Advertisement

ಜೆಡಿಎಸ್‌, ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆ

09:47 PM May 12, 2019 | Lakshmi GovindaRaj |

ಆನೇಕಲ್‌: ಪಟ್ಟಣವನ್ನು ಅಭಿವೃದ್ಧಿಯಲ್ಲಿ ಮಾದರಿಯಾಗಿ ಮಾಡಿದ ದಿವಂಗತ ಎಂ ಎಸ್‌ಅಶ್ವಥ್‌ ನಾರಾಯಣ್‌ಅವರ ಹೆಸರು ಅಜರಾಮರ ಎಂದು ಸಂಸದ ಡಿ.ಕೆ ಸುರೇಶ್‌ ಹೇಳಿದರು.

Advertisement

ಅವರು ಆನೇಕಲ್‌ ಪಟ್ಟಣದ ಶ್ರೀ ರಾಮಕುಟೀರದಲ್ಲಿ ಕಾಂಗ್ರೆಸ್‌ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಜೆಡಿಎಸ್‌ ಪಕ್ಷವನ್ನು ತೊರೆದು ಪುರಸಭೆ ಮಾಜಿ ಸದಸ್ಯ ಜೆಡಿಎಸ್‌ ಮುಖಂಡ ಪದ್ಮನಾಭ್‌ ಹಾಗೂ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದ ಬಿಜೆಪಿ ಪಕ್ಷದ ನಗರ ಬಿಜೆಪಿ ಮಾಜಿ ಅಧ್ಯಕ್ಷ ಶಿವರಾಮ್‌ ನೇತೃತ್ವದಲ್ಲಿ ನೂರಾರು ಜನರನ್ನು ಕಾಂಗ್ರೆಸ್‌ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.

ಪುರಸಭೆ ಮಾಜಿ ಅಧ್ಯಕ್ಷ ಪದ್ಮನಾಭ್‌ ಸಹೋದರ ದಿವಂಗತ ಅಶ್ವಥ್‌ನಾರಾಯಣ್‌ ಆನೇಕಲ್‌ ಪಟ್ಟಣಕ್ಕೆ ಆದರ್ಶನಿಯ ವ್ಯಕ್ತಿ. ಇಂತಹ ವ್ಯಕ್ತಿಗಳು ನಮ್ಮ ಜನಪ್ರತಿನಿಧಿಗಳಾದರೆ ಅಭಿವೃದ್ಧಿಗೆ ಹೆಚ್ಚಿನ ಸಹಾಯವಾಗುತ್ತದೆ ಈ ನಿಟ್ಟಿನಲ್ಲಿ ಅವರ ಸಹೋದರ ಪದ್ಮನಾಭ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಮುಂದಿನ ದಿನಗಳಲ್ಲಿ 27 ವಾರ್ಡಗಳಲ್ಲಿ ಎಲ್ಲಾ ಸ್ಥಾನವನ್ನು ಗೆಲ್ಲುವ ಮೂಲಕ ಆನೇಕಲ್‌ ಪಟ್ಟಣವನ್ನು ಸುಂದರವನ್ನಾಗಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಶಾಸಕ ಬಿ ಶಿವಣ್ಣ ಮಾತನಾಡಿ, ಆನೇಕಲ್‌ನಲ್ಲಿ 18 ವರ್ಷ ಆಡಳಿತ ನಡೆಸಿದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಸಚಿವರಾಗಿ ಆನೇಕಲ್‌ ತಾಲೂಕು ಯಾವುದು ನೆನಪಿಡುವ ಕಾಮಗಾರಿಯನ್ನು ಮಾಡಿ ತೋರಿಸುವುದರಲ್ಲಿ ವಿಫ‌ಲರಾಗಿದ್ದಾರೆ. ಆದರೆ, ಕಳೆದ 5 ವರ್ಷಗಳಿಂದ ಆನೇಕಲ್‌ ತಾಲೂಕಿನಲ್ಲಿ ನಾವು ಅಭಿವೃದ್ಧಿಯನ್ನು ಸಾಧಿಸಿ ತೋರಿಸಿದ್ದೇವೆ. ಒಂದಷ್ಟು ಕೆಲಸಗಳು ಜನರಿಗೆ ಕಾಣಸಿಗುತ್ತಿವೆ. ಅಭಿವೃದ್ಧಿ ಮೂಲಕ ಆನೇಕಲ್‌ ತಾಲೂಕು ಎರಡನೇ ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಸಫ‌ಲರಾಗಿದ್ದೇವೆ ಎಂದು ಹೇಳಿದರು.

ಅಶ್ವತ್ಥ್ ನಾರಾಯಣ್‌ ಸ್ಮರಣೆ: ಜೆಡಿಎಸ್‌ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಪುರಸಭಾ ಸದಸ್ಯ ಪದ್ಮನಾಭ್‌ ಮಾತನಾಡಿ, ಇಷ್ಟು ದಿನ ಜೆಡಿಎಸ್‌ ಪಕ್ಷದಲ್ಲಿ ದುಡಿಯಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ನಾವು ಅಭಿವೃದ್ಧಿಗೆ ಆದ್ಯತೆ ನೀಡುವವರು ನಮ್ಮ ಸಹೋದರ ಅಶ್ವತ್ಥ್ ನಾರಾಯಣ್‌ ಅವರು ಆನೇಕಲ್‌ ಪಟ್ಟಣವನ್ನು ಅಭಿವೃದ್ಧಿ ಮಾಡುವಲ್ಲಿ ಶ್ರಮಿಸಿದರು.

