Advertisement

Haryana ಸರಕಾರ ನೀಡಿದ ಉನ್ನತ ಹುದ್ದೆಯ ಆಫರ್ ನಯವಾಗಿ ತಿರಸ್ಕರಿಸಿದ ಸರಬ್ಜೋತ್

07:00 PM Aug 10, 2024 | Team Udayavani |

ಅಂಬಾಲಾ( ಹರ್ಯಾಣ): ಪ್ಯಾರಿಸ್ ಒಲಿಂಪಿಕ್ ಕಂಚಿನ ಪದಕ ವಿಜೇತ ಸರಬ್ಜೋತ್ ಸಿಂಗ್ ಅವರಿಗೆ ದೊಡ್ಡ ಸಾಧನೆ ಪರಿಗಣಿಸಿ ಹರ್ಯಾಣ ಸರಕಾರವು ಕ್ರೀಡಾ ಇಲಾಖೆಯ ಉಪನಿರ್ದೇಶಕ ಹುದ್ದೆಯ ಆಫರ್ ನೀಡಿದೆ. ಆದರೆ ಸರಕಾರದ ಆಫರ್ ಅನ್ನು ನಯವಾಗಿ ತಿರಸ್ಕರಿಸಿ ತನ್ನ ಗುರಿ ಬೇರೆಯೇ ಇದೆ ಎಂದು 22 ರ ಹರೆಯದ ಕ್ರೀಡಾಪಟು ಹೇಳಿದ್ದಾರೆ.

Advertisement

ಸರಬ್ಜೋತ್ ಸಿಂಗ್ “ಕೆಲಸ ಉತ್ತಮವಾಗಿದೆ ಆದರೆ ನಾನು ಈಗ ಅದನ್ನು ಮಾಡಲು ಇಷ್ಟ ಪಡುವುದಿಲ್ಲ. ನಾನು ಮೊದಲು ನನ್ನ ಶೂಟಿಂಗ್‌ನಲ್ಲಿ ಕೆಲಸ ಮಾಡಲು ಬಯಸುತ್ತೇನೆ. ನನ್ನ ಮನೆಯವರೂ ನನಗೆ ತಕ್ಕ ಕೆಲಸ ಕೊಡಿ ಎಂದು ಕೇಳುತ್ತಿದ್ದಾರೆ ಆದರೆ ನಾನು ಶೂಟಿಂಗ್ ಮುಂದುವರಿಸಬೇಕೆಂದುಕೊಂಡಿದ್ದೇನೆ. ನಾನು ತೆಗೆದುಕೊಂಡ ಕೆಲವು ನಿರ್ಧಾರಗಳಿಗೆ ವಿರುದ್ಧವಾಗಿ ಹೋಗಲು ನಾನು ಬಯಸುವುದಿಲ್ಲ, ಆದ್ದರಿಂದ ನಾನು ಈಗಲೇ ಕೆಲಸಕ್ಕೆ ಸೇರಲು ಸಾಧ್ಯವಿಲ್ಲ” ಎಂದು ತಮ್ಮ ಗುರಿಗೆ ಬದ್ಧರಾಗಿದ್ದಾರೆ.

ಸರಬ್ಜೋತ್ ಸಿಂಗ್ ಅವರು 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡದಲ್ಲಿ ಮನು ಭಾಕರ್ ಅವರೊಂದಿಗೆ ಕಂಚಿನ ಪದಕ ಗೆದ್ದಿದ್ದರು.

ಹರಿಯಾಣ ಸಿಎಂ ನಯಾಬ್ ಸೈನಿ ಅವರು ಅವರು ಸರಬ್ಜೋತ್ ಸಿಂಗ್ ಮತ್ತು ಮನು ಭಾಕರ್ ಅವರನ್ನು ಅಭಿನಂದಿಸಿದ್ದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next