ಬದುಕಿನ ಪ್ರತಿ ಹೆಜ್ಜೆಯಲ್ಲಿಯೂ ನಂಬಿಕೆ ಮುಖ್ಯ. ದೇಹದಿಂದ ಆತ್ಮತೊರೆದಾಗ ಮಾತ್ರ ಜೀವನ ಅಂತ್ಯವಾಗುತ್ತದೆ. ಬ್ರಹ್ಮನು ಪ್ರತಿಯೋರ್ವ ವ್ಯಕ್ತಿಯಲ್ಲಿಯೂ ಒಂದು ಶಕ್ತಿಯನ್ನು ಇಟ್ಟಿದ್ದಾನೆ. ಅದೇ ನಂಬಿಕೆ.
ಆ ಬೆಲೆಬಾಳುವ ವಜ್ರವನ್ನು ವ್ಯಕ್ತಿಯು ತನ್ನದಾಗಿಸಿಕೊಂಡರೆ ಆತ ಯಾರಿಗೂ ಹೆದರಬೇಕಿಲ್ಲ. ಒಳ್ಳೆಯ ಕೆಲಸ ಕಾರ್ಯಗಳಿಗೆ ಮುನ್ನಡೆಯಲು ನಂಬಿಕೆ ಮುಖ್ಯ.
ಇರುವೆಗಳು ಮರದ ಬುಡಗಳಲ್ಲಿ ವಾಸಿಸುತ್ತಿರುತ್ತವೆ. ಒಂದು ಇರುವೆ ಹೇಳಿತು, ನೀರು ತೊರೆಯಿಂದ ಹರಿದು ಬಂದಾಗ ನಾವು ನೀರಿನಲ್ಲಿ ಕೊಚ್ಚಿಕೊಂಡು ಹೋಗಬೇಕಾಗುತ್ತದೆ. ಜೀವವನ್ನು ಉಳಿಸಿಕೊಳ್ಳಲು ಏನಾದರೂ ಪ್ರಯತ್ನಪಡಬೇಕು. ಏನು ಮಾಡುವುದು ಎಂದು ಇರುವೆಗಳು ಯೋಚಿಸಿದವು.
ಒಂದು ಬಾರಿ ಜೋರು ಮಳೆ ಬಂದಾಗ ಅಲ್ಲೇ ಪಕ್ಕದಲ್ಲಿ ಇದ್ದ ಇರುವೆಗಳ ಗುಂಪೊಂದು ಮರ ಹತ್ತಿದವು. ಮರ ಹತ್ತುವ ಇರುವೆಗಳಿಗೆ ಇನ್ನೊಂದು ಗುಂಪಿನ ಇರುವೆಗಳು ಅಪಹಾಸ್ಯ ಮಾಡಿದವು.
ಆದರೆ ಆವತ್ತು ಜೋರು ಮಳೆ ಬಂದು ಬುಡದಲ್ಲಿದ್ದ ಇರುವೆಗಳು ಕೊಚ್ಚಿಕೊಂಡು ಹೊರಟವು. ಆಗ ಎಚ್ಚರಗೊಂಡ ಕೆಲವು ಇರುವೆಗಳು ಮರ ಹತ್ತಲು ಪ್ರಯತ್ನಿಸಿದವು. ಕೆಲವು ವಿಫಲವಾಗಿ ನೀರು ಪಾಲಾದವು. ಪ್ರಾಣ ಉಳಿಸಿಕೊಳ್ಳುವ ನಿರ್ಧಾರವನ್ನು ಮೊದಲೇ ಮಾಡಿ ಮರದ ಮೇಲೆ ನಂಬಿಕೆಯಿಟ್ಟು ಏರಿದ್ದರೆ ಯಾವುದೇ ತೊಂದರೆಯಾಗುತ್ತಿರಲಿಲ್ಲ.
ಆದರೆ ಅವರು ಅಪಹಾಸ್ಯ ಮಾಡಿ, ಕೆಳಗೆ ಉಳಿದದ್ದಕ್ಕೆ ನೀರು ಪಾಲಾದವು ಎಂಬುದು ತಿಳಿಯಬೇಕು. ಈ ಕಥೆ ಯಿಂದ ನಾವು ತಿಳಿಯುದೇನೆಂದರೆ ಬದುಕಿನಲ್ಲಿ ನಂಬಿಕೆ ಎನ್ನುವ ಸೇತುವೆಯನ್ನು ಕಟ್ಟಿಕೊಂಡು ಹೆಜ್ಜೆ ಯಿಟ್ಟಾಗ ಗುರಿ ತಲುಪಲು ಸಾಧ್ಯ. ನಂಬಿಕೆಯೊಂದಿಗೆ ಪ್ರಯತ್ನ ಎನ್ನುವ ಬೆಳಕು ಚೆಲ್ಲಿದಾಗ ನಂಬಿಕೆಯು ಬೆಳಕಿನತ್ತ ಪಯಣವನ್ನು ನಡೆಸುತ್ತದೆ. ಗುರಿಯನ್ನು ಸುಲಭವಾಗಿ ತಲುಪಬಹುದು.
ನಿವೇದಿತಾ, ಜಾರ್ಕಳ ಮುಂಡ್ಮಿ