Advertisement

ತುಂಗಭದ್ರಾ ಜಲಾಶಯದಲ್ಲಿ ಜುಲೈ 5ಕ್ಕೆ ಹೂಳಿನ ಜಾತ್ರೆ 

06:00 AM Jun 27, 2018 | |

ಬಳ್ಳಾರಿ: ರೈತ ಹುತಾತ್ಮ ದಿನಾಚರಣೆ ನಿಮಿತ್ತ ಸತತ ಎರಡನೇ ವರ್ಷ ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳು ತೆರವುಗೊಳಿಸಲು ನಿರ್ಧರಿಸಲಾಗಿದೆ. ಜು.5 ರಂದು ಸಾಂಕೇತಿಕವಾಗಿ ಒಂದು ದಿನ ಮಟ್ಟಿಗೆ ಹೂಳಿನ ಜಾತ್ರೆ ಹಮ್ಮಿಕೊಳ್ಳ ಲಾಗು
ವುದು ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ ದರೂರು ಪುರುಷೋತ್ತಮಗೌಡ ತಿಳಿಸಿದರು.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೂಳಿನ ಜಾತ್ರೆಯನ್ನು ಈ ಬಾರಿ ಸಾಂಕೇ ತಿಕವಾಗಿ ಮಾತ್ರ
ಹಮ್ಮಿಕೊಳ್ಳಲಾಗುತ್ತಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಹೂಳೆತ್ತುವ ಕಾರ್ಯ ನಡೆಯಲಿದೆ. ಇದರಲ್ಲಿ ಅಂದಾಜು ನೂರು ಟ್ರ್ಯಾಕ್ಟರ್‌, ನಾಲ್ಕು ಜೆಸಿಬಿ ಯಂತ್ರ, ಟಿಪ್ಪರ್‌ಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು. ಒಂದು ದಿನದ ಹೂಳಿನ ಜಾತ್ರೆ
ಯಲ್ಲಿ ಜಲಾಶಯ ವ್ಯಾಪ್ತಿಯ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಮಠಾಧೀಶರು, ಜನಪ್ರತಿನಿಧಿಗಳು, ಸಾವಿರಾರು ರೈತರು ಪಾಲ್ಗೊಳ್ಳಲಿದ್ದಾರೆ. ಅಲ್ಲದೇ, ಕಳೆದ ವರ್ಷ ಕೇವಲ ವಾರಕ್ಕೆ ಸೀಮಿತವಾಗಿದ್ದ ಹೂಳಿನ ಜಾತ್ರೆ, ದಾನಿಗಳ ದೇಣಿಗೆಯಿಂದ ತಿಂಗಳ ಕಾಲ ನಡೆಯಿತು. ಆದರೆ, ಪ್ರಸಕ್ತ ವರ್ಷ ಒಂದು ದಿನ ಮಾತ್ರ ಹೂಳು ತೆಗೆಯಲಾಗುತ್ತಿದ್ದು, ಹೂಳು ತೆಗೆಯಲು ದಾನಿಗಳು ದೇಣಿಗೆ ನೀಡಿದರೆ, ಆ ಹಣವನ್ನು ಮೂರು ಜಿಲ್ಲೆಗಳ ರೈತರೊಂದಿಗೆ ಚರ್ಚಿಸಿ, ಜಂಟಿ ಖಾತೆಯಲ್ಲಿ ಇಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಜುಲೈನಲ್ಲಿ ಲೋಕಸಭಾ ಅಧಿವೇಶನ ನಡೆಯಲಿವೆ. ಜಲಾಶಯದಲ್ಲಿದ್ದ ಹೂಳು ತೆಗೆಯುವಂತೆ ರಾಯಚೂರು, ಕೊಪ್ಪಳ ಸಂಸದರನ್ನು ಭೇಟಿಯಾಗಿ ಕೇಂದ್ರದ ಗಮನ ಸೆಳೆಯಲಾಗುತ್ತದೆ. ಈಗಾಗಲೇ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಯವರಿಗೆ ಮನವಿ ಸಲ್ಲಿಸಲಾಗಿದೆ. ಇದೀಗ ಹೂಳು ತೆಗೆಯುವ ಮೂಲಕ ಪುನಃ ಅವರ ಗಮನ
ಸೆಳೆಯಲಾಗುತ್ತದೆ ಎಂದು ತಿಳಿಸಿದರು.

ರೈತ ಮುಖಂಡರಾದ ಕೊಂಚಿಗೇರಿ ಮಲ್ಲಪ್ಪ, ಮಸೀದಿಪುರ ಬಸವನಗೌಡ, ಶಾನವಾಸಪುರ ಶರಣನಗೌಡ, ಮುಷ್ಟಗಟ್ಟೆ
ಭೀಮನಗೌಡ, ಟಿ.ರಂಜಾನ್‌ಸಾಬ್‌, ಗೋವಿಂದಪ್ಪ, ಕರೂರು ರಾಮನಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next