Advertisement

ಕರ್ಲಾನ್‌ ಸ್ಲೀಪ್ ಸ್ಟೇಷನ್‌ಮ್ಯಾಟ್ರೆಸ್‌ ಮಾರುಕಟ್ಟೆಗೆ

11:53 AM Sep 06, 2018 | |

ಬೆಂಗಳೂರು: ಭಾರತದ ಮುಂಚೂಣಿ ಮ್ಯಾಟ್ರೆಸ್‌, ಸೋಫಾ ಮತ್ತು ಪೀಠೊಪಕರಣಗಳ ತಯಾರಿಕಾ ಸಂಸ್ಥೆಯಾಗಿರುವ ಕರ್ಲಾನ್‌ ವತಿಯಿಂದ ನೂತನ ಹಾಗೂ ಉನ್ನತ ಶ್ರೇಣಿಯ, ಎಸ್‌ಟಿಆರ್‌ 8 ತಂತ್ರಜ್ಞಾನದಲ್ಲಿ ಸಿದ್ಧಪಡಿಸಿರುವ ಸ್ಲೀಪ್ ಸ್ಟೇಷನ್‌ ಹೆಸರಿನ ಮ್ಯಾಟ್ರೆಸ್‌ (ಹಾಸಿಗೆ) ನಗರದಲ್ಲಿ ಬುಧವಾರ ಬಿಡುಗಡೆ ಮಾಡಲಾಯಿತು.

Advertisement

ಈ ವೇಳೆ ಕರ್ಲಾನ್‌ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸುಧಾಕರ ಪೈ ಮಾತನಾಡಿ, ಜನರ ಆಧುನಿಕ ಜೀವನಕ್ಕೆ ತಕ್ಕಂತೆ ಹೊಸ ತಂತ್ರಜ್ಞಾನದೊಂದಿಗೆ ಈ ನೂತನ ಹಾಸಿಗೆಯನ್ನು ಸಿದ್ಧಪಡಿಸಲಾಗಿದೆ. ಇದು ಹಿಂದಿನ ಹಾಸಿಗೆಗಳಿಗಿಂತ ಶೇ.40ರಷ್ಟು ಹಗುರವಾಗಿದೆ. ಯಾರು ಬೇಕಾದರೂ ಸುಲಭವಾಗಿ ಬಳಕೆ ಹಾಗೂ ನಿರ್ವಹಣೆ
ಮಾಡಬಹುದು ಎಂದು ಹೇಳಿದರು.

ಎರಡು ವರ್ಷಗಳ ಹಿಂದೆ ನಾವು ಆರಂಭಿಸಿದ ಕರ್ಲೋಪೀಡಿಕ್‌ ತಂತ್ರಜ್ಞಾನವು ಮಾರುಕಟ್ಟೆಯಲ್ಲಿ ಅಪಾರ ಯಶಸ್ಸು ಕಂಡಿದೆ. ಅಂತೆಯೇ ಉತ್ಪನ್ನದ ಮಾರಾಟ ದುಪ್ಪಟ್ಟಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಹಾಸಿಗೆ ಹಾಗೂ ಗೃಹ ಪೀಠೊಪಕರಣಗಳಲ್ಲಿ 125ಕ್ಕೂ ಹೆಚ್ಚು ವೈವಿಧ್ಯತೆಯ ಉತ್ಪನ್ನಗಳನ್ನು ಆವಿಷ್ಕರಿಸಲು ಮುಂದಾಗಿದ್ದೇವೆ. 

ಜತೆಗೆ ಪ್ರಸ್ತುತ ಇರುವ 430 ಕರ್ಲಾನ್‌ ಹೋಮ್‌ ಸ್ಟೋರ್‌ಗಳನ್ನು 1000ಕ್ಕೆ ಏರಿಸುವ ಹಾಗೂ 100 ಹೋಮ್‌ ಕಂಫ‌ರ್ಟ್‌ ಮಳಿಗೆಗಳನ್ನು ಆರಂಭಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು. 

ಕರ್ಲಾನ್‌ ಸಂಸ್ಥೆಯ ಪ್ರಧಾನ ಮಾರುಕಟ್ಟೆ ಅಧಿಕಾರಿ ಆಶುತೋಶ್‌ ವೈದ್ಯ ಈ ಸಂದರ್ಭದಲ್ಲಿ ಮಾತನಾಡಿ, ಈ ಹಿಂದಿನ ಅಂಕಿ-ಸಂಖ್ಯೆಗಳಿಗೆ ಹೋಲಿಸಿದರೆ, ಪ್ರಸ್ತುತ ಹೆಚ್ಚಿನ ಸಂಖ್ಯೆಯ ಭಾರತೀಯರು ನಿದ್ರಾಹೀನತೆ ಮತ್ತು ನಿದ್ರೆಗೆ
ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಸಂಶೋಧನೆವೊಂದರಿಂದ ತಿಳಿದು ಬಂದಿದೆ. ಇದಕ್ಕೆ ಮುಖ್ಯ ಕಾರಣ ಒತ್ತಡದ ಹಾಗೂ ಬದಲಾಗುತ್ತಿರುವ ಜೀವನ ಶೈಲಿ. ಇಂತಹ ಸ್ಥಿತಿಗಳನ್ನು ಅಧ್ಯಯನ ಮಾಡಿಯೇ ಆಧುನಿಕ ತಂತ್ರಜ್ಞಾನವಾದ ಎಸ್‌ಟಿಆರ್‌ 8 ಬಳಸಿ ಅತ್ಯಂತ ಹಗುರವಾದ ಹಾಗೂ ದೃಢವಾದ, ಪುಟಿದೇಳುವಂತಹ ಹಾಸಿಗೆಯನ್ನು ಸಿದ್ಧಪಡಿಸಿದ್ದೇವೆ. ಇದು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಿ ಸುಖಕರ ನಿದ್ದೆಗೆ ಜಾರುವಂತೆ ಮಾಡುತ್ತದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next