲೇ ಇಳಿದು ತಮ್ಮ ಊರುಗಳಿಗೆ ಪ್ರಯಾಣಿಸಬೇಕಿದೆ. ರಾಜ್ಯ ಸಾರಿಗೆಯಲ್ಲಿ ಇಂತಹ ಸಮಸ್ಯೆ ಇದ್ದರೆ ಬೇಗನೆ ದೂರು ನೀಡಬಹುದಿತ್ತು. ಆದರೆ ರೈಲು ನಿಲ್ಲಿಸಲು ಎಲ್ಲಿ ಯಾರಿಗೆ ದೂರು ನೀಡಬೇಕು? ಎಂಬುದೇ ಪ್ರಯಾಣಕರಿಗೆ ತೋಚದೆ ರೈಲ್ವೆ ಇಲಾಖೆ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ತಾಲೂಕು ಕೇಂದ್ರಗಳಲ್ಲಿ ಕನಿಷ್ಠ ಎರಡು ನಿಮಿಷ ಕಾರಾವಾರ ‌ರೈಲು ನಿಲುಗಡೆ ಮಾಡಿದರೆ ಬಹಳ ಜನರಿಗೆ ಅನುಕೂಲವಾಗುವುದು. ಭಾರತೀಯ ರೈಲ್ವೆ ಅವೈಜ್ಞಾನಿಕವಾಗಿ ರೈಲು ನಿಲುಗಡೆ ಪ್ರಕಟಿಸಿರುವುದು ಸ್ಥಳೀಯರಿಗೆ ಬೇಸರವಾಗಿದೆ.
– ಪದ್ಮನಾಬ್‌, ರೈಲ್ವೆ ಪ್ರಯಾಣಿಕ

ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್‌ ನಿಲುಗಡೆ ಬಗ್ಗೆ ನಮ್ಮ ಇಲಾಖೆಯ ಕಳೆಹಂತದ ಅಧಿಕಾರಿಗಳಿಗೆ ವರದಿ ನೀಡಲು ಸೂಚಿಸಿದ್ದೇನೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು.
– ಸಂಜೀವ್‌ ಕಿಶೋರ್‌, ಮುಖ್ಯಸ್ಥರು,
ನೈರುತ್ಯ ರೈಲ್ವೆ ವಿಭಾಗ ಹುಬ್ಬಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next