ಎಸ್‌ಎಫ್ಸಿ (ಸ್ಟೇಟ್ ಫೈನಾನ್ಸ್ ಕಮಿಷನ್) ವಿಶೇಷ ಅನುದಾನದಿಂದ ಈ ಕಾಮಗಾರಿ ನಡೆಯುತ್ತಿದೆ. ವಿಧಾನಸಭೆ ಚುನಾವಣೆ ಸಹಿತ ಅನೇಕ ಕಾರಣಗಳಿಂದ ಕಾಮಗಾರಿ ವಿಳಂಬವಾಗಿತ್ತು. 2018ರ ಡಿಸೆಂಬರ್‌ನಿಂದ ಮತ್ತೆ ಆರಂಭವಾಗಿದೆ. ನಿಧಾನಗತಿಯಲ್ಲಿ ಸಾಗುತ್ತಿದ್ದ ಕಾಮಗಾರಿ ಈಗ ವೇಗ ಪಡೆದುಕೊಂಡಿದೆ.
Advertisement
ಪ್ರೊಟೆಕ್ಷನ್ ವಾಲ್ಮುನ್ನೆಚ್ಚರಿಕೆಯಾಗಿ ಎರಡೂ ಬದಿಯಲ್ಲಿ ಕಲ್ಲು ಕಟ್ಟಿ ಪ್ರೊಟೆಕ್ಷನ್ ವಾಲ್ ನಿರ್ಮಿಸಲಾಗುತ್ತಿದೆ. ಇದಾದ ಅನಂತರ ಅಪಾರ್ಟ್‌ಮೆಂಟ್ ಪಿಲ್ಲರ್ ಕಾಮಗಾರಿ ನಡೆಯಲಿದೆ. ಈಗಾಗಲೇ ಶೇ.50ರಷ್ಟು ಕಾಮಗಾರಿ ಮುಕ್ತಾಯಗೊಂಡಿದ್ದು, ಎಪ್ರಿಲ್‌ನಲ್ಲಿ ಪೂರ್ಣಗೊಳ್ಳಲಿದೆ ಎನ್ನುತ್ತಾರೆ ನಗರಸಭೆ ಎಂಜಿನಿಯರ್ ಗಣೇಶ್.
ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಲಿದೆ. ಆದರೆ ಈಗಾಗಲೇ ಆರಂಭವಾಗಿರುವ ಈ ಕಾಮಗಾರಿಗೆ ಅದರಿಂದ ಯಾವುದೇ ತೊಂದರೆ ಆಗದು. ಹೊಸ ಕಾಮಗಾರಿ ಆರಂಭಿಸಲು ಮಾತ್ರ ಚುನಾವಣೆ ನೀತಿ ಸಂಹಿತೆ ತೊಡಕಾಗುತ್ತದೆ. ಟ್ರಾಫಿಕ್ ಜಾಮ್
ಉಡುಪಿ-ಮಣಿಪಾಲ, ಅಂಬಾಗಿಲು, ಗುಂಡಿಬೈಲು, ದೊಡ್ಡಣಗುಡ್ಡೆ, ಶ್ರೀಕೃಷ್ಣ ಮಠಕ್ಕೆ ಸಂಧಿಸುವ ಪ್ರಮುಖ ವೃತ್ತ ಕಲ್ಸಂಕ. ಇಂದ್ರಾಣಿಯಿಂದ ಹರಿಯುವ ದೊಡ್ಡ ತೋಡು ಇಲ್ಲಿ ಹರಿಯುವುದರಿಂದ ಕಿರು ಸೇತುವೆ ನಿರ್ಮಿಸಲಾಗಿದೆ. ಅಂಬಾಗಿಲು, ಮಣಿಪಾಲದ ಕಡೆ ಟರ್ನ್ ತೆಗೆದುಕೊಳ್ಳುವಾಗ, ಮಣಿಪಾಲ, ಉಡುಪಿಯಿಂದ ಕೃಷ್ಣಮಠಕ್ಕೆ ತೆರಳುವವರು ಇಲ್ಲಿ ತೊಂದರೆ ಅನುಭವಿಸುವಂತಾಗಿದೆ. ಬೆಳಗ್ಗೆ ಮತ್ತು ಸಂಜೆ ಹೊತ್ತು ಸಹಿತ ವಾರಾಂತ್ಯದಲ್ಲಿ ಸವಾರರು ಟ್ರಾಫಿಕ್ ಜಾಮ್‌ನಿಂದ ಇಲ್ಲಿ ಕಿರಿಕಿರಿ ಅನುಭವಿಸುತ್ತಾರೆ.
Related Articles
ನೀರಿನ ಪ್ರಮಾಣ ಕಡಿಮೆ ಇದ್ದ ಕಾರಣ ಡಿಸೆಂಬರ್ ತಿಂಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ತಿಂಗಳಾಂತ್ಯಕ್ಕೆ ಅಥವಾ ಎಪ್ರಿಲ್ 15ರೊಳಗೆ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ.
-ಗಣೇಶ್, ನಗರಸಭೆ ಎಂಜಿನಿಯರ್
Advertisement