Advertisement

“ಮಿಷನರಿಗಳ ಕನ್ನಡ ವೃತ್ತಾಂತ’, “ಕರ್ಣಾಟ ಗ್ರಾಮರ್‌’

11:19 AM Jul 24, 2018 | Harsha Rao |

ಮಂಗಳೂರು: ಪ್ರೊ| ಎ.ವಿ.ನಾವಡ ಅವರು ಬರೆದ “ಮಿಷನರಿಗಳ ಕನ್ನಡ ವೃತ್ತಾಂತ’ ಮತ್ತು ಡಾ| ವಿಲಿಯಂ ಕೇರಿ ಅವರ ಕೃತಿ, ಪ್ರೊ| ಎ.ವಿ. ನಾವಡ ಹಾಗೂ ಡಾ| ಮಹೀದಾಸ ಸಂಪಾದಿ ಸಿದ “ಕರ್ಣಾಟ ಗ್ರಾಮರ್‌’ ಕೃತಿಗಳ ಬಿಡುಗಡೆ ಸಮಾರಂಭ ನಗರದ ಮಹಿಳಾ ಸಂಪನ್ಮೂಲ ಕೇಂದ್ರ ಸಭಾಂಗಣದಲ್ಲಿ ಸೋಮವಾರ ಜರಗಿತು.

Advertisement

ಕೃತಿ ಬಿಡುಗಡೆಗೊಳಿಸಿದ ಚೆನ್ನೈಯ ಸಿಎಸ್‌ಐ ಪ್ರ. ಕಾರ್ಯದರ್ಶಿ ಡಾ| ಡಿ.ಆರ್‌. ಸದಾನಂದ ಮಾತನಾಡಿ, ಎ. ವಿ. ನಾವಡ ಅವರ ಕೃತಿಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಶಾಸ್ತ್ರೀಯತೆಯ ಸೊಗಡಿದೆ. “ಮಿಷನರಿಗಳ ಕನ್ನಡ ವೃತ್ತಾಂತ’ ಕೃತಿ ಕನ್ನಡದ ಸಾಂಸ್ಕೃತಿಕ ಬೇರುಗಳನ್ನು ಜನಮಾನಸದಲ್ಲಿ ಅಚ್ಚೊತ್ತುವಂತಿದೆ ಎಂದು ಅಭಿಪ್ರಾಯಪಟ್ಟರು.

ಪಾಶ್ಚಾತ್ಯ ಸಂಸ್ಕೃತಿಯ ಪ್ರತಿನಿಧಿಗಳಾದ ಮಿಷನರಿಗಳು ಕನ್ನಡದ ಆಂತರ್ಯವನ್ನು ತಿಳಿದುಕೊಂಡ ಬಳಿಕ ಜರ್ಮನಿ ಮತ್ತು ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಸ್ನೇಹಾಲಿಂಗನವಾಯಿತು. ಇದೇ ಮುಂದೆ ಜರ್ಮನ್‌ ಮತ್ತು ಕನ್ನಡ ಸಾಹಿತ್ಯ, ಸಂಸ್ಕೃತಿಗಳು ಪರಸ್ಪರ ಪರಿಚಯಿಸಿಕೊಳ್ಳಲು ಕಾರಣವಾಯಿತು ಎಂದವರು ಹೇಳಿದರು.

ದಕ್ಷಿಣ ಸಭಾ ಪ್ರಾಂತ ಬಿಷಪ್‌ ವಂ| ಮೋಹನ್‌ ಮನೋರಾಜ್‌ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಬಿಷಪ್‌ ಡಾ| ಸಿ.ಎಲ್‌. ಫ‌ುರ್ಟಾಡೊ, ಕೇರಳ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ| ಶ್ರೀಕೃಷ್ಣ ಭಟ್‌ ಕೃತಿಗಳನ್ನು ಪರಿಚಯಿಸಿದರು. ಕರ್ನಾಟಕ ಥಿಯೋಲಾಜಿಕಲ್‌ ಕಾಲೇಜಿನ ಪ್ರಾಂಶುಪಾಲ ಡಾ| ಹನಿಬಾಲ್‌ ಕಬ್ರಾಲ್‌ ಮುಖ್ಯ ಅತಿಥಿಯಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next