Advertisement

ಮನುಷ್ಯನಿಗೆ ಕನ್ನಡ ಭಾಷೆ ತಾಯಿಯಷ್ಟೇ ಮುಖ್ಯ

11:48 AM Feb 02, 2018 | |

ಹುಣಸೂರು: ಕನ್ನಡ ಅವರವರ ಭಾವಕ್ಕೆ ತಲುಪುವಂತಹದ್ದು. ರೋಮಾಂಚನ ಉಂಟುಮಾಡುವ, ರಮಿಸುವ ಹಿತ ನೀಡುವ, ತಾಯಿಯಂತೆ ಪೋಷಿಸುವ, ಕನ್ನಡಿಗರ ಅಮ್ಮ, ಈ ಭಾರತ ಮಾತೆಯ ತನುಜಾತೆ ಎಂದು ತಾಪಂ ಇಒ ಕಷ್ಣಕುಮಾರ್‌ ತಿಳಿಸಿದರು.

Advertisement

ತಾಲೂಕಿನ ಕರ್ಣಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಒಬ್ಬ ಮನುಷ್ಯ ರೂಪುಗೊಳ್ಳಲು ತಾಯಿ ಎಷ್ಟು ಮುಖ್ಯವೂ ಅದೇ ರೀತಿ ಕನ್ನಡ ಭಾಷೆ ನಮಗೆ ಮುಖ್ಯ ಎಂದರು.

ಕೊಳೆ ತೊಳೆಯುವುದು: ಸಾಹಿತ್ಯವು ದೈನಂದಿನ ಬದುಕಿನ ಕೊಳೆಗಳನ್ನು ತೊಳೆಯುವ ಮಾರ್ಜಕದಂತೆ ಕಾರ್ಯ ನಿರ್ವಹಿಸಬೇಕು. ದೂರದರ್ಶನ, ಸಾಮಾಜಿಕ ಜಾಲತಾಣದ ಪ್ರವಾಹದಿಂದ ಕನ್ನಡವನ್ನು ರಕ್ಷಿಸುವಂತಿರಬೇಕು. ಸಾಹಿತ್ಯವು  ಧರ್ಮ ಮತ್ತು ವಿಜ್ಞಾನಗಳ ಆಧಾರಸ್ತಂಭಗಳ ಮೇಲೆ ನಿಂತು ಅಜ್ಞಾನವನ್ನಳಿಸಿ ಸುಜ್ಞಾನವನ್ನು ನೀಡಿ, ಅಂಧ ಶ್ರದ್ಧೆ ವಿರುದ್ಧ ದನಿ ನೀಡಬೇಕು ಎಂದರು.

ಸಾಹಿತಿ ಆಲೂರು ಬಸವರಾಜು ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯಿಂದ ಸಾಕಷ್ಟು ಭಿನ್ನವಾಗಿರುವ ನಮ್ಮ ಸಾಹಿತ್ಯದಲ್ಲಿ ಸಾಮಾನ್ಯನ ನುಡಿಗೂ ಬೆಲೆ ನೀಡುವ ಸಾಹಿತ್ಯ ಭಾರತೀಯರದ್ದು. ಮುಂದಿನ ಜನಾಂಗಕ್ಕೆ ಜೀವಂತ ಸಾಹಿತ್ಯ ನೀಡುವ ಜವಾಬ್ದಾರಿ ಎಲ್ಲರ ಮೇಲಿದೆ. ಹುಣಸೂರು ಸಾಕಷ್ಟು ವಿಶೇಷತೆ ಹೊಂದಿದೆ.

ಇಲ್ಲಿ ಚದುರಂಗ, ಹುಣಸೂರು ಕಷ್ಣಮೂರ್ತಿ, ಕೆಂಪರಾಜ ಅರಸು, ದೇವರಾಜ ಅರಸುರಂತಹ ದಿಗ್ಗಜರನ್ನು ಕೊಟ್ಟ ತಾಲೂಕೆಂದು ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ನವೀನ್‌ ರೆ, ಬಿಇಒ ಎಸ್‌.ರೇವಣ್ಣ, ಕಾರ್ಯದರ್ಶಿ ಜೆ.ಮಹದೇವ ಹನಗೋಡು ಹೋಬಳಿಯ ಪ್ರಧಾನ ಕಾರ್ಯದರ್ಶಿ ಕೆ.ಗಣಪತಿ ಮಾತನಾಡಿದರು.

Advertisement

ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ರಾಜಣ್ಣ, ನಿವತ್ತ ಶಿಕ್ಷಕ ಡಿ.ವಿ.ಶ್ರೀನಿವಾಸಮೂರ್ತಿ, ಕಣಗಾಲು ಶಾಲೆಯ ಮುಖ್ಯಶಿಕ್ಷಕ ಡಿ.ಕೆ.ಸ್ವಾಮಿ ಸನ್ಮಾನ ಮಾಡಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು. ಮುಂದಿನ ಕನ್ನಡ ಹಬ್ಬಕ್ಕೆ ಕನ್ನಡ ಧ್ವಜವನ್ನು ದೊಡ್ಡಹೆಜೂjರು ಗ್ರಾಮ ಪಂಚಾಯ್ತಿಗೆ ಹಸ್ತಂತಾರಿಸಲಾಯಿತು.

ಕರ್ಣಕುಪ್ಪೆ ಗ್ರಾಪಂ ಅಧ್ಯಕ್ಷ ಪಾಪಣ್ಣ, ಕಸಾಪ ತಾಲೂಕು ಉಪಾಧ್ಯಕ್ಷ ಸಿ.ಎಸ್‌.ಮಹೇಶ ಚಿಲ್ಕುಂದ, ಕರ್ಣಕುಪ್ಪೆ ಗ್ರಾಮ ಮುಖಂಡರಾದ ನಾಗಣ್ಣ, ಡಾ.ಕೀರ್ತಿಕುಮಾರ್‌, ಡಾ.ಮರೀಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಈರಣ್ಣ, ಪ್ರಚಾರ ಸಮಿತಿ ಕಾರ್ಯದರ್ಶಿ ಕೆ.ಪಿ.ರಾಘವೇಂದ್ರ, ಕರ್ಣಕುಪ್ಪೆ ಗ್ರಾಪಂ ವ್ಯಾಪ್ತಿಯ ಎಲ್ಲಾ ಶಿಕ್ಷಕರು, ಮಕ್ಕಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ 700ಕ್ಕೂ ಹೆಚ್ಚು ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next