Advertisement

Davanagere; ಟೈರ್ ಸಿಡಿದು ಸೇತುವೆ ಮೇಲಿಂದ ಉರುಳಿದ ಕಾರು:ಇಬ್ಬರು ಮೃತ್ಯು

10:50 PM May 05, 2024 | Team Udayavani |

ದಾವಣಗೆರೆ: ಟೈರ್ ಸಿಡಿದು ಸೇತುವೆ ಮೇಲಿಂದ ಕಾರು ಉರುಳಿ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ದಾವಣಗೆರೆ ತಾಲೂಕಿನ ಹುಣಸೇಕಟ್ಟೆ ಬಳಿ ಭಾನುವಾರ ರಾತ್ರಿ ಸಂಭವಿಸಿದೆ.

Advertisement

ಹರಿಹರ ತಾಲ್ಲೂಕಿನ ಸಾರಥಿ ಗ್ರಾಮದ ನಿವಾಸಿ ಕೊಟ್ರೇಶಪ್ಪ (60) ಹುಬ್ಬಳ್ಳಿಯ ಈರಮ್ಮ (54) ಮೃತಪಟ್ಟವರು. ಅಪಘಾತದಲ್ಲಿ ಪುಷ್ಪಾ ಅವರಿಗೆ ಗಂಭೀರ ಗಾಯಗಳಾಗಿವೆ.

ದಾವಣಗೆರೆಯ ಕೆಎಚ್‌ಬಿ ಕಾಲೊನಿಯ ನಿವಾಸಿ ಕೊಟ್ರೇಶಪ್ಪ‌ ಮದುವೆ ಮುಗಿಸಿ ಕೊಂಡು ಈರಮ್ಮ ಅವರ ಜೊತೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅತಿ ವೇಗವಾಗಿ ಚಲಿಸುತ್ತಿದ್ದ ಕಾರಿನ ಟೈರ್ ಸಿಡಿದು, ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಪಲ್ಟಿಯಾಗಿದೆ. ‌ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next