Advertisement
ಜಿಲ್ಲಾ ವಿಶ್ವಕರ್ಮ ಸಮಾಜದಿಂದ ನಗರದ ಕನಕ ಸಮುದಾಯ ಮಂಗಲ ಭವನದಲ್ಲಿ ರವಿವಾರ ನಡೆದ ಜಿಲ್ಲಾಮಟ್ಟದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಹಾಗೂ ಶಿಲ್ಪಿಗಳಿಗೆ ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಶಿಲ್ಪ ಕಲಾಕೃತಿಗಳಿಂದ ಸಿರಿತನ ಪಡೆದ ಬೇಲೂರು, ಹಳೆಬೀಡು, ಬಾದಾಮಿ, ಪಟ್ಟದಕಲ್ಲು, ಐಹೊಳಿ, ಹಂಪಿಯಲ್ಲಿ ಶಿಲ್ಪಕಲೆಗಳ ಚಿತ್ರಣವನ್ನು ಸವಿಯಲು ದೇಶ, ವಿದೇಶದ ಪ್ರವಾಸಿಗರು ಆಗಮಿಸುತ್ತಾರೆ. ಇದು ನಮ್ಮ ಸಮಾಜದ ಹಿರಿಯರ ಕಲಾವೈಭವಕ್ಕೆ ಸಾಕ್ಷಿಯಾಗಿದೆ ಎಂದರು.
ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಮಾತನಾಡಿ, ಹಿಂದುಳಿದ ಸಮುದಾಯಗಳಿಗೆ ಸರಕಾರದ ಸಹಾಯ ಹಸ್ತ ಅವಶ್ಯಕವಾಗಿದೆ. ಸಮುದಾಯ ಮುಂದಿನ ಗುರಿ ಇರಿಸಿಕೊಂಡು ಸಾಗಿದಾಗ ಮಾತ್ರ ಎತ್ತರವಾಗಿ ಬೆಳೆಯಲು ಸಾಧ್ಯ ಎಂದರು.
ವಿಶ್ವಕರ್ಮ ಸಮುದಾಯದ ಸ್ವಾಮೀಜಿ ದೇವದುರ್ಗ ಸಂಸ್ಕೃತಿ ಸಂಸ್ಥಾನ ಪೀಠದ ಮೌನೇಶ್ವರ ಸ್ವಾಮೀಜಿ, ಅಜೇಂದ್ರ ಸ್ವಾಮೀಜಿ, ಯಾದಗಿರಿಯ ಶ್ರೀನಿವಾಸ ಸ್ವಾಮೀಜಿ, ತುಮಕೂರಿನ ನೀಲಕಂಠಾಚಾರ್ಯ ಸ್ವಾಮೀಜಿ, ಗುಲ್ಬರ್ಗದ ದುಡ್ಡಂದ್ರೆ ಸ್ವಾಮೀಜಿ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಸಮಾಜದ ಹಿರಿಯ ಮುಖಂಡ ಶ್ರೀಶೈಲ ಪತ್ತಾರ, ನಿರುಪಾದೆಪ್ಪ ಗುಡಿಹಾಳ ಮಾತನಾಡಿದರು
ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಕೆಪಿಸಿಸಿ ಕಾರ್ಯದರ್ಶಿ ಕೆ. ಕರಿಯಪ್ಪ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ, ರಾಯಚೂರು ವಿಶ್ವಕರ್ಮ ಸಮಾಜ ಜಿÇ್ಲಾಧ್ಯಕ್ಷ ಗುರು ವಿಶ್ವಕರ್ಮ, ವಿಶ್ವಕರ್ಮ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಕಾಳಾಚಾರ ವಿಶ್ವಕರ್ಮ, ಸಿ. ಪಂಚಾಳ ವಿಶ್ವಕರ್ಮ, ಸಮಾಜದ ತಾಲೂಕು ಅಧ್ಯಕ್ಷ ವೀರಭದ್ರಪ್ಪ ವಿಶ್ವಕರ್ಮ ಹಂಚಿನಾಳ, ಗೌರವಾಧ್ಯಕ್ಷ ವೀರೇಶ ದೇವರಗುಡಿ, ಜಿÇ್ಲಾ ಸದಸ್ಯ ಸೋಮಣ್ಣ ಸುಕಾಲಪೇಟೆ, ಯುವ ಘಟಕ ಅಧ್ಯಕ್ಷ ನಾಗರಾಜ, ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಗಣೇಶ ಸೇರಿ ವಿವಿಧ ತಾಲೂಕು ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಶ್ವಕರ್ಮ ಸಮುದಾಯದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.