Advertisement

ಅವರು, ಇನ್ನಷ್ಟು ವರ್ಷ ಬದುಕಿದಿದ್ದರೆ ಆನೇಕಲ್‌ ಪಟ್ಟವನ್ನು ಮತ್ತಷ್ಟು ಅಭಿವೃದ್ಧಿ ಮಾಡುತ್ತಿದ್ದರು. ಆದರೆ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಅಭಿವೃದ್ಧಿಗೆ ಆದ್ಯತೆ ನೀಡುವ ಸಲುವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಮುಂದಿನ ದಿನಗಳಲ್ಲಿ ಆನೇಕಲ್‌ ಪಟ್ಟಣದಲ್ಲಿ ಅಭಿವೃದ್ಧಿಯನ್ನು ಮಾಡುವ ಮೂಲಕ ಅಶ್ವತ್ಥ್ ನಾರಾಯಣ್‌ಅವರ ಹೆಸರನ್ನು ಸದಾಜನಮಾನಸದಲ್ಲಿ ಇರುವಂತೆ ಮಾಡಲಿದ್ದೇವೆ ಎಂದು ಹೇಳಿದರು.

ಬಿಜೆಪಿಗೆ ಅಭಿವೃದ್ಧಿ ಕಾಳಜಿ ಇಲ್ಲ: ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್‌ ಸೇರ್ಪಡೆಯಾದ ಬಿಜೆಪಿ ಮಾಜಿ ಅಧ್ಯಕ್ಷ ಶಿವರಾಂ ಮಾತನಾಡಿ, ಆನೇಕಲ್‌ ಪಟ್ಟಣದಲ್ಲಿ ಹದಿನೆಂಟು ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ ಅವರ ಅಭಿವೃದ್ಧಿಗೆ ಆದ್ಯತೆ ಏನು ಮಾಡಿಲ್ಲ. ಒಂದು ಬೀದಿ ದೀಪವನ್ನು ಹಾಕಿಸಲು ಆಗದ ಪುರಸಭಾ ಸದಸ್ಯರ ಜೊತೆಗೆ ಇರುವ ಬದಲು ಅಭಿವೃದ್ಧಿಯ ಮೂಲ ಮಂತ್ರವನ್ನು ಪಡೆದಿರುವ ಶಿವಣ್ಣನವರ ಜೊತೆಯಲ್ಲಿ ಇರುವುದು ಒಳ್ಳೆಯದು ಎಂದು ನಿರ್ಧರಿಸಿ ಶಾಸಕರ ನೇತೃತ್ವದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದೇನೆ ಎಂದರು.

ಜೆಡಿಎಸ್‌ ತೊರೆದು ಪುರಸಭಾ ಮಾಜಿ ಸದಸ್ಯ ರೇಣುಕಾ ಮಲ್ಲಿಕಾರ್ಜುನ್‌, ಚಂದ್ರಿಕಾ ಹನುಮಂತರಾಜು ಸೇರಿದಂತೆ ನೂರಾರು ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್‌ಅಧ್ಯಕ್ಷ ಕೃಷ್ಣಪ್ಪ , ಮಾಜಿ ಅಧ್ಯಕ್ಷ ರಮೇಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಜಣ್ಣ, ಚಂದ್ರಪ್ಪ ಕಾಂಗ್ರೆಸ್‌ ಮುಖಂಡರಾದ ಮುರಳಿ, ಶ್ರೀನಿವಾಸ್‌, ವೆಂಕಟೇಶ್‌, ಬಿ.ಪಿ. ರಮೇಶ್‌, ಸುರೇಶ್‌, ಅರೆಹಳ್ಳಿ ರಘು, ಅಪ್ಪಾಜಪ್ಪ ಶ್ರೀನಿವಾಸ್‌ ಪ್ರಸಾದ್‌ರ ಉಷಾ ಮನೋಹರ್‌ ಶೈಲೇಂದ್ರಕುಮಾರ್‌ ಇತರರು ಹಾಜರಿದ್ದರು.

ಅಭಿವೃದ್ಧಿ ಮಂತ್ರ: ಬಿಜೆಪಿ ಆನೇಕಲ್‌ ಪಟ್ಟಣ ಅಭಿವೃದ್ಧಿ ಮಾಡುವಲ್ಲಿ ಆಸಕ್ತಿ ತೋರದೆ ಆನೇಕಲ್‌ ತೀರಾ ಹಿಂದುಳಿದಿತ್ತು ಅಭಿವೃದ್ಧಿಯಲ್ಲಿ ಕಳೆದ ಐದು ವರ್ಷಗಳಲ್ಲಿ ರಸ್ತೆ ಚರಂಡಿ, ಕಾವೇರಿ ಕುಡಿವ ನೀರು ಸೇರಿದಂತೆ ಏತ ನೀರಾವರಿ ಕಾಮಗಾರಿ ಪ್ರಗತಿಯಲ್ಲಿದ್ದು ಅಭಿವೃದ್ಧಿಯ ಮಂತ್ರ ಎಂಬಂತೆ ನಾವೆಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಿದ್ದರಿಂದ ಆನೇಕಲ್‌ ಅಭಿವೃದ್ಧಿಪಥದಲ್ಲಿ ಸಾಗಿದೆ. ಬಿಜೆಪಿ ಅವರಿಗೆ ಸುಳ್ಳು ಹೇಳುವ ಕೆಲಸ ಬಿಟ್ಟರೆ ಬೇರೆನು ಅವರ ಸಾಧನೆ ಇಲ್ಲ, ಅವರಿಗೆ ಅಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲ,ಆದರೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಬಡವರ ದೀನ ದಲಿತರ ಏಳಿಗೆಗೆ ಹಗಲಿರುಳು ಶ್ರಮಿಸುತ್ತಿದೆ ಎಂದು ಡಿ.ಕೆ. ಸುರೇಶ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next